ರೈತರ ಸಾಲ ಮನ್ನಾ ಮಾಹಿತಿ ಒದಗಿಸಲು ಬ್ಯಾಂಕ್‍ಗಳಿಗೆ ಸೂಚನೆ

ಬ್ಯಾಂಕುಗಳಿಂದ ಮಾಹಿತಿ ಪಡೆದ ಕೂಡಲೇ, ಸಾಲ ಮನ್ನಾ ಹಣವನ್ನು ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗುವುದು- ಹೆಚ್.ಡಿ. ಕುಮಾರಸ್ವಾಮಿ

Last Updated : Sep 20, 2018, 08:29 AM IST
ರೈತರ ಸಾಲ ಮನ್ನಾ ಮಾಹಿತಿ ಒದಗಿಸಲು ಬ್ಯಾಂಕ್‍ಗಳಿಗೆ ಸೂಚನೆ title=
File image

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸೂಚನೆಯ ಮೇರೆಗೆ ಭೂಮಿ ಮೇಲ್ವಿಚಾರಣಾ ಕೋಶ ಸಿದ್ಧಪಡಿಸಿರುವ ಸಾಲ ಮನ್ನಾ ತಂತ್ರಾಂಶಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮನ್ನಾ ಕುರಿತ ದತ್ತಾಂಶವನ್ನು ನೀಡುವಂತೆ ತಿಳಿಸಿ ಭೂ ಮಾಪನ ಮತ್ತು  ಭೂ ದಾಖಲೆಗಳ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ಬ್ಯಾಂಕುಗಳಿಗೆ ಪತ್ರ ಬರೆದಿದ್ದಾರೆ. 

ಬ್ಯಾಂಕುಗಳಿಂದ ಮಾಹಿತಿ ಪಡೆದ ಕೂಡಲೇ, ಸಾಲ ಮನ್ನಾ ಹಣವನ್ನು ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿರುವ ಮುಖ್ಯಮಂತ್ರಿಗಳು, ಸಾಲ ಮರುಪಾವತಿಸುವಂತೆ ರೈತರಿಗೆ ಕಿರುಕುಳ ನೀಡಬಾರದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Trending News