MB Patil : ಸಿಎಂ ಬಿಎಸ್‍ವೈ ಭೇಟಿಯಾದ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್

 ಸಿಎಂ ಯಡಿಯೂರಪ್ಪ ಅವರನ್ನ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಎಂಬಿ ಪಾಟೀಲ್ ಭೇಟಿಯಾಗಿದ್ದಾರೆ.

Last Updated : Jul 9, 2021, 03:35 PM IST
  • ಕಾಂಗ್ರೆಸ್ ಹಿರಿಯ ನಾಯಕ ಎಂಬಿ ಪಾಟೀಲ್ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ
  • ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಎಂಬಿ ಪಾಟೀಲ್ ಭೇಟಿ
  • ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ
 MB Patil : ಸಿಎಂ ಬಿಎಸ್‍ವೈ ಭೇಟಿಯಾದ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ title=

ಬೆಂಗಳೂರು : ಕಾಂಗ್ರೆಸ್ ಹಿರಿಯ ನಾಯಕ ಎಂಬಿ ಪಾಟೀಲ್ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಇಂದು ಭೇಟಿ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

 ಸಿಎಂ ಯಡಿಯೂರಪ್ಪ(BS Yeddyurappa) ಅವರನ್ನ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಎಂಬಿ ಪಾಟೀಲ್ ಭೇಟಿಯಾಗಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಎಂಬಿ ಪಾಟೀಲ್, ಇಂಡಿ ತಾಲ್ಲೂಕಿನ ಚಡಚಣ ಭಾಗದ ಬರಪೀಡಿದ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಕೃಷ್ಣಾ ನದಿಯಿಂದ ತಿಡಗುಂದಿ ಅಕ್ವಾಡಕ್ಟ್ ಮುಖಾಂತರ 16 ಕೆರೆಗಳನ್ನು ತುಂಬಿಸುವ ಯೋಜನೆಗೆ ಹಣಕಾಸಿನ ನೆರವು ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿಸಿದ್ದು, ಅವರು ಸಹಮತ ಸೂಚಿಸಿದ್ದಾರೆ.

ಇದನ್ನೂ ಓದಿ : DL-RC Book : ವಾಹನ ಸವಾರರಿಗೆ ಸಿಹಿ ಸುದ್ದಿ : ಸವಾರರು ಇನ್ಮುಂದೆ DL, RC ಕೊಂಡೊಯ್ಯಬೇಕಿಲ್ಲ

ಈ ಹಿಂದೆ ಎಂಬಿ ಪಾಟೀಲ್(MB Patil) ಅವರನ್ನ  ಬಿಜೆಪಿಗೆ ಕರೆತರಲು ಶಂಕರ್ ಬಿದರಿ ಅವರ ಮೂಲಕ ಮೊದಲ ಬಾರಿ ಬಿಜೆಪಿಗೆ ಪ್ರಯತ್ನಗಳು ನಡೆದಿದ್ದವು. ನಂತರ ವಿಧಾನಸಭೆ ಚುನಾವಣೆ ನಂತರವೂ ಮತ್ತೊಮ್ಮೆ ಬಿಜೆಪಿ ಸೇರ್ಪಡೆ ಸುದ್ದಿ ಹರಿದಾಡಿತ್ತು.

ಇದನ್ನೂ ಓದಿ : New Rules for House Rent : ರಾಜ್ಯ ಸರ್ಕಾರದಿಂದ ಬಾಡಿಗೆ ಮನೆದಾರರಿಗೆ ಹೊಸ ನಿಯಮ!

ಆಗ ಎಂಬಿ ಪಾಟೀಲ್ ಸ್ಪಷ್ಟೀಕರಣ ನೀಡಿ, ನನ್ನನ್ನು ಬಿಜೆಪಿಯವರಾರು ಸಂಪರ್ಕಿಸಿಲ್ಲ. ಬಿಜೆಪಿ(BJP) ಸೇರುವ ಸುದ್ದಿ ಸತ್ಯಕ್ಕೆ ದೂರ ಎಂದು ಹೇಳಿದ್ದರು. ಇದೀಗ ಸ್ವತಃ  ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News