ದಲಿತರ ವೋಟ್ ಬ್ಯಾಂಕಿಗೋಸ್ಕರ ಅಂಬೇಡ್ಕರ್ ಅವರ ಮೇಲೆ ನಾಟಕದ ಪ್ರೀತಿಯನ್ನು ಬಿಜೆಪಿ ತೋರುಸುತ್ತಿದೆ"-ಖರ್ಗೆ

ಇತ್ತೀಚೆಗೆ ದಲಿತರ ವೋಟ್ ಬ್ಯಾಂಕಿಗೋಸ್ಕರ  ಅಂಬೇಡ್ಕರ್ ಅವರನ್ನು ನಾಟಕದ ಪ್ರೀತಿಯನ್ನು ಬಿಜೆಪಿ ತೋರುಸುತ್ತಿದೆ. ದಲಿತರೊಳಗಡೆ ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸ ಮಾಡ್ತ ಇದ್ದಾರೆ ಎಂದು ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.

Last Updated : Apr 27, 2023, 07:35 PM IST
  • ಜನರ ದುಡ್ಡು, ನಮ್ಮ ಸಂಪತ್ತಿನಿಂದ ಅದಾನಿ ಉಪಯೋಗಿಸುತ್ತಾ ಇದ್ದಾನೆ.
  • ಗುಜರಾತ್ ಬಂದರಿನಿಂದ ಗೋಲ್ಡ್, ಗಾಂಜಾ ಮತ್ತು ಡ್ರಗ್ಸ್ ಪೂರೈಕೆ ಆಗ್ತಾ ಇದೆ.
  • ಬಂದರು ಮತ್ತು ಏರ್ ಪೋರ್ಟ್ ಅದಾನಿಯ ಕೈವಶ ಆಗ್ತಾ ಇದೆ.
ದಲಿತರ ವೋಟ್ ಬ್ಯಾಂಕಿಗೋಸ್ಕರ  ಅಂಬೇಡ್ಕರ್ ಅವರ ಮೇಲೆ ನಾಟಕದ ಪ್ರೀತಿಯನ್ನು ಬಿಜೆಪಿ ತೋರುಸುತ್ತಿದೆ"-ಖರ್ಗೆ title=

ಗದಗ: ಇತ್ತೀಚೆಗೆ ದಲಿತರ ವೋಟ್ ಬ್ಯಾಂಕಿಗೋಸ್ಕರ  ಅಂಬೇಡ್ಕರ್ ಅವರನ್ನು ನಾಟಕದ ಪ್ರೀತಿಯನ್ನು ಬಿಜೆಪಿ ತೋರುಸುತ್ತಿದೆ. ದಲಿತರೊಳಗಡೆ ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸ ಮಾಡ್ತ ಇದ್ದಾರೆ ಎಂದು ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.

ಅವರು ಗದಗ ಜಿಲ್ಲೆಯ ರೋಣದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡುತ್ತಿದ್ದರು

ಇದೇ ಬರಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಅತ್ಯಂತ ಮಹತ್ವದ ಚುನಾವಣೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ನಾವು ದೇಶದಲ್ಲಿ ಗೆಲ್ಲುತ್ತೇವೆ. ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹತೆ ಮಾಡಿ ಬೀದಿಗೆ ಬರುವಂತೆ ಮಾಡಿದ್ದಾರೆ. ಅದೇ ರೀತಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು 1977ರಲ್ಲಿ ಕ್ಷುಲಕ ಕಾರಣದಿಂದ ಸಂಸದ ಸ್ಥಾನದಿಂದ ಅನರ್ಹತೆಗೊಳಿಸಿದ್ದರು. ಆದರೆ ಕರ್ನಾಟಕದಲ್ಲಿ 1979ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿ ಅವರನ್ನು ಗೆಲ್ಲಿಸಿ, ಇಡೀ ದೇಶದಲ್ಲಿ ಸಂಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು.

ಇದನ್ನೂ ಓದಿ: ಪಾರದರ್ಶಕ ಆಡಳಿತ ನೀಡಲು ಕಾಂಗ್ರೆಸ್‌ನ ಎಲ್ಲಾ ಪ್ರಕರಣಗಳು ಲೋಕಾಯುಕ್ತಕ್ಕೆ: ಬಿಜೆಪಿ

ಅದೇ ರೀತಿಯಾಗಿ 2024 ರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. 

