ಸಿದ್ದು ಜಗ್ಗುತ್ತಿಲ್ಲ, ಡಿಕೆಶಿ ಬಗ್ಗುತ್ತಿಲ್ಲ ಯಾರಿಗೆ ಒಲಿಯುವುದು ಸಿಎಂ ಪಟ್ಟ! ಹನ್ನೊಂದು ಗಂಟೆಗೆ ಫೈನಲ್ ಮೀಟಿಂಗ್

Karnataka Cm Race : ಒಂದು ಕಡೆ ಸಿದ್ದರಾಮಯ್ಯ ಬಗ್ಗುತ್ತಿಲ್ಲ, ಮತ್ತೊಂದೆಡೆ ಡಿಕೆ ಶಿವಕುಮಾರ್ ಜಗ್ಗುತ್ತಿಲ್ಲ. ಸಿಎಂ ಸ್ಥಾನಕ್ಕೆ ಯಾರ ಹೆಸರು ಸೂಚಿಸುವುದು ಎನ್ನುವುದೇ ಹೈ ಕಮಾಂಡ್ ಗೆ ತಲೆನೋವಾಗಿದೆ.    

Written by - Ranjitha R K | Last Updated : May 17, 2023, 09:50 AM IST
  • ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಕೈ ಹಿಡಿದಿದೆ.
  • ಅಮೋಘ ಗೆಲುವನ್ನು ಕೂಡಾ ನೀಡಿದೆ.
  • ಸಿಎಂ ಗಾದಿಗೆ ಏರುವವರು ಯಾರು ಎನ್ನುವ ಬಿಕ್ಕಟ್ಟು ಬಗೆಹರಿಯುತ್ತಿಲ್ಲ.
ಸಿದ್ದು ಜಗ್ಗುತ್ತಿಲ್ಲ, ಡಿಕೆಶಿ ಬಗ್ಗುತ್ತಿಲ್ಲ ಯಾರಿಗೆ ಒಲಿಯುವುದು ಸಿಎಂ ಪಟ್ಟ! ಹನ್ನೊಂದು ಗಂಟೆಗೆ ಫೈನಲ್ ಮೀಟಿಂಗ್  title=

Karnataka Cm Race : ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಕೈ ಹಿಡಿದಿದೆ. ಅಮೋಘ ಗೆಲುವನ್ನು ಕೂಡಾ ನೀಡಿದೆ. ಆದರೆ ಸಿಎಂ ಗಾದಿಗೆ ಏರುವವರು ಯಾರು ಎನ್ನುವ ಬಿಕ್ಕಟ್ಟು ಮಾತ್ರ ಇನ್ನು ಕೂಡಾ ಬಗೆಹರಿಯುತ್ತಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಮಧ್ಯೆ ಸಿಎಂ ಕುರ್ಚಿಗಾಗಿ ಫೈಟ್  ಜೋರಾಗಿದೆ. ಸಭೆಗಳ ಮೇಲೆ ಸಭೆ ನಡೆದರೂ ಪ್ರಯೋಜನವಾಗುತ್ತಿಲ್ಲ. ಒಂದು ಕಡೆ ಸಿದ್ದರಾಮಯ್ಯ ಬಗ್ಗುತ್ತಿಲ್ಲ, ಮತ್ತೊಂದೆಡೆ ಡಿಕೆ ಶಿವಕುಮಾರ್ ಜಗ್ಗುತ್ತಿಲ್ಲ. ಸಿಎಂ ಸ್ಥಾನಕ್ಕೆ ಯಾರ ಹೆಸರು ಸೂಚಿಸುವುದು ಎನ್ನುವುದೇ ಹೈ ಕಮಾಂಡ್ ಗೆ ತಲೆನೋವಾಗಿದೆ.  

ಫೈನಲ್ ಹಂತದಲ್ಲಿ ಕುರ್ಚಿ ಫೈಟ್ : 

ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಹುಮತ ಪಡೆದಿರುವ ಕಾಂಗ್ರೆಸ್ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ ಸಿಎಂ ಗಾದಿಗಾಗಿ ಇದೀಗ ಪಕ್ಷದಲ್ಲಿ ಪೈಪೋಟಿ ನಡೆಯುತ್ತಿದೆ. ಕರ್ನಾಟಕದ ಸಿಎಂ ಕುರ್ಚಿ ಫೈಟ್ ಫೈನಲ್ ಹಂತಕ್ಕೆ ತಲುಪಿದೆ. ಕರುನಾಡಿನ ಸಿಎಂ ಗದ್ದುಗೆ ಏರುವವರು ಯಾರು ಎನ್ನುವುದು ಇಂದು ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ. .  

