ಅಮರನಾಥ​ ಯಾತ್ರೆಗೆ ದೇವೇಗೌಡರ ಕುಟುಂಬ

ಮಾಜಿ ಪ್ರಧಾನಿ ಹೆಚ್​​ಡಿಡಿ ಮತ್ತು ಚೆನ್ನಮ್ಮ ದಂಪತಿ ಸೇರಿದಂತೆ ಗೌಡರ ಮೊದಲ ಮಗ ಲೋಕೋಪಯೋಗಿ ಸಚಿವ ಹೆಚ್​.ಡಿ. ರೇವಣ್ಣ ಅವರ ಕುಟುಂಬವು ಕೂಡ ಯಾತ್ರೆಗೆ ಸಜ್ಜಾಗಿದೆ.   

Last Updated : Jul 24, 2018, 02:36 PM IST
ಅಮರನಾಥ​ ಯಾತ್ರೆಗೆ ದೇವೇಗೌಡರ ಕುಟುಂಬ title=

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪತ್ನಿ ಚೆನ್ನಮ್ಮ, ಇಬ್ಬರು ಹೆಣ್ಣು ಮಕ್ಕಳು ಮತ್ತು ತಮ್ಮ ಪುತ್ರ ಲೋಕೋಪಯೋಗಿ ಸಚಿವ ಹೆಚ್​.ಡಿ. ರೇವಣ್ಣ ಹಾಗೂ ಕುಟುಂಬದೊಂದಿಗೆ ಅಮರನಾಥ ಯಾತ್ರೆಗೆ ತೆರಳಲಿದ್ದಾರೆ. 

ಬುಧವಾರ (ಜು.25) ಸಂಜೆ ಬೆಂಗಳೂರಿಗೆ ವಾಪಸ್ಸಾಗಲಿರುವ ದೊಡ್ಡಗೌಡರು ಬಳಿಕ ಮತ್ತೋರ್ವ ಪುತ್ರ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಜೊತೆಗೆ ತಿರುಪತಿಗೆ ತೆರಳಲಿದ್ದಾರೆ.  ಗುರುವಾರ(ಜುಲೈ26) ಮಾಜಿ ಪ್ರಧಾನಿ ದೇವೆಗೌಡರು ಸೇರಿದಂತೆ ಸಿಎಂ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರೊಂದಿಗೆ ತಿರುಪತಿ ತೆರಳಿ, ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ವಾಪಾಸ್​ ಆಗಲಿದ್ದಾರೆ ಎನ್ನಲಾಗಿದೆ. 

ಇದೇ ಶುಕ್ರವಾರ(ಜು.27) ರಂದು ಚಂದ್ರಗ್ರಹಣ ಇರುವ ಹಿನ್ನಲೆಯಲ್ಲಿ ಗೌಡರ ಕುಟುಂಬ ಯಾತ್ರೆ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ.

Trending News