ಸುಳ್ಳು ಕಂಪ್ಲೇಂಟ್ ನಿಂದ ಮಣ್ಣು ಪಾಲಾದ ಮಾನವನ್ನು ಮತ್ತೆ ವಾಪಸ್ ತರಲಿಕ್ಕೆ ಆಗತ್ತೇನ್ರಿ?- ಬಿಜೆಪಿ ಸಂಸದ

ದೇಶಾದ್ಯಂತ ನಡೆಯುತ್ತಿರುವ ಮೀಟೂ ಅಭಿಯಾನದ ವಿರುದ್ದ ಮತ್ತೆ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ಉದಿತ್ ರಾಜ್ ಸುಳ್ಳು ದೂರಿನಿಂದ ಹರಾಜಾದ ಮಾನವನ್ನು ವಾಪಸ್ ತರಲಿಕ್ಕಾಗುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

Updated: Oct 11, 2018 , 08:08 PM IST
ಸುಳ್ಳು ಕಂಪ್ಲೇಂಟ್ ನಿಂದ ಮಣ್ಣು ಪಾಲಾದ ಮಾನವನ್ನು ಮತ್ತೆ ವಾಪಸ್ ತರಲಿಕ್ಕೆ ಆಗತ್ತೇನ್ರಿ?- ಬಿಜೆಪಿ ಸಂಸದ

ನವದೆಹಲಿ: ದೇಶಾದ್ಯಂತ ನಡೆಯುತ್ತಿರುವ ಮೀಟೂ ಅಭಿಯಾನದ ವಿರುದ್ದ ಮತ್ತೆ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ಉದಿತ್ ರಾಜ್ ಸುಳ್ಳು ದೂರಿನಿಂದ ಹರಾಜಾದ ಮಾನವನ್ನು ವಾಪಸ್ ತರಲಿಕ್ಕಾಗುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಸಂಸದ ಉದಿತ್ ರಾಜ್ "ಮಹಿಳೆಯ ಲಿಖಿತ ಅಥವಾ ಮೌಖಿಕ ಆಧಾರದ ಮೇಲೆ ಲೈಂಗಿಕ ದೌರ್ಜನ್ಯದ ವಿಚಾರವಾಗಿ ನಿರ್ಧಾರ ತಗೆದುಕೊಂಡಿದ್ದೆ ಆದಲ್ಲಿ ಅಥವಾ ರಾಜೀನಾಮೆ ಕೇಳಿದ್ದೆ ಆದಲ್ಲಿ ಪೋಲಿಸ್ ಅಥವಾ ನ್ಯಾಯಾಂಗ ವ್ಯವಸ್ಥೆ ಅವಶ್ಯಕತೆಯೇ ಇಲ್ಲ .ಒಂದು ವೇಳೆ ಈ ಆರೋಪಗಳು ಸುಳ್ಳು ಎಂದು ಸಾಬೀತು ಆದಲ್ಲಿ ಹರಾಜಾದ ಮಾನವನ್ನು ಮತ್ತೆ ವಾಸ್ಪಸ್ ತರಲಿಕ್ಕೆ ಆಗುತ್ತಾ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಮೀಟೂ ಅಭಿಯಾನ ಸುಳ್ಳು ಪ್ರಚಾರ ಎಂದು ಅವರು ಖಂಡಿಸಿದ್ದರು.ದೇಶದಲ್ಲಿ  ಈ ಚಳುವಳಿ ಪ್ರಮುಖವಾಗಿ ತನುಶ್ರೀ ದತ್ತಾ  ಅವರು  ನಾನಾ ಪಟೇಕರ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡುವುದರ ಮೂಲಕ ಈ ಚಳುವಳಿ ಈಗ ವ್ಯಾಪಕವಾಗಿ ಹರಡಿದೆ.ಈ ಹಿನ್ನಲೆಯಲ್ಲಿ ಈಗ ಸಚಿವರು ಸುಳ್ಳು ಆರೋಪಗಳ ಕುರಿತಾಗಿ ಕಳವಳ ವ್ಯಕ್ತಪಡಿಸಿದ್ದಾರೆ.