ಕರ್ನಾಟಕ ಸಾಹಿತ್ಯ ಅಕಾಡೆಮಿ ವಿವಿಧ ಕಮ್ಮಟಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಸಾಹಿತ್ಯ ಅಕಾಡೆಮಿ ರಾಜ್ಯ ಮಟ್ಟದ ಮೂರು ದಿನಗಳ ಕಥಾ ಕಮ್ಮಟ, ಲಲಿತ ಪ್ರಬಂಧ ಕಮ್ಮಟ, ವಿಜ್ಞಾನ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣ ಕಮ್ಮಟ ಸೇರಿ ಒಟ್ಟು ನಾಲ್ಕು ಕಮ್ಮಟಗಳನ್ನು ನಡೆಸಲು ಉದ್ದೇಶಿಸಿದೆ.

Last Updated : Oct 4, 2020, 03:36 PM IST
ಕರ್ನಾಟಕ ಸಾಹಿತ್ಯ ಅಕಾಡೆಮಿ ವಿವಿಧ ಕಮ್ಮಟಗಳಿಗೆ ಅರ್ಜಿ ಆಹ್ವಾನ title=
Photo Courtsey : facebook

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ರಾಜ್ಯ ಮಟ್ಟದ ಮೂರು ದಿನಗಳ ಕಥಾ ಕಮ್ಮಟ, ಲಲಿತ ಪ್ರಬಂಧ ಕಮ್ಮಟ, ವಿಜ್ಞಾನ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣ ಕಮ್ಮಟ ಸೇರಿ ಒಟ್ಟು ನಾಲ್ಕು ಕಮ್ಮಟಗಳನ್ನು ನಡೆಸಲು ಉದ್ದೇಶಿಸಿದೆ.

ಈ ನಾಲ್ಕು ಕಮ್ಮಟಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿಯಿರುವ 20 ರಿಂದ  45 ವರ್ಷ ವಯಸ್ಸಿನ ರಾಜ್ಯದ ಎಲ್ಲ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನವಾಗಿದೆ. 

ಪ್ರತಿ ವಿಭಾಗದ ಕಮ್ಮಟಕ್ಕೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಆಸಕ್ತರು http://Karnatakasahithyaacademy.org   ಸಂಪರ್ಕಿಸಿ ಅರ್ಜಿ ನಮೂನೆ ಹಾಗೂ ವಿವರಗಳನ್ನು ಪಡೆದುಕೊಳ್ಳಬಹುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Trending News