ರಾಜ್ಯ ಬಜೆಟ್ 2019: ರೈತರಿಗೆ ಭರ್ಜರಿ ಕೊಡುಗೆ ನೀಡಿದ ಕುಮಾರಣ್ಣ

ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು "ರೈತಸಿರಿ" ಯೋಜನೆಯಡಿ ಪ್ರತಿ ಹೆಕ್ಟೇರ್ ಗೆ 10,000 ರೂ. ನಗದು ಪ್ರೋತ್ಸಾಹ.

Last Updated : Feb 8, 2019, 03:43 PM IST
ರಾಜ್ಯ ಬಜೆಟ್ 2019: ರೈತರಿಗೆ ಭರ್ಜರಿ ಕೊಡುಗೆ ನೀಡಿದ ಕುಮಾರಣ್ಣ title=

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು 2019-20ನೇ ಸಾಲಿನ ಬಜೆಟ್ ಮಂಡಿಸಿದರು. ಈ ಬಾರಿಯ ಅಯವ್ಯಯದಲ್ಲಿ ಕುಮಾರಣ್ಣ ರೈತರಿಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಲಾಗಿದೆ.

◆ ಕೃಷಿ ಭಾಗ್ಯ ಯೋಜನೆಗೆ 250 ಕೋಟಿ ರೂ.ಅನುದಾನ.
◆ ಶೂನ್ಯ ಬಂಡವಾಳ ಕೃಷಿ ಯೋಜನೆಗೆ 40 ಕೋಟಿ ರೂ. ಅನುದಾನ.
◆ ಸಾವಯವ ಕೃಷಿ ಯೋಜನೆಗೆ 35 ಕೋಟಿ ರೂ.
◆ ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿ ಉತ್ಪನ್ನಗಳ ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಪ್ರೋತ್ಸಾಹದನ. ಅರ್ಹ ಉದ್ದಿಮೆದಾರರು ನವೊದ್ಯಮಿಗಳಿಗೆ ಶೇ. 50 ಪ್ರೋತ್ಸಾಹಧನ; 2 ಕೋಟಿ ರೂ. ಅನುದಾನ.
◆ ಇಸ್ರೇಲ್ ಮಾದರಿ ಕೃಷಿ ಯೋಜನೆಗೆ 145 ಕೋಟಿ ರೂ.
◆ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು "ರೈತಸಿರಿ" ಯೋಜನೆಯಡಿ ಪ್ರತಿ ಹೆಕ್ಟೇರ್ ಗೆ 10,000 ರೂ. ನಗದು ಪ್ರೋತ್ಸಾಹ.
◆ ಕರಾವಳಿ ಮತ್ತು ಮಲೆನಾಡು ಭಾಗದ ರೈತರಿಗೆ ಭತ್ತ ಬೆಳೆಯಲು ಪ್ರೇರಣೆ- ಹೆಕ್ಟೇರ್ ಗೆ 7,500 ರೂ. ಪ್ರೋತ್ಸಾಹಧನ ನೀಡುವ "ಕರಾವಳಿ ಪ್ಯಾಕೇಜ್"ಗೆ 5 ಕೋಟಿ ರೂ. ಅನುದಾನ.
 

Trending News