ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರಿಗೆ ಮೋಸ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯದಲ್ಲಿ ಬರವೆಂಬ ರಾಹುಕಾಲ ವಕ್ಕರಿಸಿದೆ’ ಎಂದು ಕುಟುಕಿದೆ.
‘ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಎಲ್ಲಾ ಸಾಧ್ಯತೆಯೂ ಸ್ಪಷ್ಟವಾಗಿದೆ. ಆದರೂ ಕಾಂಗ್ರೆಸ್ ಸರ್ಕಾರ ಸಮರ್ಥವಾಗಿ ಕಾವೇರಿ ನ್ಯಾಯಾಧೀಕರಣದ ಮುಂದೆ ತನ್ನ ವಾದವನ್ನು ಮಂಡಿಸುವಲ್ಲಿ ಸೋತು ತಮಿಳುನಾಡಿಗೆ ನೀರು ಹರಿಸುತ್ತಲೇ ಇದೆ’ ಎಂದು ಕುಟುಕಿದೆ.
ರಾಜ್ಯದಲ್ಲಿ ಬರವೆಂಬ ರಾಹು ಕಾಲ ವಕ್ಕರಿಸಿದೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಎಲ್ಲಾ ಸಾಧ್ಯತೆಯೂ ಸ್ಪಷ್ಟವಾಗಿದೆ. ಆದರೂ @INCKarnataka ಸರ್ಕಾರ ಸಮರ್ಥವಾಗಿ ಕಾವೇರಿ ನ್ಯಾಯಾಧೀಕರಣದ ಮುಂದೆ ತನ್ನ ವಾದವನ್ನು ಮಂಡಿಸುವಲ್ಲಿ ಸೋತು ತಮಿಳುನಾಡಿಗೆ ನೀರು ಹರಿಸುತ್ತಲೇ ಇದೆ.
ಕುಡಿಯುವ ನೀರು ಮಾತ್ರವಲ್ಲದೆ ದುಪ್ಪಟ್ಟು ವಿದ್ಯುತ್ ಬಿಲ್… pic.twitter.com/31UzDLHdfx
— BJP Karnataka (@BJP4Karnataka) August 31, 2023
ಇದನ್ನೂ ಓದಿ: HD Kumaraswamy Health Updates: ಎಚ್ಡಿಕೆ ಆರೋಗ್ಯದ ಬಗ್ಗೆ ಅನಿತಾ ಕುಮಾರಸ್ವಾಮಿ ಹೇಳಿದ್ದೇನು..?
‘ಕುಡಿಯುವ ನೀರು ಮಾತ್ರವಲ್ಲದೆ ದುಪ್ಪಟ್ಟು ವಿದ್ಯುತ್ ಬಿಲ್ ಪಾವತಿಸಿದರೂ ಪವರ್ ಸಪ್ಲೈ ಕಷ್ಟವಾಗಲಿದೆ. ಕರ್ನಾಟಕವನ್ನು ಎಲ್ಲಾ ರೀತಿಯಿಂದಲೂ ಕಂಗೆಡಿಸುವುದೊಂದೇ ಸಿಎಂ ಸಿದ್ದರಾಮಯ್ಯನವರ ಸರ್ಕಾರದ ಗುರಿಯಾಗಿದೆ’ ಎಂದು ಟೀಕಿಸಿದೆ.
ರಾಜ್ಯದಲ್ಲಿ 455 ಟ್ರೇಡ್ ಲೈಸೆನ್ಸ್ ಅರ್ಜಿ ಬಾಕಿ ವಿಚಾರವಾಗಿ ಟೀಕಿಸಿರುವ ಬಿಜೆಪಿ, ‘ವ್ಯಾಪಾರ ಪರವಾನಗಿ ಪಡೆಯಬೇಕಿದ್ದರೆ ₹10,000 ಗಳಿಂದ ಲಂಚದ ಸ್ಲ್ಯಾಬ್ ಆರಂಭವಾಗುತ್ತದೆ. ನಡೆಸುವ ವಹಿವಾಟಿಗೆ ಅನುಗುಣವಾಗಿ ಲಂಚ ನೀಡಿದರಷ್ಟೇ ಸರ್ವರ್ ಕೆಲಸ ಮಾಡುವ ತಂತ್ರಜ್ಞಾನವನ್ನು ಕಾಂಗ್ರೆಸ್ ಕಂಡುಕೊಂಡಿದೆ’ ಎಂದು ಆರೋಪಿಸಿದೆ.
ವ್ಯಾಪಾರ ಪರವಾನಗಿ ಪಡೆಯಬೇಕಿದ್ದರೆ ₹10,000 ಗಳಿಂದ ಲಂಚದ ಸ್ಲ್ಯಾಬ್ ಆರಂಭವಾಗುತ್ತದೆ. ನಡೆಸುವ ವಹಿವಾಟಿಗೆ ಅನುಗುಣವಾಗಿ ಲಂಚ ನೀಡಿದರಷ್ಟೇ ಸರ್ವರ್ ಕೆಲಸ ಮಾಡುವ ತಂತ್ರಜ್ಞಾನವನ್ನು @INCKarnataka ಕಂಡುಕೊಂಡಿದೆ.
80ರ ದಶಕದಲ್ಲಿ ಕಾಂಗ್ರೆಸ್ ಸರ್ಕಾರದ ರಾಜ್ಯದಲ್ಲಿ ರೌಡಿಗಳನ್ನು ಕಳಿಸಿ ಮಾಮೂಲಿ ಸಂಗ್ರಹ ಮಾಡುತ್ತಿತ್ತು. ಈಗ… pic.twitter.com/yQ8HLWzclw
— BJP Karnataka (@BJP4Karnataka) August 31, 2023
ಇದನ್ನೂ ಓದಿ: Gadag: ಆಂಬ್ಯುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ
‘80ರ ದಶಕದಲ್ಲಿ ಕಾಂಗ್ರೆಸ್ ಸರ್ಕಾರದ ರಾಜ್ಯದಲ್ಲಿ ರೌಡಿಗಳನ್ನು ಕಳಿಸಿ ಮಾಮೂಲಿ ಸಂಗ್ರಹ ಮಾಡುತ್ತಿತ್ತು. ಈಗ ಸಿಎಂ ಸಿದ್ದರಾಮಯ್ಯವರ ಸರ್ಕಾರ ರೌಡಿಗಳ ಬದಲಾಗಿ ಅಧಿಕಾರಿಗಳನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿದೆ’ ಎಂದು ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.