'ರಾಯಣ್ಣ ಬ್ರಿಗೇಡ್'ನಲ್ಲಿರುವ ನಾಯಕರನ್ನು ಸೆಳೆಯಲು ಸಿಎಂ ಪ್ಲಾನ್

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಲ್ಲಿರುವ ನಾಯಕರ ಜೊತೆ ಸಿಎಂ ಸಿದ್ಧರಾಮಯ್ಯ ಮಾತುಕತೆ.

Last Updated : Oct 11, 2017, 06:00 PM IST
'ರಾಯಣ್ಣ ಬ್ರಿಗೇಡ್'ನಲ್ಲಿರುವ ನಾಯಕರನ್ನು ಸೆಳೆಯಲು ಸಿಎಂ ಪ್ಲಾನ್ title=

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಲ್ಲಿರುವ ನಾಯಕರ ಜೊತೆ ಮಾತುಕತೆ ನಡೆಸಿರುವ ಸಿಎಂ ಸಿದ್ಧರಾಮಯ್ಯ ಕಾಂಗ್ರೇಸ್ ಬೆಂಬಲಿಸುವಂತೆ ಹಿಂದುಳಿದ ನಾಯಕರಿಗೆ ಮನವಿ ಮಾಡಿದ್ದಾರೆ. 

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇರುವ 'ರಾಯಣ್ಣ ಬ್ರಿಗೇಡ್'ನಲ್ಲಿರುವ ನಾಯಕರನ್ನು ಸೆಳೆಯಲು ಗಾಳ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬ್ರಿಗೇಡ್ ಚಟುವಟಿಕೆ ಸ್ಥಗಿತವಾಗಿರುವುದರಿಂದ ಕಾಂಗ್ರೇಸ್ ಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ. ಜೊತೆಗೆ ರಾಜಕೀಯವಾಗಿ ಸೂಕ್ತ ಸ್ಥಾನಮಾನ, ಟಿಕೇಟ್ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಸಿಎಂ ಮಾತುಕತೆ ನಡೆಸಿರುವುದನ್ನು ಒಪ್ಪಿಕೊಂಡಿರುವ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ, ಸಿಎಂ ಜೊತೆ ಮಾತುಕತೆ ನಡೆಸಿರುವುದೂ ಸತ್ಯ. ಕಾಂಗ್ರೆಸ್ ಗೆ ಆಹ್ವಾನ ನೀಡಿರುವುದೂ ಸತ್ಯ. ಆದರೆ, ನಾವು ಈಶ್ವರಪ್ಪ ಅವರ ಜೊತೆ ಮಾತುಕತೆ ಮಾತುಕತೆ ನಡೆಸಿದ ಬಳಿಕವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Trending News