ಲಖನೌ : ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಕ್ಫ್ ಬೋರ್ಡ್ ಅಡಿಯಲ್ಲಿ ನೋಂದಣಿಯಾಗಿರುವ ಎಲ್ಲಾ ಆಸ್ತಿಗಳ ತನಿಖೆಯನ್ನು ಕೈಗೊಳ್ಳಲು ನಿರ್ಧರಿಸಿದ್ದು, ಒಂದು ತಿಂಗಳೊಳಗೆ ಆಸ್ತಿಗಳ ಸಮೀಕ್ಷೆ ನಡೆಸಿ ವರದಿಗಳನ್ನು ಸಲ್ಲಿಸುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಿದೆ.
1995ರ ವಕ್ಫ್ ಕಾಯಿದೆಯನ್ನು ಉಲ್ಲಂಘಿಸಿ ಅಥವಾ ಉಸರ್, ಬಂಜಾರ್ ಮತ್ತು ಭೀತಾ ಜಮೀನುಗಳ ನೋಂದಣಿಗೆ ಅನುಮತಿ ನೀಡಿದ, ಏಪ್ರಿಲ್ 1989 ರ ಸರ್ಕಾರಿ ಆದೇಶದ ಅಡಿಯಲ್ಲಿ ವಕ್ಫ್ ಆಸ್ತಿಯಂತೆ ನೋಂದಾಯಿಸಲಾದ ಎಲ್ಲಾ ಆಸ್ತಿಗಳ ತನಿಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ ಎಂದು ಯುಪಿ ಸರ್ಕಾರದ ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: 3 ತಿಂಗಳ ಗರ್ಭಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ : ಮಹಿಳೆಗೆ ಗರ್ಭಪಾತ
ಈ ಸಂಬಂಧ ಯೋಗಿ ಆದಿತ್ಯನಾಥ್ ಸರ್ಕಾರದ ಉಪ ಕಾರ್ಯದರ್ಶಿ ಶಕೀಲ್ ಅಹಮದ್ ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕರು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆಯುಕ್ತರು, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳು, ಸಿಇಒ ಶಿಯಾ ಮತ್ತು ಸುನ್ನಿ ವಕ್ಫ್ ಮಂಡಳಿ ಮತ್ತು ಕಂದಾಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ವಕ್ಫ್‌ಗೆ ಸಂಬಂಧಿಸಿದ ಆಸ್ತಿಗಳ ಅಕ್ರಮ ಸ್ವಾಧೀನ ಮತ್ತು ವರ್ಗಾವಣೆಯನ್ನು ತಡೆಯಲು ಸರ್ಕಾರ ಮುಂದಾಗಿದೆ. ಈ ತಿಂಗಳ ಆರಂಭದಲ್ಲಿ, ಉತ್ತರ ಪ್ರದೇಶ ಸರ್ಕಾರವು ಅನಧಿಕೃತ ಮದರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿತ್ತು. ಅಲ್ಲದೆ, ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆಗಳನ್ನು ನೀಡಿತ್ತು.
ಇದನ್ನೂ ಓದಿ: SAIL ನಲ್ಲಿ 300 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ : ಮಾಹಿತಿಗೆ ಇಲ್ಲಿ ಪರಿಶೀಲಿಸಿ
ಇನ್ನು ಸರ್ಕಾರದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ರಾಜ್ಯಾದ್ಯಂತ ಮದರಸಾಗಳ ನಂತರ ಯೋಗಿ ಸರ್ಕಾರ ವಕ್ಫ್ ಮಂಡಳಿಯನ್ನು ಗುರಿಯಾಗಿಸುತ್ತಿದೆ. ಯಾರಾದರೂ ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ವಕ್ಫ್ ಆಸ್ತಿ ಎಂದು ನೋಂದಾಯಿಸಿದ್ದರೆ, ಅದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿ, ನ್ಯಾಯಾಧಿಕರಣಕ್ಕೆ ಹೋಗಿ.
ಈ ಕ್ರಮ ಮುಸ್ಲಿಮರ ಮೇಲಿನ ವ್ಯವಸ್ಥಿತ ಗುರಿ
ಆದಾಗ್ಯೂ, ಯುಪಿ ಸರ್ಕಾರದ ಇತ್ತೀಚಿನ ಕ್ರಮಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯಾದ್ಯಂತ ಮದರಸಾಗಳ ನಂತರ ಯೋಗಿ ಆಡಳಿತವು ಈಗ ವಕ್ಫ್ ಮಂಡಳಿಯನ್ನು ಗುರಿಯಾಗಿಸುತ್ತಿದೆ ಎಂದು ಹೈದರಾಬಾದ್ ಸಂಸದರು ಹೇಳಿದ್ದಾರೆ. “ಯಾರಾದರೂ ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ವಕ್ಫ್ ಆಸ್ತಿ ಎಂದು ನೋಂದಾಯಿಸಿದ್ದರೆ, ಅದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿ, ನ್ಯಾಯಾಧಿಕರಣಕ್ಕೆ ಹೋಗಿ. ಯುಪಿ ಸರ್ಕಾರ ವಕ್ಫ್ ಆಸ್ತಿಯನ್ನು ಗುರಿಯಾಗಿಟ್ಟುಕೊಂಡು ಅದನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದೆ. ಇಂತಹ ಉದ್ದೇಶಿತ ಸಮೀಕ್ಷೆ ಸಂಪೂರ್ಣವಾಗಿ ತಪ್ಪು. ನಾವು ಅದನ್ನು ಖಂಡಿಸುತ್ತೇವೆ. ಇದು ಮುಸ್ಲಿಮರ ಮೇಲಿನ ವ್ಯವಸ್ಥಿತ ಗುರಿಯಾಗಿದೆ ಎಂದು ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.