ಬಾಲಕಿ ಮೇಲೆ ಲೈಂಗಿಕ ಕಿರುಕುಳ ಆರೋಪ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು..?

Sexual harassment Case: ಪ್ರಕರಣ ಸಂಬಂಧ ಸುದ್ದಿಗಾರರ ಜೊತೆಗೆ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಯಡಿಯೂರಪ್ಪನವರು ಮಾಜಿ ಮುಖ್ಯಮಂತ್ರಿ. ಹೀಗಾಗಿ ಎಲ್ಲಾ ಆಯಾಮಗಳಿಂದ ತನಿಖೆ ನಡೆಯಲಿದೆ. ದೂರು ನೀಡಿರುವ ಮಹಿಳೆ ಮಾನಸಿಕ ಅಸ್ವಸ್ಥರು ಅಂತಾ ಹೇಳಲಾಗುತ್ತಿದೆ. ಇದೊಂದು ಸೂಕ್ಷ್ಮ ಪ್ರಕರಣವಾಗಿರುವುದಿರಂದ ಸರ್ಕಾರ ಕೂಡ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. 

Written by - Puttaraj K Alur | Last Updated : Mar 15, 2024, 08:06 PM IST
  • ಬಾಲಕಿ ಮೇಲೆ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಸಂಬಂಧ ಪೋಕ್ಸೋ ಕಾಯ್ದೆ ದಾಖಲು
  • ತಾಯಿ-ಮಗಳ ಸಮಸ್ಯೆ ಆಲಿಸಿದ್ದೇ ತಪ್ಪಾಯ್ತು ಎಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
  • ಸೂಕ್ಷ್ಮ ಪ್ರಕರಣವಾಗಿರುವುದರಿಂದ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದ ಪರಮೇಶ್ವರ್
ಬಾಲಕಿ ಮೇಲೆ ಲೈಂಗಿಕ ಕಿರುಕುಳ ಆರೋಪ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು..? title=
ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ!

ಬೆಂಗಳೂರು: ತಮ್ಮ ಮೇಲೆ ಕೇಳಿಬಂದಿರುವ ಬಾಲಕಿ ಮೇಲೆ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು, ʼಸಮಸ್ಯೆ ಎಂದು ಬಂದ ತಾಯಿ-ಮಗಳನ್ನು ಒಳಗೆ ಕರೆದುಕೊಂಡು ಹೋಗಿದ್ದೇ ತಪ್ಪಾಯಿತುʼ ಎಂದು ಹೇಳಿದ್ದಾರೆ. 

ತಮ್ಮ ವಿರುದ್ಧ ಪೋಕ್ಸೋ ಕಾಯ್ದೆ ದಾಖಲಾದ ಬೆನ್ನಲ್ಲೇ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಒಂದೂವರೆ ತಿಂಗಳ ಹಿಂದಷ್ಟೇ ಮಹಿಳೆಯೊಬ್ಬರು ಕಣ್ಣೀರು ಹಾಕುತ್ತಿದ್ದರು. ಆಕೆಯ ಸಮಸ್ಯೆ ಆಲಿಸಲು ಒಳಗೆ ಕರೆದುಕೊಂಡು ಹೋಗಿ ಏನಮ್ಮಾ ಸಮಸ್ಯೆ ಅಂತಾ ತಾಯಿ-ಮಗಳು ಇಬ್ಬರನ್ನೂ ಕೇಳಿದ್ದೆ. ನಮಗೆ ತುಂಬಾ ಅನ್ಯಾಯ ಆಗಿದೆ ಅಂತಾ ಸಮಸ್ಯೆ ಹೇಳಿಕೊಂಡಿದ್ದರು. ಅವರಿಬ್ಬರ ಸಮಸ್ಯೆ ಆಲಿಸಿದ ನಾನು ಪೊಲೀಸ್‌ ಕಮಿಷನರ್‌ ದಯಾನಂದ್‌ ಅವರಿಗೆ ಫೋನ್‌ ಮಾಡಿ ಮಾತನಾಡಿದ್ದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಲು ಸಿದ್ಧರಾದ ಈಶ್ವರಪ್ಪ