ಈ ಸಮಾವೇಶದಲ್ಲಿ ನೆರಿದಿರುವ ಸಭಿಕರನ್ನು ನೋಡಿದರೆ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಎಸ್ ಪಾಟೀಲ್ 25000 ಮತಗಳ ಅಂತರದಿಂದ ಜಯಗಳಿಸುತ್ತಾರೆ.

ರಾಜ್ಯದ ಬಿಜೆಪಿ ಆಡಳಿತ ಎಂದರೆ ಅದೊಂದು ಕಮೀಷನ್ ಸರ್ಕಾರ ಎನ್ನುವಂತಾಗಿದೆ. ಶೇಕಡಾ 40% ಕೊಟ್ಟರೆ ಎಲ್ಲ ಕೆಲಸ ಆಗುತ್ತಿದ್ದವು. ಎಲ್ಲ ಕ್ಷೇತ್ರಗಳಲ್ಲೂ ಹಣ ಕೊಡದೇ ಯಾವುದೇ ಕೆಲಸಗಳು ಈ ಸರ್ಕಾರದ ಅವಧಿಯಲ್ಲಿ ಆಗಲಿಲ್ಲ. ಗುತ್ತಿಗೆದಾರರ ಬಿಲ್ ಕೂಡ ಇದುವರೆಗೂ ಕ್ಲಿಯರ್ ಆಗಿಲ್ಲ. ಇದನ್ನು ಸ್ವತಃ ಗುತ್ತಿಗೆದಾರರೇ ರಾಷ್ಟ್ರಪತಿ ಹಾಗೂ ಪ್ರಧಾನಿ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದಾರೆ.

ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮೋದಿ ಅವರೇ ಲಂಚ ಪಡೆಯುತ್ತಿರುವವರ ಜೊತೆಗೆ ಓಡಾಡ್ತಿದ್ದೀರಿ, ಹೊಗಳುತ್ತಿದ್ದೀರಿ, ನಾ ಖಾವೂಂಗ, ನಾ ಖಾನೇದೋಂಗಾ ಎಲ್ಲಿ ಹೋಯಿತು ಎಂದು ನಾ ಖಾವೂಂಗ ನಾ ಖಾನೇದೂಂಗಾ ಎನ್ನುವ ನರೇಂದ್ರ ಮೋದಿ ಕರ್ನಾಟಕದಲ್ಲಿ ಮಾತ್ರ ಖಾನೇವಾಲಾಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಪ್ರಧಾನಿ ಮೋದಿ ಅವರು ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಅಂತ ಕೇಳ್ತಾರೆ, ಆದರೆ ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನದ ಮೂಲಕ ಈ ದೇಶದಲ್ಲಿ ಪ್ರಜಾಪ್ರಭುತ್ವದ ಭದ್ರಬುನಾದಿ ಹಾಕಿದ ಕಾರಣದಿಂದಾಗಿಯೇ ಚಹಾ ಮಾರುವ ಮೋದಿಯಂತಹವರು ಈ ದೇಶದಲ್ಲಿ ಪ್ರಧಾನಿ ಆಗಿರುವುದು. ನನ್ನಂತಹ ಕೂಲಿ ಕಾರ್ಮಿಕನ ಮಗ ಇಂದು ದೇಶದ ಸಂಸತ್ತಿನ ಪ್ರತಿಪಕ್ಷ ನಾಯಕನಾಗಿರುವುದು. ಇದು ಯಾರ ಕೊಡುಗೆ ಗಾಂಧೀ, ನೆಹರೂ ಮತ್ತು ಅಂಬೇಡ್ಕರ್ ಅವರ ಕೊಡುಗೆ.

