ತೆಲಂಗಾಣ : ಪೂನಂ ಕೌರ್ ರಾಜಕೀಯವಲಕ್ಕೆ ಪಾದಾರ್ಪಣೆ ಮಾಡುವಂತಿದೆ. ಈ ಹಿಂದೆ ಅವರು ಬಿಜೆಪಿಗೆ ಮರಳಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಸದ್ಯ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ಜೊತೆಯಲ್ಲಿ ಕೈ ಹಿಡಿದು ನಡೆದಿದ್ದಾರೆ. ರಾಹುಲ್ ಗಾಂಧಿ ಪೂನಂ ಕೌರ್ ಕೈ ಹಿಡಿದು ನಡೆಯುತ್ತಿರುವುದು ಟ್ರೋಲ್ ಆಗುತ್ತಿದೆ.
ಬಿಜೆಪಿ ಕಾರ್ಯಕರ್ತರೊಬ್ಬರು ಇದನ್ನು ಪೋಸ್ಟ್ ಮಾಡಿದ್ದಾರೆ. ತಾತನ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಎಂದು ನಗುವ ಎಮೋಜಿಗಳನ್ನು ಹಾಕಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಪೂನಂ ಪ್ರತಿಕ್ರಿಯಿಸಿದ್ದಾರೆ. ಕೀಳಾಗಿ ಅಂದಾಜಿಸಿಕೊಳ್ಳುತ್ತಿದ್ದಿರಿ.. ನಾರಿ ಶಕ್ತಿಯ ಬಗ್ಗೆ ನಮ್ಮ ಪ್ರದಾನಿ ಮಾತಾಡ್ತಾ ಇಲ್ಲವೇ..? ಹಾಗೆ ನಾನು ಜಾರಿ ಬೀಳುತ್ತೇನೆ ಅನ್ನುವಷ್ಟರಲ್ಲಿ.. ನನ್ನನ್ನು ಹಿಡಿದರು ಎಂದು ಪೂನಂ ಕೌರ್ ಹೇಳಿದ್ದಾರೆ. ಇನ್ನು ವಿಡಿಯೋ ಪೋಸ್ಟ ಮಾಡಿದ ನೆಟ್ಟಿಗರು ಎಲ್ಲಿ ಹೇಗೆ ಜಾರಿಕೊಂಡೆ..? ಎರಡು ಬಾರಿ ವಿಡಿಯೋ ನೋಡಿದೆ.. ಆದರೆ ಎಲ್ಲಿಯೂ ಜಾರಿದದ್ದು ನನಗೆ ಕಾಣುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
Following the footsteps of his great grand father!!😂 pic.twitter.com/iAFMrOyg6w
— Priti Gandhi - प्रीति गांधी (@MrsGandhi) October 29, 2022
ಇದನ್ನೂ ಓದಿ: ಸಿಎಂ ಕಚೇರಿಯಲ್ಲಿ ಲಂಚ ಪಡೆಯುವ ಮತ್ತು ನೀಡುವ ಬೋರ್ಡ್ ಹಾಕಲಿ: ಕಾಂಗ್ರೆಸ್
This is absolutely demeaning of you , remember prime minister spoke about #narishakti - I almost slipped and toppled that’s how sir held my hand . https://t.co/keIyMEeqr6
— पूनम कौर ❤️ poonam kaur (@poonamkaurlal) October 29, 2022
ಒಟ್ಟಿನಲ್ಲಿ ಪೂನಂ ಈ ರೀತಿ ಉತ್ತರ ನೀಡಿ ವಿವಾದವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ವಾಸ್ತವವಾಗಿ ಪೂನಂ ಕೌರ್ ವಿವಾದಗಳಿಂದಲೇ ಫೇಮಸ್. ಪವನ್ ಕಲ್ಯಾಣ್ ಮತ್ತು ತ್ರಿವಿಕ್ರಮ್ ಅವರ ವಿರುದ್ಧ ಈ ಹಿಂದೆ ಕಾಂಟ್ರೊವರ್ಸಿ ಹೇಳಿಕೆಗಳನ್ನು ನೀಡಿದ್ದರು. ಒಮ್ಮೊಮ್ಮೆ ಪವನ್ ಕಲ್ಯಾಣ್ ರನ್ನು ಬೈಯುತ್ತಿದ್ದರು ಹಾಗೆಯೇ.. ಕೆಲವೊಮ್ಮೆ ಹೊಗಳುತ್ತಿದ್ದರು. ಸದ್ಯ ಬಿಳುತ್ತಿದ್ದ ತಮ್ಮನ್ನು ರಾಗಾ ಕೈ ಹಿಡಿದು ಎತ್ತಿದರು ಎನ್ನವು ಪೂನಂ ಹೇಳಿಕೆ ಯಾವ ಮಟ್ಟಕ್ಕೆ ಹೋಗುತ್ತದೆ ಎಂದು ಕಾಯ್ದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