ಮೋದಿ ಅವರದು ಮನ್-ಕಿ-ಬಾತ್, ನಮ್ಮದು ಕಾಮ್-ಕಿ-ಬಾತ್: ಸಿದ್ದರಾಮಯ್ಯ

ನಾವು ಮಾತನಾಡುವುದಿಲ್ಲ, ನಮ್ಮ ಸರ್ಕಾರದ ಸಾಧನೆ ಮಾತನಾಡುತ್ತದೆ-ಸಿಎಂ

Last Updated : Oct 2, 2017, 01:56 PM IST
ಮೋದಿ ಅವರದು ಮನ್-ಕಿ-ಬಾತ್, ನಮ್ಮದು ಕಾಮ್-ಕಿ-ಬಾತ್: ಸಿದ್ದರಾಮಯ್ಯ title=

ಬೆಂಗಳೂರು: ಮೋದಿಯವರದ್ದು ಕೇವಲ ಮನ್ ಕಿ ಬಾತ್, ನಮ್ಮದು ಕಾಮ್ ಕಿ ಬಾತ್, ನಾವು ಮಾತನಾಡುವುದಿಲ್ಲ, ನಮ್ಮ ಸರ್ಕಾರ ಮಾಡಿರುವ ಸಾಧನೆಗಳು ಮಾತನಾಡುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಕಾಂಗ್ರೇಸ್ನ ಮನೆ ಮನೆಗೆ ಕಾಂಗ್ರೇಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆ ಸಂದರ್ಭದಲ್ಲಿ ಮನ್ ಕಿ ಬಾತ್, ವಿದೇಶ ಪ್ರವಾಸ ಮೋದಿಯವರ ಮೂರುವರೆ ವರ್ಷದ ಸಾಧನೆ, ಆದರೆ ನಮ್ಮದು ಕಾಮ್ ಕಿ ಬಾತ್. ನಾವು ಮಾತನಾಡುವುದಿಲ್ಲ, ನಮ್ಮ ಸರ್ಕಾರ ಮಾಡಿರುವ ಸಾಧನೆ ಮಾತನಾಡುತ್ತವೆ ಎಂದು ಹೇಳಿದರು. 

ಪ್ರಧಾನಿ ಮೋದಿಯವರು ಅಚ್ಚೆದಿನ್ ಆಯೇಗಾ ಎಂದಿದ್ದಾರೆ. ಅಚ್ಚೇ ದಿನ್ ಕಬ್ ಆಯೇಗಾ ಮೋದಿಯವರೇ ಎಂದು ಎಂದು ವ್ಯಂಗ್ಯ ಮಾಡಿದರು. ಕಾಮ್ ಕಿ ಬಾತ್ ಎಂಬುದು ಯಾವುದೇ ಯೋಜನೆಯಲ್ಲ, ಮನ್ ಕಿ ಬಾತ್ ಗೆ ಪ್ರಾಸವಾಗುವಂತೆ ಆ ಪದ ಬಳಸಿದ್ದೇನೆ ಅಷ್ಟೇ ಎಂದು ಸಿಎಂ ತಿಳಿಸಿದರು.

Trending News