ಮಹಾತ್ಮ ಗಾಂಧಿ ಅವರನ್ನು ಇಡೀ ಜಗತ್ತೆ ಪ್ರೀತಿ ಮಾಡುತ್ತದೆ ಆದರೆ ಆರೆಸ್ಸೆಸ್ ಮತ್ತು ಬಿಜೆಪಿಯವರು ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಪ್ರೀತಿ ಮಾಡ್ತಾರೆ. ಗಾಂಧಿ, ನೆಹರೂ ಮತ್ತು ಅಂಬೇಡ್ಕರ್ ಅವರನ್ನು ಪ್ರೀತಿ ಮಾಡಲ್ಲ. ಇತ್ತೀಚೆಗೆ ದಲಿತರ ವೋಟ್ ಬ್ಯಾಂಕಿಗೋಸ್ಕರ  ಅಂಬೇಡ್ಕರ್ ಅವರನ್ನು ನಾಟಕದ ಪ್ರೀತಿಯನ್ನು ಬಿಜೆಪಿ ತೋರುಸುತ್ತಿದೆ. ದಲಿತರೊಳಗಡೆ ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸ ಮಾಡ್ತ ಇದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಸಂಘರ್ಷ, ಗಲಭೆಗಳಾಗುತ್ತವೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ನೀಡ್ತಾರೆ. ಇದು  ಕರ್ನಾಟಕದ ಜನತೆಗೆ ಮಾಡುತ್ತಿರುವ ಅವಮಾನ. ನಾವೇನು ಗೂಂಡಾಗಿರಿ ಮಾಡ್ತೇವಾ? ಕರ್ನಾಟಕದಲ್ಲಿ ಕಾಂಗ್ರೆಸ್ ಕಾಲದಲ್ಲಿ ಇದುವರೆಗೂ ಗುಜರಾತಿನ ರೀತಿಯ ದಂಗೆ  ನಡೆದಿಲ್ಲ. ಚುನಾವಣೆಯ ಈ ಸಂದರ್ಭದಲ್ಲಿ ಕಾಂಗ್ರೆಸ್ ಭರವಸೆಗಳ ಗ್ಯಾರಂಟಿ ನೀಡಿದರೆ ಬಿಜೆಪಿ ಪಕ್ಷವು ಬೆದರಿಕೆಗಳನ್ನು ಒಡ್ಡುತ್ತಿದೆ. ವ್ಯತ್ಯಾಸ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷದಿಂದ ಅಭಿವೃದ್ಧಿ ಮತ್ತು ಬಿಜೆಪಿಯಿಂದ ಗೂಂಡಾಗಿರಿ. ಕರ್ನಾಟಕದ ಪ್ರಜ್ಞಾವಂತ ಜನತೆ ಬಿಜೆಪಿಯ ಗೂಂಡಾಗಿರಿಗೆ ತಕ್ಕ ಪಾಠ ಕಲಿಸಬೇಕಾಗದೆ. 

ನೆಹರೂ ಅವರ ಪಂಚವಾರ್ಷಿಕ ಯೋಜನೆಯಲ್ಲಿ ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿ ಮಾಡಿದ ಕೊಡುಗೆ ಕಾಂಗ್ರೆಸ್ಸಿನ್ನದ್ದು, ಬಡ ಜನರರಿಗೆ ನರೇಗಾ ಯೋಜನೆಯನ್ನು ತಂದಿದ್ದು ಕಾಂಗ್ರಸ್.

ಪ್ರಧಾನಿ ಮೋದಿ ಇಡೀ ದೇಶದ ಪ್ರಧಾನಿ, ಇಡೀ ದೇಶಾಧ್ಯಂತ ಸುತ್ತಾಡತ್ತ ಇದ್ದಾರೆ. ನನ್ನನ್ನು ನೋಡಿ ಮತ ನೀಡಿ ಅಂತ ಕೇಳ್ತಾ ಇದ್ದಾರೆ ಇವರೇನು ಸ್ಪರ್ದಿಸಿತ್ತಾ ಇದ್ದಾರ? ಅಥಾವ ಇಲ್ಲಿಯೇನು ಮುಖ್ಯಮಂತ್ರಿ ಆಗ್ತಾರ? ಎಲ್ಲಿ ನೋಡಿದ್ದರೂ ಎಲ್ಲ ಚುನಾವಣೆಯಲ್ಲಿ ನನ್ನನ್ನು ನೋಡಿ ಮತ ಹಾಕಿ ಅನ್ನುವುದು ನಿಜಕ್ಕೂ ಹಾಸ್ಯಸ್ಪದ ಇಂತಹ ಆಸೆಬುರಕರು, ಕುರ್ಚಿಗಾಗಿ ಇಷ್ಟೊಂದು ಅಧಿಕಾರದ ಮೋಹ ಲಾಲಾಸೆ ಇರಬಾರದು.

