ಮುಂದಿನ ಐದು ದಿನ ಭಾರೀ ಮಳೆ ; ಕರಾವಳಿ ಜಿಲ್ಲೆಗಳಲ್ಲಿಆರೆಂಜ್ ಅಲರ್ಟ್ .!

ಕಳೆದ ಒಂದು ವಾರದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಇನ್ನೂ ಒಂದು ವಾರಗಳವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.   

Written by - Ranjitha R K | Last Updated : Jul 4, 2022, 03:55 PM IST
  • ಮುಂದಿನ ಐದು ದಿನ ಸುರಿಯಲಿದೆ ಭಾರೀ ಮಳೆ
  • ಕರಾವಳಿ ಜಿಲ್ಲೆಗಳಲ್ಲಿಆರೆಂಜ್ ಅಲರ್ಟ್
  • ಉತ್ತರ ಒಳನಾಡು ಹಾಗೂ ದ.ಒಳನಾಡಿನಲ್ಲಿ ಯಲ್ಲೋ ಅಲರ್ಟ್
ಮುಂದಿನ ಐದು ದಿನ ಭಾರೀ ಮಳೆ ; ಕರಾವಳಿ ಜಿಲ್ಲೆಗಳಲ್ಲಿಆರೆಂಜ್ ಅಲರ್ಟ್  .!  title=
karnataka rain alert (file photo)

ಬೆಂಗಳೂರು : Karnataka Rain Alert : ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ಎಡೆ ಬಿಡದೆ ಮಳೆಯಾಗುತ್ತಿದೆ. ಇದೀಗ ಮತ್ತೆ ಮುಂದಿನ ಐದು ದಿನ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 

ಕಳೆದ ಒಂದು ವಾರದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಇನ್ನೂ ಒಂದು ವಾರಗಳವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಐದು ದಿನಗಳವರೆಗೆ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. 

ಇದನ್ನೂ ಓದಿ : ಕಸದ ರಾಶಿಯಲ್ಲಿ ಮಗು ಎಸೆದು ಹೋಗಿದ್ದರೂ ತಡೆಯಲಿಲ್ಲ ಕರುಳ ಕೂಗು..!

ಉತ್ತರ ಒಳನಾಡು ಹಾಗೂ ದ.ಒಳನಾಡಿನ ಜಿಲ್ಲೆಗಳಿಗೆ ಸಾಧಾರಣ ಮಳೆಯಾಗಲಿದ್ದು, ಮುಂದಿನ ಮೂರು ದಿನಗಳವರೆಗೆ ಯಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಂಗಳೂರು , ಕೊಡಗು ಜಿಲ್ಲೆಗಳಲ್ಲಿ  ಇಂದು ಭಾರೀ ಮಳೆಯಾಗಲಿದೆ.  
ಪಶ್ಚಿಮ ಘಟ್ಟದ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. 

ಇನ್ನು ಬೆಳಗಾವಿ, ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿಯೂ  ಯಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಸಂಜೆ ವೇಳೆ  ಸಾಧಾರಣಯಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ : ಬುಕ್‌ ಸ್ಟಾಲ್‌ನಲ್ಲಿ ನಡೀತಿದೆ ಡ್ರಗ್‌ ದಂಧೆ: ಸ್ಲಂ ಹುಡುಗರೇ ಇವರ ಗುರಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News