BJP: ಸಿಎಂ ಯಡಿಯೂರಪ್ಪ ಸಾರಥ್ಯದಲ್ಲಿಯೇ 2023ರ ಚುನಾವಣೆ..!

2023ರ ಬಳಿಕವೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಬಿಎಸ್‌ ಯಡಿಯೂರಪ್ಪ ಅವರ ಸಾರಥ್ಯದಲ್ಲಿ ಚುನಾವಣೆ ನಡೆಯುತ್ತದೆ. ಆಗಲೂ ನಾನು ಬಿಜೆಪಿಯಲ್ಲಿ ಇರುತ್ತೇನೆ

Last Updated : Feb 16, 2021, 03:46 PM IST
  • ನೂರಕ್ಕೆ ನೂರರಷ್ಟು ಬಿ ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.
  • ಸಿಎಂ ಬದಲಾಯಿಸಿ ಎಂದು ಪ್ರಧಾನಿಗೆ ಪತ್ರ ಬರೆದ ತಕ್ಷಣ ಬದಲಾಗುವುದಿಲ್ಲ ಎಂದು ಸಚಿವ ಆರ್‌ ಶಂಕರ್‌
  • 2023ರ ಬಳಿಕವೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಬಿಎಸ್‌ ಯಡಿಯೂರಪ್ಪ ಅವರ ಸಾರಥ್ಯದಲ್ಲಿ ಚುನಾವಣೆ ನಡೆಯುತ್ತದೆ. ಆಗಲೂ ನಾನು ಬಿಜೆಪಿಯಲ್ಲಿ ಇರುತ್ತೇನೆ
BJP: ಸಿಎಂ ಯಡಿಯೂರಪ್ಪ ಸಾರಥ್ಯದಲ್ಲಿಯೇ 2023ರ ಚುನಾವಣೆ..! title=

ಬಾಗಲಕೋಟೆ: ನೂರಕ್ಕೆ ನೂರರಷ್ಟು ಬಿ ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಸಿಎಂ ಬದಲಾಯಿಸಿ ಎಂದು ಪ್ರಧಾನಿಗೆ ಪತ್ರ ಬರೆದ ತಕ್ಷಣ ಬದಲಾಗುವುದಿಲ್ಲ ಎಂದು ಸಚಿವ ಆರ್‌ ಶಂಕರ್‌ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್‌ ಶಂಕರ್(R Shanakar), ಇವೆಲ್ಲಾ ಅವಮಾನಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಬಿಎಸ್‌ವೈಗೆ ಇದೆ. ಪಕ್ಷಕ್ಕೆ ಯಾರನ್ನು ಸಾರಥಿಯನ್ನಾಗಿ ತೆಗೆದುಕೊಂಡು ಹೋಗಬೇಕು ಎಂಬುವುದು ಗೊತ್ತು. ಹಾಗಾಗಿ ಹೈಕಮಾಂಡ್ ಯಡಿಯೂರಪ್ಪ ಅವರ ನಾಯಕತ್ವ ಸಮರ್ಥನೀಯ ಎಂದು ಒಪ್ಪಿಕೊಂಡಿದೆ ಎಂದು ಹೇಳಿದರು.

HD Kumaraswamy: 'ಶ್ರೀರಾಮನ ಮೇಲೆ ನಂಬಿಕೆ ಇದ್ರೆ ಕುಮಾರಸ್ವಾಮಿ ರಾಮಮಂದಿರ ದೇಣಿಗೆ ನೀಡಲಿ'

ಇನ್ನು, ಯುಗಾದಿ ಬಳಿಕ ಸರ್ಕಾರ ಪತನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 2023ರ ಬಳಿಕವೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಬಿಎಸ್‌ ಯಡಿಯೂರಪ್ಪ(BS Yediyurappa) ಅವರ ಸಾರಥ್ಯದಲ್ಲಿ ಚುನಾವಣೆ ನಡೆಯುತ್ತದೆ. ಆಗಲೂ ನಾನು ಬಿಜೆಪಿಯಲ್ಲಿ ಇರುತ್ತೇನೆ ಎಂದು ಹೇಳಿದರು.

ಫೆ.22ರಿಂದ ಎಲ್ಲಾ ತರಗತಿಗಳನ್ನು ತೆರೆಯಲು ಸರ್ಕಾರದ ನಿರ್ಧಾರ

ಇನ್ನು, ಸಿದ್ದರಾಮಯ್ಯ(Siddaramaiah) ಅವರ ಮೇಲೆ ಗೌರವ ಇದೆ. ಸಮ್ಮಿಶ್ರ ಸರ್ಕಾರದಲ್ಲಿ ಅವರ ಪರವಾಗಿರೋದು ನನ್ನ ಧರ್ಮವಾಗಿತ್ತು. ಸ್ಥಿರ ಸರ್ಕಾರ ಕೊಡಬೇಕಾಗಿತ್ತು ಇದ್ದೆ. ಈಗ ಬೇರೆ ಪಕ್ಷದಲ್ಲಿದ್ದೇನೆ. ಬೇರೆ ಪಕ್ಷದಲ್ಲಿದ್ದಾಗ ಆ ಪಕ್ಷಕ್ಕೆ ಗೌರವ ಕೊಡಬೇಕು. ಸರ್ಕಾರ ಬೀಳುತ್ತೆ ಎಂದು ವಿಪಕ್ಷಗಳು ಹೇಳಬೇಕು ಹೇಳ್ತಾರೆ. ಹಿಂದೆ ಮೈತ್ರಿ ಸರ್ಕಾರವಿದ್ದಾಗಲೂ ಹೀಗೆ ಹೇಳಿದ್ದು ಎಂದರು.

Heavy Rain: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಗುಡುಗುಸಹಿತ ಭಾರಿ ಮಳೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News