ಮೋದಿ ಭರವಸೆ ನೀಡಿದ ಪ್ರತಿ ವ್ಯಕ್ತಿಗೆ 15 ಲಕ್ಷ ರೂ., ಎರಡು ಕೋಟಿ ಉದ್ಯೋಗ, ಕಪ್ಪುಹಣ ಹಿಂಪಡೆಯುವ ಭರವಸೆ ಏನಾಯಿತು ಆದರೆ ಇವು ಯಾವುದೂ ಆಗಿಲ್ಲ. ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ನಮ್ಮ ಯುವಕರು ಕೆಲಸ ಇಲ್ಲದೇ ಇದ್ದಾರೆ. ಮೋದಿ ಒಬ್ಬ ದೊಡ್ಡ ಸುಳ್ಳುಗಾರ. ನಾವು ಅಧೀಕಾರದಲ್ಲಿದ್ದಾಗ ನೀರಾವರಿ ಯೋಜನೆ, ರೈತಾಪಿ ವರ್ಗದ ಜನರಿಗೆ ಬೃಹತ್ ಯೋಜನೆಯನ್ನು ತಂದಿದ್ದೇವು. ಆದರೆ ಈ ಸರ್ಕಾರ ಒಂದೇ ಒಂದು ಯೋಜನೆಯನ್ನು ತರುವಲ್ಲಿ ಡಬಲ್ ಎಂಜಿನ್ ಸರ್ಕಾರ ವಿಫಲವಾಗಿದೆ.

ದೇಶದಲ್ಲಿ ಸಾಕ್ಷರತೆಯ ಮಟ್ಟವನ್ನು ಹೆಚ್ಚಿಸುವಲ್ಲಿ ಕಾಂಗ್ರೆಸ್ ಕೊಡುಗೆ ಅಪಾರ. ಮೋದಿ ಅವರು ಕೇವಲ ನೆಹರೂ ಮತ್ತು ಪರಿವಾರವನ್ನು ಕೇವಲವಾಗಿ ಮಾತಾಡುವುದೇ ಚಾಳಿಯಾಗಿದೆ. ದೇಶದ ವಿಜ್ಣಾನ ಮತ್ತು ತಂತ್ರಜ್ಞಾನ ಅಭಿವೃಧ್ಧಿಪಡಿಸುವಲ್ಲಿ ನೆಹರೂ ಪಾತ್ರ ಅತ್ಯಂತ ದೊಡ್ಡದ್ದು. ಇಂದಿರಾ ಗಾಂಧಿ ಅವರ ಸರ್ಕಾರ ಮೊದಲ ರಾಕಟ್ ಹಾರಸಿದ್ದು ಈಗಿನ ಮೋದಿ ಸರ್ಕಾರ ಏನೂ ಬಿಟ್ರು ನಾನೇ ಮಾಡಿದ್ದು ಅಂತ ಹೇಳೊದೇ ಇವರ ಸಾಧನೆ. ಇದೊಂದು ಇವರ ದೊಡ್ಡ ಸುಳ್ಳು ಹೇಳುವ ಚಟ. 

ಇದನ್ನೂ ಓದಿ: "ರಾಜ್ಯದಲ್ಲಿ ಚುನಾವಣಾ ನಡೆಸುತ್ತಿರುವುದು ಚುನಾವಣಾ ಆಯೋಗವೋ? ಭಾರತೀಯ ಜನತಾ ಪಕ್ಷವೋ?"

ಎರಡೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಆತ್ಮೀಯ ಸ್ನೇಹಿತರೊಬ್ಬರ ಸಂಪತ್ತು 13 ಪಟ್ಟು ಹೆಚ್ಚಾಗಿದೆ. ಮೋದಿಯವರು ಕೆಲವೇ ಜನರಿಗೆ ಪ್ರೋತ್ಸಾಹ ನೀಡ್ತಾರೆ. ಅದಾನಿ ಅವರಿಗೆ ಎಲ್ಲ ರೀತಿಯ ಸರ್ಪೋಟ್ ಮಾಡ್ತರೆ. 2014ರಲ್ಲಿ 50,000 ಕೋಟಿ ರೂ.ಗಳಾಗಿದ್ದರೆ 2020ರಲ್ಲಿ 2 ಲಕ್ಷ ಕೋಟಿ ರೂ. ಎರಡು ವರ್ಷಗಳಲ್ಲಿ ಹಠಾತ್ತನೆ 12 ಲಕ್ಷ ಕೋಟಿ ರೂಪಾಯಿ ಆಸ್ತಿ ಬಂದದ್ದು ಏನು ಮ್ಯಾಜಿಕ್, ಅದು ಸ್ನೇಹದ ಕೃಪೆಯಿಂದ? ಎಷ್ಟು ಸರ್ಕಾರದಿಂದ ದೊಡ್ಡು ಹೊಡದು ಇರಬೇಕು.

