ರಮಾನಾಥ್ ರೈಗೆ ಗೃಹಖಾತೆ...?

ಇಂದು ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ರಮಾನಾಥ್ ರೈ ಅವರನ್ನು ಗೃಹ ಕಚೇರಿಗೆ ಕರೆಸಿಕೊಂಡು ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ.

Last Updated : Sep 1, 2017, 09:45 AM IST
ರಮಾನಾಥ್ ರೈಗೆ ಗೃಹಖಾತೆ...? title=

ಬೆಂಗಳೂರು, ಸೆ.1: ಇಂದು ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ರಮಾನಾಥ್ ರೈ ಅವರನ್ನು ಗೃಹ ಕಚೇರಿಗೆ ಕರೆಸಿಕೊಂಡು ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ.

ಗೃಹ ಖಾತೆ ಯಾರಿಗೆ ಎಂಬುದು ಇನ್ನೂ ನಿಗದಿಯಾಗದ ಹಿನ್ನೆಲೆಯಲ್ಲಿ ಈ ಭೇಟಿ ಎಲ್ಲರಲ್ಲೂ ಕುತೂಹಲ ಉಂಟುಮಾಡಿದೆ. ಗೃಹಖಾತೆಗೆ ರಮಾನಾಥ್ ರೈ ಮತ್ತು ರಾಮಲಿಂಗಾ ರೆಡ್ಡಿ ಹೆಸರು ಚಾಲ್ತಿಯಲ್ಲಿದ್ದು, ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರೈ ಭೇಟಿ ಎಲ್ಲರಲ್ಲೂ ಕುತೂಹಲ ಹೆಚ್ಚಿಸಿದೆ.

ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ರೈ ನಗುಮುಖದಿಂದಲೇ ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಅತ್ಯಂತ ಸಂತಸದಿಂದ ಸಿಎಂ ಗೃಹ ಕಚೇರಿಯಿಂದ ನಿರ್ಗಮಿಸಿದ ಸಚಿವ ರಮಾನಾಥ್ ರೈ ಅವರ ನಡೆಯು ಮುಂದಿನ ಗೃಹ ಮಂತ್ರಿ ಅವರೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

Trending News