BT Lalita Naik: 'ಮೇ 1ರಂದು ನಾಲ್ಕು ಗಣ್ಯರ ಕೊಲೆ, ಸಿ.ಟಿ ರವಿ ಕೊಲೆಯಾದ್ರೆ ನಾನ್​ ಉಳೀತೇನೆ'

ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್​ ಸ್ಫೋಟಕ ಹೇಳಿಕೆ

Last Updated : Mar 21, 2021, 02:49 PM IST
  • ಮಾಜಿ ಸಚಿವ ಹೆಚ್‌.ಎಂ ರೇವಣ್ಣ ಅವರಿಗೆ ಬೆಂಗಳೂರಿನಲ್ಲಿ ಇಂದು ಅಭಿನಂದನೆ ಸಮಾರಂಭ ಕಾರ್ಯಕ್ರಮ
  • ಈ ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್​ ಸ್ಫೋಟಕ ಹೇಳಿಕೆ
  • ಮೇ 1ರಂದು ನಾಲ್ಕು ಮಂದಿ ಗಣ್ಯರ ಕೊಲೆ ಮಾಡುವ ಬೆದರಿಕೆ ಪತ್ರ ಬಂದಿರುವುದಾಗಿ ಹೇಳಿದ್ದಾರೆ.
BT Lalita Naik: 'ಮೇ 1ರಂದು ನಾಲ್ಕು ಗಣ್ಯರ ಕೊಲೆ, ಸಿ.ಟಿ ರವಿ ಕೊಲೆಯಾದ್ರೆ ನಾನ್​ ಉಳೀತೇನೆ' title=

ಬೆಂಗಳೂರು: ಮಾಜಿ ಸಚಿವ ಹೆಚ್‌.ಎಂ ರೇವಣ್ಣ ಅವರಿಗೆ ಬೆಂಗಳೂರಿನಲ್ಲಿ ಇಂದು ಅಭಿನಂದನೆ ಸಮಾರಂಭ ಕಾರ್ಯಕ್ರಮ ನಡೆಯುತ್ತಿದೆ. ಸಾರ್ವಜನಿಕ ಜೀವನದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಹೆಚ್.ಎಂ.ರೇವಣ್ಣ(HM Revanna) ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕಾರ್ಯಕ್ರಮ ಆಯೋಜನೆ ಮಾಡಿರುವ ಈ ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್​ ಸ್ಫೋಟಕ ಹೇಳಿಕೆ ನೀಡಿದ್ದು, ಬರುವ ಮೇ 1ರಂದು ನಾಲ್ಕು ಮಂದಿ ಗಣ್ಯರ ಕೊಲೆ ಮಾಡುವ ಬೆದರಿಕೆ ಪತ್ರ ಬಂದಿರುವುದಾಗಿ ಹೇಳಿದ್ದಾರೆ.

K Sudhakar: ಸೋಂಕು ಹೆಚ್ಚಾದ್ರೆ ನಿಯಂತ್ರಣ ಅಸಾಧ್ಯ: ಸುಧಾಕರ್ ಕೊರೊನಾ 'ಅಲರ್ಟ್'!

ಬಿಜೆಪಿ ಶಾಸಕ ಸಿ ಟಿ ರವಿ, ಪತ್ರಕರ್ತ ರಂಗಣ್ಣ, ನಟ ಶಿವರಾಜಕುಮಾರ್(Shivaraj kumar) ಹಾಗೂ ತಮ್ಮನ್ನು ಕೊಲೆ ಮಾಡುವ ಪತ್ರ ಬಂದಿದೆ. ಅದನ್ನು ಪೊಲೀಸರು ಪರಿಶೀಲನೆ ಮಾಡ್ತಾ ಇದ್ದಾರೆ ಎಂದು ಹೇಳಿದರು. ಆದರೆ ಈ ಬಗ್ಗೆ ಹೆಚ್ಚಿನದಾಗಿ ಅವರು ಯಾವುದೇ ವಿವರಣೆ ನೀಡಲಿಲ್ಲ.

BS Yediyurappa: 'ಉಪ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಇಲ್ಲ'

ಬದಲಿಗೆ, ಸಿ ಟಿ ರವಿರನ್ನು ಕೊಲೆ ಮಾಡಿದ್ರೆ ನಾನು ಉಳಿಯುತ್ತೇನೆ. ನನ್ನ ಕೊಲೆ ಮಾಡಿದ್ರೆ ಸಿ ಟಿ ರವಿ(CT Ravi) ಉಳಿತಾರೆ. ಇಂತಹ ಸಂದರ್ಭ ಎದುರಾಗಿದೆ ಎಂದು ನಿಗೂಢವಾಗಿ ಹೇಳಿದರು. ನಾನು ಈ ಬೆದರಿಕೆ ಪತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಕೊಲೆ ಮಾಡೋದಾದರೆ ಎಲ್ಲಿ ಬೇಕಾದರೂ ಕೊಲೆ ಮಾಡ್ತಾರೆ. ಹಾಗಾಗಿ ನಾನು ಹೆದರದೇ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿದ್ದೇನೆ ಎಂದು ಬಿ.ಟಿ.ಲಲಿತಾ ನಾಯಕ್​ ಹೇಳಿದ್ದಾರೆ.

ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣ : ಹೊರಗುತ್ತಿಗೆ ವೈದ್ಯರು ಸಿಬ್ಬಂದಿಗಳ ಸೇವಾವಧಿ ವಿಸ್ತರಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News