ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಫೋಟೋ ಇರುವ ನೋಟು ಬಿಡುಗಡೆ ಮಾಡಿದ ಕಾಂಗ್ರೆಸ್!

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ 40% ಕಮಿಷನ್ ಆರೋಪಕ್ಕೆ ಗುರಿಯಾಗಿದ್ದ ಕೆ.ಎಸ್.ಈಶ್ವರಪ್ಪನವರು ತಮ್ಮ ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪಗಳು ಕೇಳಿಬರುತ್ತಲೇ ಇವೆ. ಇದೀಗ ಇದೇ ವಿಚಾರವಾಗಿ ಈಶ್ವರಪ್ಪ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

Written by - Puttaraj K Alur | Last Updated : Nov 5, 2022, 06:55 AM IST
  • ಸಿಎಂ ಹುದ್ದೆಗೆ 2,500 ಕೋಟಿ ಪಾವತಿಸುವಾಗ ಆಪರೇಷನ್ ಕಮಲಕ್ಕೆ 500 ಕೋಟಿ ಹೆಚ್ಚಲ್ಲ ಅಲ್ಲವೇ ಬಿಜೆಪಿ?
  • ತೆಲಂಗಾಣದಲ್ಲಿ 150 ಕೋಟಿಯ ಡೀಲ್‌ನಲ್ಲೂ ನಿಮ್ಮದೇ ನೋಟ್ ಎಣಿಸುವ ಮಿಷನ್ ಕೆಲಸ ಮಾಡಿತ್ತೆ ಈಶ್ವರಪ್ಪನವರೇ?
  • ಕೋಟಿ ಹೂಡಿಕೆ ಹಿಂತೆಗೆಯಲೆಂದೇ ಸಂತೋಷ್ ಪಾಟೀಲ್ ಜೀವ ತೆಗೆದಿರಾ? ಎಂದ ಪ್ರಶ್ನಿಸಿದ ಕಾಂಗ್ರೆಸ್
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಫೋಟೋ ಇರುವ ನೋಟು ಬಿಡುಗಡೆ ಮಾಡಿದ ಕಾಂಗ್ರೆಸ್! title=
ಕೆ.ಎಸ್.ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ 40% ಕಮಿಷನ್ ಆರೋಪಕ್ಕೆ ಗುರಿಯಾಗಿದ್ದ ಕೆ.ಎಸ್.ಈಶ್ವರಪ್ಪನವರು ತಮ್ಮ ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪಗಳು ಕೇಳಿಬರುತ್ತಲೇ ಇವೆ. ಇದೀಗ ಇದೇ ವಿಚಾರವಾಗಿ ಈಶ್ವರಪ್ಪ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರ ಫೋಟೋ ಇರುವ ನೋಟು ಬಿಡುಗಡೆ ಮಾಡಿರುವ ಕಾಂಗ್ರೆಸ್, ಅದರಲ್ಲಿ ‘ಭ್ರಷ್ಟ ಜನತಾ ಪಕ್ಷ ಅಂದರೆ ಕುದುರೆ ವ್ಯಾಪಾರ’, ‘ಆಪರೇಷನ್ ಕಮಲ ಕರೆನ್ಸಿ’ ಎಂದು ಮುದ್ರಿಸಿದೆ. ಇದಲ್ಲದೆ ‘ಬಿಜೆಪಿ ಸೇರಲು ಪ್ರತಿ ಶಾಸಕರಿಗೆ 500 ಕೋಟಿ ನೀಡುವುದಾಗಿ ಭರವಸೆ ನೀಡುತ್ತೇನೆ’ ಎಂದು ಬರೆಯಲಾಗಿದೆ.

