ಟಾರ್ಚ್ ತರ್ರೋ, ಏನೂ ಕಾಣ್ತಿಲ್ಲ ಅಂತ ರೆಬಲ್ ಸ್ಟಾರ್ ಅಂಬರೀಶ್ ಹೇಳಿದ್ಯಾಕೆ?

ತಮ್ಮ ಸ್ವ ಗ್ರಾಮ ದೊಡ್ಡರಸಿನಕೆರೆಯ ಮತಗಟ್ಟೆ ಸಂಖ್ಯೆ 164ರಲ್ಲಿ ನಟ ಅಂಬರೀಶ್ ಮತ ಚಲಾವಣೆ ಮಾಡಿದರು. 

Last Updated : Nov 3, 2018, 12:34 PM IST
ಟಾರ್ಚ್ ತರ್ರೋ, ಏನೂ ಕಾಣ್ತಿಲ್ಲ ಅಂತ ರೆಬಲ್ ಸ್ಟಾರ್ ಅಂಬರೀಶ್ ಹೇಳಿದ್ಯಾಕೆ? title=

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆಯುತ್ತಿರುವ ಉಪಚುನಾವಣೆಗೆ ರೆಬಲ್ ಸ್ಟಾರ್, ಮಾಜಿ ಸಂಸದ ಅಂಬರೀಶ್ ಮತಚಲಾಯಿಸಿದ್ದಾರೆ. 

ತಮ್ಮ ಸ್ವ ಗ್ರಾಮ ದೊಡ್ಡರಸಿನಕೆರೆಯ ಮತಗಟ್ಟೆ ಸಂಖ್ಯೆ 164ರಲ್ಲಿ ನಟ ಅಂಬರೀಶ್ ಮತ ಚಲಾವಣೆ ಮಾಡಿದರು. ಮತದಾನದ ವೇಳೆ ಬೆಳಕಿನ ಸಮಸ್ಯೆ ಎದುರಾಗಿದ್ದರಿಂದ ಏ… ಕಾಣ್ತಿಲ್ಲ. ಟಾರ್ಚ್ ತನ್ರೋ ಎಂದು ಹೇಳಿದರು. ಕೂಡಲೇ ಅಲ್ಲಿದ್ದ ಸಿಬ್ಬಂದಿ ಮೊಬೈಲ್ ಬಳಸಿ ಟಾರ್ಚ್ ಬೆಳಕು ಬಿಟ್ಟು, ಅಂಬರೀಶ್ ಅವರು ಮತ ಹಾಕಲು ಸಹಕರಿಸಿದರು.

ಕೇವಲ ಮೂರು ತಿಂಗಳಿಗೆ ಚುನಾವಣೆ ಆಗುತ್ತಿರುವುದು ಸರಿಯಲ್ಲ
ಮತದಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬರೀಶ್, ಐದಕ್ಕೆ ಐದು ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಗೆಲ್ಲಲಿದೆ. ಚುನಾವಣೆ ಆಗುತ್ತಿರುವುದು ಸರಿ ಅಲ್ಲ. ಇದೊಂದು ಉತ್ಸಾಹ ಇಲ್ಲದ ಚುನಾವಣೆ ಎಂದರು. ಮಂಡ್ಯದಲ್ಲಿಯೂ ಮೈತ್ರಿ ಅಭ್ಯರ್ಥಿ ಗೆಲುವು ಖಚಿತ ಎಂದರು.

ಮಂಡ್ಯ ಲೋಕಸಭೆ ಉಪಚುನಾವಣೆ ಅಖಾಡದಲ್ಲಿ ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ, ಬಿಜೆಪಿಯ ಡಾ.ಸಿದ್ದರಾಮಯ್ಯ ಸೇರಿದಂತೆ 9 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

Trending News