ಜನರ ದುಡ್ಡು, ನಮ್ಮ ಸಂಪತ್ತಿನಿಂದ ಅದಾನಿ ಉಪಯೋಗಿಸುತ್ತಾ ಇದ್ದಾನೆ. ಗುಜರಾತ್ ಬಂದರಿನಿಂದ ಗೋಲ್ಡ್, ಗಾಂಜಾ ಮತ್ತು ಡ್ರಗ್ಸ್ ಪೂರೈಕೆ ಆಗ್ತಾ ಇದೆ. ಬಂದರು ಮತ್ತು ಏರ್ ಪೋರ್ಟ್ ಅದಾನಿಯ ಕೈವಶ ಆಗ್ತಾ ಇದೆ.

2014ಕ್ಕೆ ಮುನ್ನ ಯುಪಿಎ ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ 410 ರೂ. ಇತ್ತು. ಆದರೆ, ಇಂದು 1,100 ರೂ. ಗಡಿ ದಾಟಿದೆ. ಹಾಲಿನ ಮೇಲೆ ಟ್ಯಾಕ್ಸ್, ಮಕ್ಕಳು ಬರೆಯುವ ಪೆನ್ಸಿಲ್ ಮೇಲೆ ತೆರಿಗೆ. ಮುಂದಿನ ಸಲ ನಾವು ಉಸಿರಾಡುವ ಗಾಳಿ ಮೇಲೆ ತೆರಿಗೆ ಹಾಕುವ ದಿನ ದೂರವಿಲ್ಲ. ಹೀಗಾಗಿ, ಬಡ ಕುಟುಂಬಗಳು ಬದುಕು ಸಾಗಿಸೋದೇ ಕಷ್ಟವಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ಜನರು ಸಂಕಷ್ಟದಲ್ಲಿದ್ದಾರೆ. ಈ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರವನ್ನು ಕಿತ್ತು ಒಗೆಯಬೇಕು.

ರೈತರ ಬಗ್ಗೆ ಚಿಂತೆ ಮತ್ತು ಕಾಳಜಿ ವಹಿಸುವ ಪಕ್ಷ ಕಾಂಗ್ರೆಸ್ ಪಕ್ಷ ಮಾತ್ರ. ಇದನ್ನು ಸಂಸತ್ತಿನಲ್ಲಿ ಕೂಡ ನಾನು ಪ್ರಸ್ತಾಪ ಮಾಡಿದ್ದೇನೆ. 

ನಾವು ಕನ್ನಡಿಗರು, ನಾವು ಯಾರಿಗೂ ಬಗ್ಗುವವರು ಅಲ್ಲ. ನಾವು ಕೂಡ ಕರ್ನಾಟಕದ ಮಣ್ಣಿನ ಮಕ್ಕಳು. ಕನ್ನಡ , ನೆಲ ನುಡಿಯ ನಮಗೂ ಅದಮ್ಯ ಅಭಿಮಾನವಿದೆ. 

ಸಿದ್ದರಾಮಯ್ಯ ಸರ್ಕಾರ ಕೊಟ್ಟ ಎಲ್ಲ ಭರವಸೆ ನಾವು ಈಡೇರಿಸಿದ್ದೇವೆ. ನಮ್ಮನ್ನು ನಂಬಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ,  ಕಾಂಗ್ರೆಸ್ ಪುಕ್ಸಟೆ ಆಶ್ವಾಸನೆಗಳನ್ನು ಕೊಡಲ್ಲ. ನಮ್ಮ ಗ್ಯಾರಂಟಿ ಘೋಷಣೆ ಅಧಿಕಾರಕ್ಕೆ ಬಂದರೆ ಪಕ್ಕ ಈಡೇರುತ್ತೆ. ಕಾಂಗ್ರೆಸ್ ಪಕ್ಷದ ನಾಲ್ಕು ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷಿ, ಅನ್ನಭಾಗ್ಯ, ಯುವನಿಧಿ ಯೋಜನೆ ಜಾರಿ ಮಾಡುವುದು ನಿಶ್ಚಿತ. ಮನೆಮನೆಗೆ ಹೋಗಿ ಪ್ರಚಾರ ಮಾಡಿ, ಈ  ದೇಶದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ, ಈ ದೇಶದ ಸಂವಿಧಾನದ ಸುರಕ್ಷತೆಗೆ, ವಾಕ್ ಸ್ವಾತಂತ್ಯಕ್ಕೆ ಹಾಗೂ  ಅನ್ಯಾಯದ ವಿರುಧ್ಧ ಶಕ್ತಿಗೆ ಈ ದೇಶದಲ್ಲಿ ಕಾಂಗ್ರೆಸ್ ಅನಿವಾರ್ಯ. ಹಾಗಾಗಿ ಈ ಭಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಜನತೆಗೆ ಕರೆಕೊಟ್ಟರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News