ಇದನ್ನೂ ಓದಿ: ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದಂಪತಿಗೆ ಪೊಲೀಸರ ಕಿರುಕುಳ; ಹೆಚ್.ಡಿ.ಕುಮಾರಸ್ವಾಮಿ ಕಿಡಿ

‘ಸಿಎಂ ಹುದ್ದೆಗೆ 2,500 ಕೋಟಿ ಪಾವತಿಸುವಾಗ ಆಪರೇಷನ್ ಕಮಲಕ್ಕೆ 500 ಕೋಟಿ ಹೆಚ್ಚಲ್ಲ ಅಲ್ಲವೇ ಬಿಜೆಪಿ? ಕೆ.ಎಸ್.ಈಶ್ವರಪ್ಪನವರೇ, ನೋಟು ಎಣಿಸುವ ಮೆಷಿನ್ ಇಟ್ಟಿದ್ದು ಆಪರೇಷನ್ ಕಮಲದ 500 ಕೋಟಿ ಎಣಿಸುವುದಕ್ಕಾ, 40% ಕಮಿಷನ್ ಲೂಟಿಯ ಹಣ ಎಣಿಸುವುದಕ್ಕಾ? 500 ಕೋಟಿ ಹೂಡಿಕೆ ಹಿಂತೆಗೆಯಲೆಂದೇ ಸಂತೋಷ್ ಪಾಟೀಲ್ ಜೀವ ತೆಗೆದಿರಾ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಕೆ.ಎಸ್.ಈಶ್ವರಪ್ಪನವರು ಕಾಂಗ್ರೆಸ್ ಶಾಸಕರಿಗೆ 500 ಕೋಟಿ ಆಮಿಷ ಒಡ್ಡಿದ್ದೆ ಎಂದು ಹೇಳಿರುವುದರಲ್ಲಿ ಯಾವ ಆಶ್ಚರ್ಯ, ಅನುಮಾನಗಳೂ ಇಲ್ಲ. ತೆಲಂಗಾಣದಲ್ಲಿ 150 ಕೋಟಿಯ ಡೀಲ್‌ನಲ್ಲೂ ನಿಮ್ಮದೇ ನೋಟ್ ಎಣಿಸುವ ಮಿಷನ್ ಕೆಲಸ ಮಾಡಿತ್ತೆ ಈಶ್ವರಪ್ಪನವರೇ? 40% ಕಮಿಷನ್ ಲೂಟಿಯನ್ನು ಕರ್ನಾಟಕದ ನಂತರ ತೆಲಂಗಾಣದಲ್ಲಿ ಇನ್ವೆಸ್ಟ್ ಮಾಡ್ತಿದೀರಾ?’ ಎಂದು ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: "ರಾಜಕೀಯ ಅಜೆಂಡಾಕ್ಕಾಗಿ ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡಬಾರದು"

‘ಕೆ.ಎಸ್.ಈಶ್ವರಪ್ಪನವರು ಗಂಭೀರ ಆರೋಪವನ್ನು ನಿರಾಕರಿಸದೆ ಶಾಸಕ ಸಂಗಮೇಶ್ ಅವರಿಗೆ 500 ಕೋಟಿ ಆಮಿಷ ಒಡ್ಡಿದ್ದೆ ಎಂದು ಒಪ್ಪಿದಾರೆ. ನೋಟು ಎಣಿಸುವ ಮೆಷಿನ್ ಇಟ್ಟಿರುವ ಈಶ್ವರಪ್ಪನವರು 40% ಕಮಿಷನ್ ಹಣದಲ್ಲಿ 500 ಕೋಟಿ ನೀಡಲು ಮುಂದಾಗಿದ್ರಾ? ಆಪರೇಷನ್ ಕಮಲ ಮಾಡಿಯಾದ್ರೂ ಸಿಎಂ ಅಗೋಣ ಎಂಬ ಕನಸು ಕಂಡಿದ್ರಾ? ಹೀಗಾಗಿಯೇ ರಾಜೀನಾಮೆ ನೀಡುವಂತಾಯ್ತೆ?’ ಎಂದು ವ್ಯಂಗ್ಯವಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News