ತಾಯಿ-ಮಗಳಿಗೆ ಅನ್ಯಾಯ ಆಗಿದೆಯಂತೆ, ಅವರಿಗೆ ನ್ಯಾಯ ಒದಗಿಸಿಕೊಡುವಂತೆ ಅವರಿಗೆ ಸೂಚಿಸಿದ್ದೆ. ಇದಾದ ಬಳಿಕ ನನ್ನ ವಿರುದ್ಧವೇ ಅವರು ಮಾತನಾಡಲು ಶುರು ಮಾಡಿದ್ದರು. ಆ ಮಹಿಳೆಗೆ ಆರೋಗ್ಯ ಸರಿಯಿಲ್ಲವೆಂದು ಕಾಣಿಸುತ್ತದೆ. ಹೆಚ್ಚು ಮಾತನಾಡಿ ಉಪಯೋಗವಿಲ್ಲವೆಂದು ನಾನು ಅವರನ್ನು ಕಮಿಷನರ್‌ ಬಳಿ ಕಳುಹಿಸಿಕೊಟ್ಟಿದ್ದೆ. ಕಮಿಷನರ್‌ ಸಹ ಈ ಬಗ್ಗೆ ಮಾತನಾಡುವ ಪ್ರಯತ್ನ ಮಾಡಿದ್ದರು ಅಂತಾ ಯಡಿಯೂರಪ್ಪ ಹೇಳಿದ್ದಾರೆ. 

ಇದೀಗ ನನ್ನ ಮೇಲೆ ಲೈಂಗಿಕ ಕಿರುಕುಳ ಆರೋಪದ ಮೇಲೆ FIR ದಾಖಲಿಸಲಾಗಿದೆ. ಇದನ್ನು ನಾನು ಕಾನೂನು ಪ್ರಕಾರ ಎದುರಿಸುತ್ತೇನೆ. ಕಷ್ಟ ಎಂದು ಬಂದವರಿಗೆ ಉಪಕಾರ ಮಾಡಲು ಹೋದರೆ ಈ ರೀತಿ ಆಗುತ್ತೆ ಅಂತಾ ನನಗೆ ಗೊತ್ತಿರಲಿಲ್ಲ. ಕಷ್ಟ ಇದೆ ಎಂದು ಹೇಳಿದ್ದಕ್ಕೆ ನಾನೇ ಅವರಿಗೆ ಸ್ವಲ್ಪ ದುಡ್ಡು ಕೊಟ್ಟು ಕಳುಹಿಸಿದ್ದೆ. ಇದೀಗ ನೋಡಿದ್ರೆ ನನ್ನ ಮೇಲೆಯೇ ಗಂಭೀರ ಆರೋಪ ಮಾಡಲಾಗಿದೆ. ಇದೆಲ್ಲವನ್ನೂ ನಾನು ನಿರೀಕ್ಷೆ ಮಾಡಿರಲಿಲ್ಲ. ಇದನ್ನು ರಾಜಕೀಯ ಹುನ್ನಾರವೆಂದು ನಾನು ಹೇಳುವುದಿಲ್ಲ. ಇರಲಿ ಇದನ್ನು ಎದುರಿಸೋಣವೆಂದು ಯಡಿಯೂರಪ್ಪ ಹೇಳಿದ್ದಾರೆ. 

ಇದನ್ನೂ ಓದಿ: ಕೇವಲ 9 ಸೀಟ್‌ಗಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಕಾಂಗ್ರೆಸ್‌ ಮಾರಾಟ ಮಾಡಿದೆ: ಬಿಜೆಪಿ ಆರೋಪ

ಈ ಪ್ರಕರಣ ಸಂಬಂಧ ಸುದ್ದಿಗಾರರ ಜೊತೆಗೆ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಯಡಿಯೂರಪ್ಪನವರು ಮಾಜಿ ಮುಖ್ಯಮಂತ್ರಿ. ಹೀಗಾಗಿ ಎಲ್ಲಾ ಆಯಾಮಗಳಿಂದ ತನಿಖೆ ನಡೆಯಲಿದೆ. ದೂರು ನೀಡಿರುವ ಮಹಿಳೆ ಮಾನಸಿಕ ಅಸ್ವಸ್ಥರು ಅಂತಾ ಹೇಳಲಾಗುತ್ತಿದೆ. ಇದೊಂದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ಸರ್ಕಾರ ಕೂಡ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. ಬಾಲಕಿ ಮೇಲೆ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಸಂಬಂಧ ಅಪ್ರಾಪ್ತೆಯ ತಾಯಿ ದೂರಿನ ಮೇರೆಗೆ ಯಡಿಯೂರಪ್ಪ ವಿರುದ್ದ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆ ಸೆಕ್ಷನ್ 8, ಮತ್ತು ಐಪಿಸಿ ಸೆಕ್ಷನ್ 354(a) ಅಡಿ ಪ್ರಕರಣ ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News