ತುಂಬಿ ಹರಿಯುತ್ತಿದೆ ನೇತ್ರಾವತಿ, ಧರ್ಮಸ್ಥಳದಲ್ಲಿ ತೀರಿದ ನೀರಿನ ಸಮಸ್ಯೆ!

ಪಶ್ಚಿಮ ಘಟ್ಟದಲ್ಲಿ ಮಳೆಯಾಗುತ್ತಿರುವುದರಿಂದ ಕುಮಾರಧಾರ, ಕೆಂಪುಹೊಳೆ, ಎತ್ತಿನಹಳ್ಳಗಳಲ್ಲಿ ನೀರಿನ ಹರಿವು ಕಂಡು ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿದ್ದ ನೀರಿನ ಸಮಸ್ಯೆ ಅಲ್ಪ ಮಟ್ಟಿಗೆ ಬಗೆಹರಿದಂತಾಗಿದೆ. 

Last Updated : Jun 13, 2019, 05:33 PM IST
ತುಂಬಿ ಹರಿಯುತ್ತಿದೆ ನೇತ್ರಾವತಿ, ಧರ್ಮಸ್ಥಳದಲ್ಲಿ ತೀರಿದ ನೀರಿನ ಸಮಸ್ಯೆ! title=
ಸಂಗ್ರಹ ಚಿತ್ರ Pic Courtesy: Sridharmasthala.org

ಮಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆಗೆ ಬಗೆಹರಿದಿದೆ. 

ಅಷ್ಟೇ ಅಲ್ಲದೆ, ಪಶ್ಚಿಮ ಘಟ್ಟದಲ್ಲಿ ಮಳೆಯಾಗುತ್ತಿರುವುದರಿಂದ ಕುಮಾರಧಾರ, ಕೆಂಪುಹೊಳೆ, ಎತ್ತಿನಹಳ್ಳಗಳಲ್ಲಿ ನೀರಿನ ಹರಿವು ಕಂಡು ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿದ್ದ ನೀರಿನ ಸಮಸ್ಯೆ ಅಲ್ಪ ಮಟ್ಟಿಗೆ ಬಗೆಹರಿದಂತಾಗಿದೆ. 

ಈ ಹಿಂದೆ  ಮಳೆಯಾಗದ ಕಾರಣ ನೇತ್ರಾವತಿ ನದಿಯಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಸ್ವತಃ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ಸುದ್ದಿ ಗೋಷ್ಠಿ ನಡೆಸಿ ಜನತೆಯಲ್ಲಿ ಮನವಿ ಮಾಡಿದ್ದರು. ಆದರೀಗ ಮಳೆ ಬಂದಿರುವುದರಿಂದ ಈ ಭಾಗದ ಜನತೆ ಎದುರಿಸುತ್ತಿದ್ದ ದೊಡ್ಡ ಸಮಸ್ಯೆ ಪರಿಹಾರವಾಗಿದೆ.
 

Trending News