ಕಾಮನ್ ವೆಲ್ತ್ ನಲ್ಲಿ ಮುಂದುವರೆದ ಭಾರತದ ಚಿನ್ನದ ಬೇಟೆ

    

Last Updated : Apr 13, 2018, 03:28 PM IST
ಕಾಮನ್ ವೆಲ್ತ್ ನಲ್ಲಿ ಮುಂದುವರೆದ ಭಾರತದ ಚಿನ್ನದ ಬೇಟೆ  title=

ನವದೆಹಲಿ:ಭಾರತವು ಆಷ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ತನ್ನ ಚಿನ್ನದ ಬೇಟೆಯನ್ನು ಮುಂದುವರೆಸಿದೆ. 

ಇಂದು ಬೆಳಗ್ಗೆ ಕುಸ್ತಿ ಆಟಗಾರ ಬಜರಂಗ್ ಪುನಿಯಾ ರೊಂದಿಗೆ 65 ಕೆಜಿ ವಿಭಾಗದಲ್ಲಿ ಚಿನ್ನವನ್ನು ಗೆದ್ದುಕೊಂಡರು ಆ ಮೂಲಕ ಭಾರತಕ್ಕೆ 17 ನೇ ಚಿನ್ನದ ಪದಕವನ್ನು ಗೆದ್ದುಕೊಟ್ಟರು.ಇದಕ್ಕೂ ಮೊದಲು ಶೂಟರ್ ಅನೀಶ್ ಭಾರತಕ್ಕೆ ಪುರುಷರ 25 ಮೀ ರ್ಯಾಪಿಡ್ ಫೇರ್ ಪಿಸ್ತೂಲ್  ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು, ಆ ಮೂಲಕ ಭಾರತ ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ವೇಟ್ ಲಿಫ್ಟಿಂಗ್ ,ಕುಸ್ತಿ ಮತ್ತು ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕಗಳ ಸಿಂಹಪಾಲನ್ನು ಪಡೆದುಕೊಂಡಿದೆ.

ಸದ್ಯ ಭಾರತ ತಂಡವು ಒಟ್ಟು 17 ಚಿನ್ನದ ಪದಕಗಳೊಂದಿಗೆ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ.ಮೊದಲೆರಡು ಸ್ಥಾನವನ್ನು ಕ್ರಮವಾಗಿ ಆಷ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳು ಪಡೆದುಕೊಂಡಿವೆ.ಆಷ್ಟ್ರೇಲಿಯಾ 64 ಚಿನ್ನವನ್ನು ಪಡೆದರೆ,ಇಂಗ್ಲೆಂಡ್ 29 ಚಿನ್ನವನ್ನು ಪಡೆದುಕೊಂಡಿದೆ.

Trending News