ಗೃಹಜ್ಯೋತಿ ಯೋಜನೆ ಈಗ ಗ್ರಹಣ ಜ್ಯೋತಿಯಾಗಿದೆ: ಎಎಪಿ ಟೀಕೆ

ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲಾ 5 ವಿದ್ಯುತ್ ಶಕ್ತಿ ಪೂರೈಕೆ ಕಂಪನಿಗಳು ಈಗಾಗಲೇ 63,000 ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿವೆ. ಈ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ 85,000 ಕೋಟಿ ರೂ. ಸಾಲವನ್ನು ಪಡೆಯಲು ಈಗಾಗಲೇ ಆರ್ಥಿಕ ಇಲಾಖೆಗೆ ಸೂಚಿಸಿರುವುದನ್ನು ಗಮನಿಸಿದಾಗ ರಾಜ್ಯವು ಸಂಪೂರ್ಣವಾಗಿ ದಿವಾಳಿಯತ್ತ ಸಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.

Written by - Manjunath Hosahalli | Edited by - Puttaraj K Alur | Last Updated : Oct 11, 2023, 05:53 PM IST
  • ಕಾಂಗ್ರೆಸ್ ಸರ್ಕಾರದ ಮನೆ ಬಳಕೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಹಳ್ಳ ಹಿಡಿದಿದೆ
  • ಕಾಂಗ್ರೆಸ್ ಸರ್ಕಾರದ ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿ ಈಗ ಗ್ರಹಣ ಜ್ಯೋತಿಯಾಗಿದೆ
  • ರಾಜ್ಯದ ಎಲ್ಲಾ ವಿದ್ಯುತ್ ಪೂರೈಕೆ ಕಂಪನಿಗಳು 63,000 ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿವೆ
ಗೃಹಜ್ಯೋತಿ ಯೋಜನೆ ಈಗ ಗ್ರಹಣ ಜ್ಯೋತಿಯಾಗಿದೆ: ಎಎಪಿ ಟೀಕೆ title=
ಗೃಹಜ್ಯೋತಿ ಯೋಜನೆ ಹಳ್ಳ ಹಿಡಿದಿದೆ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮನೆ ಬಳಕೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಹಳ್ಳ ಹಿಡಿದಿದೆ ಎಂದು ಎಎಪಿ ಪಕ್ಷ ಟೀಕೆ ಮಾಡಿದೆ. ಗೃಹಜ್ಯೋತಿ ಈಗ ಗ್ರಹಣ ಜ್ಯೋತಿಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಗರದ ಆಮ್‌ ಆದ್ಮಿ ಪಕ್ಷದ ಕಚೇರಿಯಲ್ಲಿ ಗ್ರಹಣಜ್ಯೋತಿ ಎನ್ನುವ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಚುನಾವಣೆಗೆ ಮೊದಲು ಉಚಿತ ವಿದ್ಯುತ್ ಕೊಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಗೃಹಜ್ಯೋತಿ ಯೋಜನೆಗಾಗಿ ರಾಜ್ಯದ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ರೈತರ ಪಂಪ್‌ಸೆಟ್‌ಗಳಿಗೆ ಈ ಮೊದಲು 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು, ಈಗ 2 ಗಂಟೆಗಳ ಕಾಲ ಕೂಡ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲವೆಂದು ಹೇಳಿದರು.

ದೆಹಲಿಯಲ್ಲಿ ನಾವು ಭರವಸೆ ನೀಡಿದಂತೆ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಲಾಗುತ್ತಿದೆ. ದೆಹಲಿಯಲ್ಲಿ ವಿದ್ಯುತ್ ಪೂರೈಕೆದಾರರು 1 ಗಂಟೆ ವಿದ್ಯುತ್ ಕಡಿತ ಮಾಡಿದರೆ 1 ಗಂಟೆಗೆ 50 ರೂ. ದಂಡ ಕಟ್ಟಿಕೊಡಬೇಕಾಗುತ್ತದೆ. 2 ಗಂಟೆಗಿಂತ ಹೆಚ್ಚು ಸಮಯ ವಿದ್ಯುತ್ ಕಡಿತ ಮಾಡಿದರೆ ಗಂಟೆಗೆ 100 ರೂ.ನಂತೆ ದಂಡ ಕಟ್ಟಿಕೊಡಬೇಕು. ಇಂತಹ ಕಾನೂನು ರೂಪಿಸಲಾಗಿದೆ. ಅಂತಹ ಕಾನೂನು ಇಲ್ಲಿಯೂ ತರಲಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ: ರಾಜ್ಯ ಆರೋಗ್ಯ ಇಲಾಖೆಯಿಂದ ಮತ್ತೊಂದು ಮಹತ್ವದ ಹೆಜ್ಜೆ!

ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲಾ 5 ವಿದ್ಯುತ್ ಶಕ್ತಿ ಪೂರೈಕೆ ಕಂಪನಿಗಳು ಈಗಾಗಲೇ 63,000 ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿವೆ. ಈ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ 85,000 ಕೋಟಿ ರೂ. ಸಾಲವನ್ನು ಪಡೆಯಲು ಈಗಾಗಲೇ ಆರ್ಥಿಕ ಇಲಾಖೆಗೆ ಸೂಚಿಸಿರುವುದನ್ನು ಗಮನಿಸಿದಾಗ ರಾಜ್ಯವು ಸಂಪೂರ್ಣವಾಗಿ ದಿವಾಳಿಯತ್ತ ಸಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.

ರಾಜ್ಯದ ರೈತರಿಗೆ ಪ್ರತಿವರ್ಷ  ವಿದ್ಯುತ್ ಶಕ್ತಿ ಸಬ್ಸಿಡಿ ರೂಪದಲ್ಲಿ 6,000 ಕೋಟಿ ರೂ.ಗಳಷ್ಟು ನೀಡುತ್ತಿರುವ ಸರ್ಕಾರ, ಎಲ್ಲಾ ರೈತರಿಗೂ ಸೋಲಾರ್ ಪಂಪ್ ವಿತರಿಸದೆ ಅನವಶ್ಯಕವಾಗಿ ಸಾವಿರಾರು ಕೋಟಿ ರೂ. ಸಬ್ಸಿಡಿ ಹಣವನ್ನು ಪೋಲು ಮಾಡುತ್ತಿರುವುದು ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ಕುಸುಮ್ ಯೋಜನೆ ಅಸಮರ್ಪಕ ಬಳಕೆ: ಮಳೆ ಕೊರತೆಯಾಗಿದ್ದರಿಂದ ರೈತರು ಪಂಪ್‌ಸೆಟ್‌ಗಾಗಿ ಹೆಚ್ಚಿನ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೇಂದ್ರ ಸರ್ಕಾರದ ಕುಸುಮ್ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯಕ್ಕೆ ಕೇಂದ್ರದಿಂದ 10,314 ಸೋಲಾರ್ ಪಂಪ್‌ಗಳನ್ನು ನೀಡಲಾಗಿದೆ ಆದರೆ ಕೇವಲ 314 ಸೋಲಾರ್ ಪಂಪ್‌ಗಳನ್ನು ಮಾತ್ರ ರಾಜ್ಯದ ರೈತರಿಗೆ ನೀಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್ ಹೇಳಿದರು.

ಇದನ್ನೂ ಓದಿ: ಚಾಲಕನಿಗೆ ಅಪಾಯದ ಮುನ್ಸೂಚನೆ ನೀಡುವ AI

ನಮ್ಮ ರಾಜ್ಯದ ಭಗವಂತ್ ಖೂಬಾ ಅವರು ಕೇಂದ್ರದಲ್ಲಿ ಇದೇ ಖಾತೆಯನ್ನು ಹೊಂದಿದ್ದಾರೆ. ಅವರ ಕೊಡುಗೆ ಏನು? ಎಂದು ಪ್ರಶ್ನೆ ಮಾಡಬೇಕಿದೆ. ಸರಿಯಾದ ಮಾಹಿತಿ ಇಲ್ಲದೆ ರೈತರು ಸೋಲಾರ್ ಪಂಪ್ ಅಳವಡಿಕೆ ಮಾಡಿಕೊಳ್ಳುತ್ತಿಲ್ಲ, ಎಸ್ಕಾಂ ಸಿಬ್ಬಂದಿ ಈ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದರು.

ಬೇರೆ ರಾಜ್ಯದಿಂದ ಪ್ರತಿ ಯುನಿಟ್‌ಗೆ 5.56 ರೂ. ನೀಡಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ರಾಜ್ಯಕ್ಕೆ ಅಗತ್ಯವಿರುವ 1.52 ಲಕ್ಷ ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಅನ್ನು ನಾವೇ ಉತ್ಪಾದನೆ ಮಾಡಬಹುದು ಎಂದು ಸರ್ಕಾರ ತನ್ನ ಗೆಜೆಟ್‌ನಲ್ಲೇ ಹೇಳಿದೆ. ಆದರೆ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವುದು 8 ಸಾವಿರ ಮೆಗಾ ವ್ಯಾಟ್ ಮಾತ್ರ, ವಿದ್ಯುತ್ ಖರೀದಿಯಲ್ಲಿ ಕೂಡ ಭ್ರಷ್ಟಾಚಾರ ಇದೆ. ಸರ್ಕಾರ ನಡೆಸುವರಿಗೆ ಇದರಲ್ಲಿ ಲಾಭ ಇದೆ ಎಂದು ಅವರು ಆರೋಪಿಸಿದರು.

ಮುಂದಿನ 4.5 ವರ್ಷ ರಾಜ್ಯದಲ್ಲಿ ಉಚಿತ ವಿದ್ಯುತ್ ನೀಡುವುದಾಗಿ ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡುವುದಿಲ್ಲವೆಂದು ರಾಜ್ಯ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಅಥವಾ ಅಫಿಡಿವಿಟ್ ನೀಡಬೇಕು. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಏನು ಯೋಜನೆ ರೂಪಿಸಿದ್ದೀರಾ? ಎದು ತಿಳಿಸುವಂತೆ ಒತ್ತಾಯಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News