ಇದನ್ನೂ ಓದಿ : Karnataka CM decision: ಸಿದ್ದರಾಮಯ್ಯ ಮತ್ತು ಡಿಕೆಶಿ ಜೊತೆಗೆ ಮಲ್ಲಿಕಾರ್ಜುನ್ ಖರ್ಗೆ ಪ್ರತ್ಯೇಕ ಮಾತುಕತೆ

ಹೈ ಕಮಾಂಡ್ ಗೂ  ತಲೆನೋವು  : 

ಸಿಎಂ ಕುರ್ಚಿ ಕದನ ದೆಹಲಿ ಅಂಗಳ ತಲುಪಿ ಸಭೆಯ ಮೇಲೆ ಸಭೆ ನಡೆಯುತ್ತಿದೆ. ಸಿಎಂ ರೇಸ್ ನಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಸಭೆ ನಡೆಸುತ್ತಲೇ ಇದ್ದಾರೆ. ಆದರೂ ಸಿಎಂ ಆಯ್ಕೆ ಇನ್ನೂ ಫೈನಲ್‌ ಆಗಿಲ್ಲ. ಇಬ್ಬರಲ್ಲಿ ಯಾರ ಮೇಲೆ ಒಲವು ತೋರಿಸಬೇಕು ಎನ್ನುವುದೇ ಹೈ ಕಮಾಂಡ್ ಗೂ ಅರ್ಥವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯಾರನ್ನ ಪಟ್ಟಕ್ಕೇರಿಸಬೇಕು ಎನ್ನುವ ಸಮಸ್ಯೆ ಇನ್ನೂ ಕೂಡಾ ಬಗೆಹರಿಯುತ್ತಿಲ್ಲ. 

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿ ಉಭಯ ನಾಯಕರ ಜೊತೆಗೂ ಒನ್‌ ಟು ಒನ್‌ ಮೀಟಿಂಗ್‌ ನಡೆಸಿದ್ದಾಗಿದೆ. ಆದರೆ, ಇನ್ನು ಕೂಡಾ ಯಾವುದೇ ಪರಿಣಾಮ ಹೊರ ಬರದ ಕಾರಣ ಸಿಎಂ ಕುರ್ಚಿ ಕದನವನ್ನು ಮತ್ತೆ ಇವತ್ತಿಗೆ ಮುಂದೂಡಲಾಗಿದೆ. 

ಇದನ್ನೂ ಓದಿ : ಉಚಿತ ಭಾಗ್ಯಗಳಿಗೆ ಷರತ್ತು ವಿಧಿಸುವುದು ಸರಿಯಲ್ಲ: ಡಾ.ಅಶ್ವತ್ಥ್ ನಾರಾಯಣ್

ರಾಹುಲ್ ಜೊತೆ ಚರ್ಚಿಸಿ ಇಂದು ನಿರ್ಧಾರ:
ನವದೆಹಲಿಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಫೈನಲ್‌ ಮೀಟಿಂಗ್‌ ನಡೆಯಲಿದೆ. ಈ ಸಭೆಯಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಸಿಎಂ ಹೆಸರು ಬಹುತೇಕ ಅಂತಿಮವಾಗುವ  ಸಾಧ್ಯತೆ ಇದೆ. 

ಶಿವಕುಮಾರ್ ವಾದ ಏನು ? :
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಕಷ್ಟ ಸಮಯದಲ್ಲಿ ಪಕ್ಷದ ಅಧ್ಯಕ್ಷನ ಜವಾಬ್ದಾರಿಯನ್ನು ಹೊತ್ತಿದ್ದೇನೆ. ಪಕ್ಷ ಸಂಘಟಿಸುವಲ್ಲಿ ಶ್ರಮ ಪಟ್ಟಿದ್ದೇನೆ. ಚುನಾವಣೆಯಲ್ಲಿ 135 ಸ್ಥಾನ ಗಳಿಸಲು ಬಹಳಷ್ಟು ಪರಿಶ್ರಮ ಪಟ್ಟಿದ್ದೇನೆ. ಒಕ್ಕಲಿಗರು ದೊಡ್ಡ ಪ್ರಮಾಣದಲ್ಲಿ ಪಕ್ಷವನ್ನು ಬೆಂಬಲಿಸಿದ್ದಾರೆ. 

ಇದನ್ನೂ ಓದಿ ನಾನೂ ಕೂಡ ಸಿಎಂ ಆಕಾಂಕ್ಷಿ: ಹೊಸ ಬಾಂಬ್ ಸಿಡಿಸಿದ ಡಾ. ಜಿ. ಪರಮೇಶ್ವರ್

ಸಿದ್ದರಾಮಯ್ಯ ವಾದ ಏನು ?: 
ಪಕ್ಷದ ಹೆಚ್ಚಿನ ಶಾಸಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ.  2013ರಿಂದ 18ರವರೆಗೆ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದೇನೆ. ದಲಿತರು, ಹಿಂದುಳಿದವರು ಈ ಸಲ ಪಕ್ಷದ ಕೈ ಹಿಡಿದಿದ್ದಾರೆ. ನಾನು ರಾಜ್ಯದಾದ್ಯಂತ ಓಡಾಡಿ ಪ್ರಚಾರ ಮಾಡಿದ್ದೆನೆ. ಐದು ವರ್ಷದಲ್ಲಿ ಬಿಜೆಪಿ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ನಿರಂತರ ಹೋರಾಟ ನಡೆಸಿದ್ದೇನೆ.  ಪಕ್ಷ 135 ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಮಾತ್ರವಲ್ಲ ಇದು ನನ್ನ ಕೊನೆಯ ಚುನಾವಣೆ. 

ಒಟ್ಟಿನಲ್ಲಿ ಈ ಇಬ್ಬರು ನಾಯಕರ ವಾದವನ್ನು ಆಲಿಸಿರುವ ಹೈ ಕಮಾಂಡ್ ಇಂದು ಅಂತಿಮ ಹೆಸರು ಸೂಚಿಸುವ ಸಾಧ್ಯತೆ ಇದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News