OMG: ಓದಲೂ, ಬರೆಯಲು ಗೊತ್ತಿಲ್ಲದ ಜವಾನನಿಗೆ SSLCಯಲ್ಲಿ ಶೇ.99.7ರಷ್ಟು ಅಂಕ!

Koppal court Peon: ಈ ಪ್ರಕರಣ ಸಂಬಂಧ ಏಪ್ರಿಲ್ 26ರಂದು FIR ದಾಖಲಿಸಲಾಗಿದೆ. ಲೋಕರೆ ೭ನೇ ತರಗತಿಯ ನಂತರ ನೇರವಾಗಿ ೧೦ನೇ ತರಗತಿ ಪರೀಕ್ಷೆಯಲ್ಲಿ ಭಾಗವಹಿಸಿ 625ಕ್ಕೆ 623 ಅಂಕಗಳನ್ನು ಗಳಿಸಿದ್ದಾನೆಂದು FIRನಲ್ಲಿ ತಿಳಿಸಲಾಗಿದೆ. 

Written by - Puttaraj K Alur | Last Updated : May 23, 2024, 06:07 PM IST
  • 10ನೇ ತರಗತಿಯ ಅಂಕಗಳ ಆಧಾರದ ಮೇಲೆ ನ್ಯಾಯಾಲಯದಲ್ಲಿ ಕೆಲಸ ಸಿಕ್ಕಿತ್ತು
  • ಓದು, ಬರವಣಿಗೆಯಲ್ಲಿ ಹೆಣಗಾಡುತ್ತಿದ್ದ ಪ್ಯೂನ್‌ ಬಗ್ಗೆ ನ್ಯಾಯಾಧೀಶರಿಗೆ ಸಂಶಯ
  • 7ನೇ ತರಗತಿ ಬಳಿಕ ನೇರವಾಗಿ 10ನೇ ತರಗತಿ ಪರೀಕ್ಷೆ ತೆಗೆದುಕೊಂಡಿರುವ ವ್ಯಕ್ತಿ
OMG: ಓದಲೂ, ಬರೆಯಲು ಗೊತ್ತಿಲ್ಲದ ಜವಾನನಿಗೆ SSLCಯಲ್ಲಿ ಶೇ.99.7ರಷ್ಟು ಅಂಕ!   title=

ಬೆಂಗಳೂರು: SSLC ಪರೀಕ್ಷೆಯಲ್ಲಿ ಶೇ.99.7ರಷ್ಟು ಅಂಕ ಗಳಿಸಿದ್ದ 23 ವರ್ಷದ ಜವಾನನಿಗೆ ಓದಲೂ, ಬರೆಯಲು ಬರುವುದೇ ಇಲ್ಲ. ಹೌದು, ಇದು ಅಚ್ಚರಿಯಾದರೂ ನಿಜ. ಪ್ರಭು ಲಕ್ಷ್ಮೀಕಾಂತ್ ಲೋಕರೆ ಎಂಬ ಜವಾನನಿಗೆ SSLCಯಲ್ಲಿ ಶೇ.99.7ರಷ್ಟು ಅಂಕ ಬಂದಿದೆ. ಆದರೆ ಈತನಿಗೆ ಓದಲೂ ಬರಲ್ಲ, ಬರೆಯುವುದೂ ಗೊತ್ತಿಲ್ಲ. ಈ ಬಗ್ಗೆ ತನಿಖೆ ಸಹ ಕೈಗೊಳ್ಳಲಾಗಿದೆ.  

SSLCಯಲ್ಲಿ ಹೆಚ್ಚಿನ ಅಂಕ ಗಳಿಸಿದ ನಂತರ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ನಿವಾಸಿ ಪ್ರಭು ಲಕ್ಷ್ಮೀಕಾಂತ್ ಕೊಪ್ಪಳ ಜಿಲ್ಲೆಯ ಸ್ಥಳೀಯ ನ್ಯಾಯಾಲಯದಲ್ಲಿ ಜವಾನನಾಗಿ ಕೆಲಸ ಪಡೆದಿದ್ದ. SSLCಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಜವಾನರ ನೇಮಕಾತಿ ಪರೀಕ್ಷೆಯ ಅಂತಿಮ ಮೆರಿಟ್ ಪಟ್ಟಿಯಲ್ಲಿ ಈತನನ್ನು ಕೆಲಸಕ್ಕೆ ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ: ಗಡಿಜಿಲ್ಲೆಯಲ್ಲಿ ಮೊದಲ ದಿನ ನಡೆದುಕೊಂಡು ಆನೆ ಲೆಕ್ಕ ಹಾಕಿದ ಸಿಬ್ಬಂದಿ

ಆದರೆ ಪ್ರಭು ಲಕ್ಷ್ಮೀಕಾಂತ್‌ ಓದಲು ಮತ್ತು ಬರೆಯಲು ಹೆಣಗಾಡುತ್ತಿದ್ದ. ಇದನ್ನು ನ್ಯಾಯಾಲಯದ ನ್ಯಾಯಾಧೀಶರೇ ಸ್ವತಃ ಗಮನಿಸಿದ್ದರು. ಹೀಗಾಗಿ ಈತನ ಶೈಕ್ಷಣಿಕ ದಾಖಲೆಯ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಧೀಶರು ಪೊಲೀಸರಿಗೆ ಖಾಸಗಿ ದೂರು ನೀಡಿದ್ದಾರೆ. ಈತನ ಶೈಕ್ಷಣಿಕ ದಾಖಲೆಗಳ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.

ಈ ಪ್ರಕರಣ ಸಂಬಂಧ ಏಪ್ರಿಲ್ 26ರಂದು FIR ದಾಖಲಿಸಲಾಗಿದೆ. ಲೋಕರೆ ೭ನೇ ತರಗತಿಯ ನಂತರ ನೇರವಾಗಿ SSLC ಪರೀಕ್ಷೆಯಲ್ಲಿ ಭಾಗವಹಿಸಿ 625ಕ್ಕೆ 623 ಅಂಕಗಳನ್ನು ಗಳಿಸಿದ್ದಾನೆಂದು FIRನಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ: ಅದ್ಧೂರಿಯಾಗಿ ಜರುಗಿದ ಸ್ಕಂದಗಿರಿ ಪಾರ್ವತಾಂಭ ರಥೋತ್ಸವ..! ವೈಭವ ಕಣ್ತುಂಬಿಕೊಂಡ ಸಹಸ್ರಾರು ಭಕ್ತವೃಂದ

SSLCಯಲ್ಲಿ ಶೇ.99.7ರಷ್ಟು ಅಂಕ ಗಳಿಸಿದ ಪ್ರಭು ಲಕ್ಷ್ಮೀಕಾಂತ್‌ಗೆ ಕನ್ನಡ, ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಓದಲು ಅಥವಾ ಬರೆಯಲು ಸಾಧ್ಯವಿಲ್ಲ. ಇದು ಆತನ ಶೈಕ್ಷಣಿಕ ಸಾಧನೆಗಳ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುವಂತೆ ನ್ಯಾಯಾಧೀಶರು ತನಿಖೆಗೆ ಒತ್ತಾಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News