ಉದ್ಯಮ ಬೆಳವಣಿಗೆಗೆ ವಿಶಿಷ್ಟ ಮಾದರಿಯ ಹೊಸ ಸಂಸ್ಥೆ ರಚನೆ- ಸಚಿವ ಎಂ.ಬಿ.ಪಾಟೀಲ್

ಬಂಡವಾಳ ಆಕರ್ಷಣೆಯಲ್ಲಿ ರಾಜ್ಯವು ರಾಷ್ಟ್ರದಲ್ಲೇ ಮುಂಚೂಣಿಯಲ್ಲಿದ್ದು, ನಿರಂತರವಾಗಿ ಬಂಡವಾಳ ಆಕರ್ಷಿಸಲು ಹಾಗೂ ನಮ್ಮಲ್ಲಿ ನೆಲೆಯೂರಿರುವ ಕಂಪನಿಗಳಿಂದ ಮರುಹೂಡಿಕೆ ಉತ್ತೇಜಿಸಲು ಹೊಸ ಸಂಸ್ಥೆಯನ್ನು ರಚಿಸುವ ಸಂಬಂಧ ಚರ್ಚೆ ಆರಂಭಿಸಲಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

Written by - Manjunath N | Last Updated : Feb 6, 2024, 04:47 PM IST
  • ಮಾರುಕಟ್ಟೆ ವಿಸ್ತರಣೆ, ವಿಶ್ಲೇಷಣೆ, ರಚನಾತ್ಮಕ ಕಾರ್ಯತಂತ್ರ, ಸ್ಪರ್ಧಾತ್ಮಕತೆಯನ್ನು ಎದುರಿಸುವುದು,
  • ಉತ್ಕೃಷ್ಟತೆಯನ್ನು ಕಾಪಾಡಿಕೊಳ್ಳುವುದು, ಅನುಮೋದನೆ ನೀಡಲಾದ ಯೋಜನೆಗಳ ಅನುಸರಣೆ, ಹೊಸಹೊಸ ಉದ್ಯಮಗಳ ಆಗಮನ, ಏಕಗವಾಕ್ಷಿ ಯೋಜನೆಯ ಜಾರಿ,
  • ಸುಗಮ ವಹಿವಾಟಿನ ವಾತಾವರಣ ಇವೆಲ್ಲವನ್ನೂ ಸಾಧಿಸಿದರೆ ಮಾತ್ರ ಕೈಗಾರಿಕಾ ಬೆಳವಣಿಗೆಯ ಕನಸು ನನಸಾಗಲಿದೆ.
ಉದ್ಯಮ ಬೆಳವಣಿಗೆಗೆ ವಿಶಿಷ್ಟ ಮಾದರಿಯ ಹೊಸ ಸಂಸ್ಥೆ ರಚನೆ- ಸಚಿವ ಎಂ.ಬಿ.ಪಾಟೀಲ್  title=

ಬೆಂಗಳೂರು: ಬಂಡವಾಳ ಆಕರ್ಷಣೆಯಲ್ಲಿ ರಾಜ್ಯವು ರಾಷ್ಟ್ರದಲ್ಲೇ ಮುಂಚೂಣಿಯಲ್ಲಿದ್ದು, ನಿರಂತರವಾಗಿ ಬಂಡವಾಳ ಆಕರ್ಷಿಸಲು ಹಾಗೂ ನಮ್ಮಲ್ಲಿ ನೆಲೆಯೂರಿರುವ ಕಂಪನಿಗಳಿಂದ ಮರುಹೂಡಿಕೆ ಉತ್ತೇಜಿಸಲು ಹೊಸ ಸಂಸ್ಥೆಯನ್ನು ರಚಿಸುವ ಸಂಬಂಧ ಚರ್ಚೆ ಆರಂಭಿಸಲಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಹೊಸ ಹೊಸ ಹೂಡಿಕೆಗೆ ಇನ್ನೂ ಹೆಚ್ಚಿನ ಗಮನ ನೀಡುವ ಉದ್ದೇಶದಿಂದ ಐಎಎಸ್ ಅಧಿಕಾರಿಯೊಬ್ಬರನ್ನು ಉದ್ದೇಶಿತ ಸಂಸ್ಥೆಗೆ ಸಿಇಒ ಆಗಿ ನೇಮಕಮಾಡಿ, ಖಾಸಗಿ ಉದ್ಯಮಗಳ ದಿಗ್ಗಜರನ್ನೂ ಸಹ ಪೂರ್ಣಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುವುದು ಹೇಳಿದರು.

ಇದನ್ನೂ ಓದಿ: IND vs ENG: ಅಂತಿಮ ಟೆಸ್ಟ್ ಪಂದ್ಯಕ್ಕೆ ತಂಡ ಪ್ರಕಟ! ಕೊಹ್ಲಿ ಸೇರಿ ಮೂವರು ಪ್ರಮುಖ ಆಟಗಾರರೇ ಇಲ್ಲ!

ಮಾರುಕಟ್ಟೆ ವಿಸ್ತರಣೆ, ವಿಶ್ಲೇಷಣೆ, ರಚನಾತ್ಮಕ ಕಾರ್ಯತಂತ್ರ, ಸ್ಪರ್ಧಾತ್ಮಕತೆಯನ್ನು ಎದುರಿಸುವುದು, ಉತ್ಕೃಷ್ಟತೆಯನ್ನು ಕಾಪಾಡಿಕೊಳ್ಳುವುದು, ಅನುಮೋದನೆ ನೀಡಲಾದ ಯೋಜನೆಗಳ ಅನುಸರಣೆ, ಹೊಸಹೊಸ ಉದ್ಯಮಗಳ ಆಗಮನ, ಏಕಗವಾಕ್ಷಿ ಯೋಜನೆಯ ಜಾರಿ, ಸುಗಮ ವಹಿವಾಟಿನ ವಾತಾವರಣ ಇವೆಲ್ಲವನ್ನೂ ಸಾಧಿಸಿದರೆ ಮಾತ್ರ ಕೈಗಾರಿಕಾ ಬೆಳವಣಿಗೆಯ ಕನಸು ನನಸಾಗಲಿದೆ. ಉದ್ದೇಶಿತ ಸಂಸ್ಥೆಯ ಭಾಗವಾಗಲಿರುವ ಉದ್ಯಮಿಗಳು ಸಕ್ರಿಯವಾಗಿ ಇದನ್ನೆಲ್ಲ ಸಾಧಿಸಲಿದ್ದಾರೆ.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್, ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ, ತಾಂತ್ರಿಕ ಸಲಹೆಗಾರರಾದ ಶ್ರೀ ಅರವಿಂದ ಗಲಗಲಿ ಮುಂತಾದವರು ಉಪಸ್ಥಿತರಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News