ಕಾಮನ್ ವೆಲ್ತ್ ಕ್ರೀಡಾಕೂಟ: ಗೋಲ್ಡ್ ಕೋಸ್ಟ್ ನ ಗೋಲ್ಡ್ ನಲ್ಲಿ ಮಿಂದ ಭಾರತೀಯರು

     

Last Updated : Apr 15, 2018, 12:51 PM IST
ಕಾಮನ್ ವೆಲ್ತ್ ಕ್ರೀಡಾಕೂಟ: ಗೋಲ್ಡ್ ಕೋಸ್ಟ್ ನ ಗೋಲ್ಡ್ ನಲ್ಲಿ ಮಿಂದ ಭಾರತೀಯರು  title=

ನವದೆಹಲಿ: ಕೊನೆಗೂ ಆಷ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ 21 ನೇ ಕಾಮನ್ ವೆಲ್ತ್ ಕ್ರೀಡಾ ಕೂಟ ಅಂತ್ಯಗೊಂಡಿದೆ. ಈ ಕ್ರೀಡಾಕೂಟದಲ್ಲಿ ಭಾರತವು 26 ಚಿನ್ನದ ಪದಕಗಳನ್ನು ಗೆಲ್ಲುವುದರ ಮೂಲಕ ಮೂರನೇ ಸ್ಥಾನವನ್ನು ಪಡೆದಿದೆ.

ಆಷ್ಟ್ರೇಲಿಯಾವು ಕ್ರೀಡಾಕೂಟದಲ್ಲಿ 80 ಚಿನ್ನದ ಪದಕಗಳೊಂದಿಗೆ ಮೊದಲ ಸ್ಥಾನವನ್ನು ಪಡೆದರೆ, ಇಂಗ್ಲೆಂಡ 45 ಚಿನ್ನದ ಪದಕಗಳೊಂದಿಗೆ ಎರಡನೆಯ ಸ್ಥಾನವನ್ನು ಪಡೆಯಿತು.

ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರು:

ನೀರಾಜ್ ಚೋಪ್ರಾ - ಪುರುಷರ ಜಾವೆಲಿನ್ ಥ್ರೋ
ಸೈನಾ ನೆಹ್ವಾಲ್ - ಮಹಿಳಾ ಸಿಂಗಲ್ಸ್(ಬ್ಯಾಡ್ಮಿಂಟನ್)
ಭಾರತ - ಮಿಶ್ರ ತಂಡ(ಬ್ಯಾಡ್ಮಿಂಟನ್) 
ಗೌರವ್ ಸೋಲಂಕಿ - ಪುರುಷರ 52 ಕೆಜಿ
ವಿಕಾಸ್ ಕೃಷ್ಣನ್ - ಪುರುಷರ 75 ಕೆಜಿ
ಎಮ್ಸಿ ಮೇರಿ ಕೋಮ್ - ಮಹಿಳಾ 45-48 ಕೆಜಿ
ಜಿತು ರಾಯ್ - ಪುರುಷರ 10 ಮಿ ಏರ್ ಪಿಸ್ತೋಲ್
ಅನೀಶ್ - ಪುರುಷರ 25 ಮೀ ರಾಪಿಡ್ ಫೈರ್ ಪಿಸ್ತೋಲ್
ಸಂಜೀವ್ ರಜಪೂತ್ - ಪುರುಷರ 50 ಮೀ ರೈಫಲ್ 3 ಸ್ಥಾನಗಳು
ಮನು ಭೇಕರ್ - ಮಹಿಳಾ 10 ಮಿ ಏರ್ ಪಿಸ್ತೋಲ್
ಹೀನಾ ಸಿಧು - ಮಹಿಳಾ 25 ಮಿ ಪಿಸ್ತೋಲ್
ತೇಜಸ್ವಿಣಿ ಸಾವಂತ್ - ಮಹಿಳೆಯರ 50 ಮೀ ರೈಫಲ್ 3 ಸ್ಥಾನಗಳು
ಶ್ರೇಯಾಸಿ ಸಿಂಗ್ - ಮಹಿಳಾ ಡಬಲ್ ಟ್ರಾಪ್
ಭಾರತ - ಪುರುಷರ ತಂಡ
ಮಣಿಕಾ ಬತ್ರಾ - ಮಹಿಳಾ ಸಿಂಗಲ್ಸ್
ಭಾರತ - ಮಹಿಳಾ ತಂಡ
ಸತೀಶ್ ಕುಮಾರ್ ಶಿವಲಿಂಗಮ್ - ಪುರುಷರ 77 ಕೆಜಿ
ವೆಂಕತ್ ರಾಹುಲ್ ರಾಗಲಾ - ಪುರುಷರ 85 ಕಿ.ಗ್ರಾಂ
ಚಾನು ಸೈಕೋಮ್ ಮಿರಾಬಾಯ್ - ಮಹಿಳಾ 48 ಕೆಜಿ
ಸಂಜಿತಾ ಚಾನು ಖುಮುಕ್ಚಮ್ - ಮಹಿಳಾ 53 ಕೆಜಿ
ಪುನಾಮ್ ಯಾದವ್ - ಮಹಿಳಾ 69 ಕೆಜಿ
ಸುಮಿತ್ - ಪುರುಷರ ಫ್ರೀಸ್ಟೈಲ್ 125 ಕೆಜಿ
ರಾಹುಲ್ ಅವೇರ್ - ಪುರುಷರ ಫ್ರೀಸ್ಟೈಲ್ 57 ಕೆಜಿ
ಬಜರಂಗ - ಪುರುಷರ ಫ್ರೀಸ್ಟೈಲ್ 65 ಕೆಜಿ
ಸುಶೀಲ್ ಕುಮಾರ್- ಪುರುಷರ ಫ್ರೀಸ್ಟೈಲ್ 74 ಕೆಜಿ
ವಿನೆಶ್ - ಮಹಿಳಾ ಫ್ರೀಸ್ಟೈಲ್ 50 ಕೆಜಿ

 

Trending News