ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆಗೆ 250 ರೂ. ಟೋಲ್ ನಿಗದಿ ಸಾಧ್ಯತೆ

ಮೈಸೂರು- ಬೆಂಗಳೂರು ಹೆದ್ದಾರಿ ಕಾಮಗಾರಿ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಎರಡೂ ಕಡೆ ಸೇರಿ 250 ರೂ. ಟೋಲ್ ಹಾಕಬಹುದು. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ ಎರಡು ಅಥವಾ ಮೂರನೇ ವಾರ ಹೈವೇ ಉದ್ಘಾಟಿಸಲಿದ್ದಾರೆ. ಮಂಡ್ಯದಲ್ಲಿ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ. ಆದರೆ ಇನ್ನು ಫೈನಲ್ ಆಗಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಇದೇ ಸಂದರ್ಭದಲ್ಲಿ ತಿಳಿಸಿದರು.

Written by - Yashaswini V | Last Updated : Feb 13, 2023, 02:24 PM IST
  • ತಾಯಿ ದೊಡ್ಡವಳೋ, ಮಗ ದೊಡ್ಡವನೋ ಎಂಬ ಅನಗತ್ಯ ಗೊಂದಲ ತರಬೇಡಿ.
  • ಮೈಸೂರು, ಮಂಡ್ಯ, ಬೆಂಗಳೂರಿಗೆ ಕಾವೇರಿ ತಾಯಿ ಇದ್ದಂತೆ.
  • ತಾಯಿ ಕಾವೇರಿ ಹರಿದ ಕಾರಣಕ್ಕಾಗಿಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅಣೆಕಟ್ಟೆ ಕಟ್ಟಿದರು.
ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆಗೆ 250 ರೂ. ಟೋಲ್ ನಿಗದಿ ಸಾಧ್ಯತೆ  title=
Mysore-Bangalore Express Highway

ಮೈಸೂರು: ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆಗೆ ಎರಡೂ ಕಡೆಯಿಂದ 250 ರೂ. ಟೋಲ್ ವಿಧಿಸಬಹುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾನುಸಾರ ಕಿಮೀಗೆ ಇಂತಿಷ್ಟು ಅಂತ ಟೋಲ್ ಅಂದಾಜು ಮಾಡುತ್ತಾರೆ.  ಮೇಲ್ಸೇತುವೆಗಳಿಗೆ ಟೋಲ್ ಜಾಸ್ತಿ ಇರುತ್ತೆ. ಕುಂಬಳಗೋಡು, ಮದ್ದೂರಿನಲ್ಲಿ ಫೈ‌ ಓವರ್ ಇದೆ. ಮೊದಲ ಹಂತದಲ್ಲಿ ಬೆಂಗಳೂರು- ನಿಡಘಟ್ಟ ನಡುವೆ ಟೋಲ್ ಶುರುವಾಗಿದೆ. ಸದ್ಯ, ಒಂದೆಡೆಗೆ 135 ರೂ. ಟೋಲ್ ವಿಧಿಸಬೇಕೆಂದು ಶಿಫಾರಸು ಮಾಡಲಾಗಿದ್ದು ಈ ಕುರಿತಂತೆ ಇನ್ನೂ ಕೂಡ ಏನೂ ಫೈನಲ್ ಆಗಿಲ್ಲ ಎಂದವರು ಮಾಹಿತಿ ನೀಡಿದರು.

ಮೈಸೂರು- ಬೆಂಗಳೂರು ಹೆದ್ದಾರಿ ಕಾಮಗಾರಿ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಎರಡೂ ಕಡೆ ಸೇರಿ 250 ರೂ. ಟೋಲ್ ಹಾಕಬಹುದು. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ ಎರಡು ಅಥವಾ ಮೂರನೇ ವಾರ ಹೈವೇ ಉದ್ಘಾಟಿಸಲಿದ್ದಾರೆ. ಮಂಡ್ಯದಲ್ಲಿ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ. ಆದರೆ ಇನ್ನು ಫೈನಲ್ ಆಗಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಇದೇ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ- ಬೆಂಗಳೂರಿನಲ್ಲಿ ಇಂದಿನಿಂದ ಏರೋಶೋ - ಸಿಲಿಕಾನ್‌ ಸಿಟಿ ಮಂದಿಗೆ ಟ್ರಾಫಿಕ್‌ ಬಿಸಿ

ಇದೇ ವೇಳೆ ದಶಪಥ ರಸ್ತೆಗೆ ಕಾವೇರಿ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಮಿತ್ರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ತಾಯಿ ದೊಡ್ಡವಳೋ, ಮಗ ದೊಡ್ಡವನೋ ಎಂಬ ಅನಗತ್ಯ ಗೊಂದಲ ತರಬೇಡಿ. ಮೈಸೂರು, ಮಂಡ್ಯ, ಬೆಂಗಳೂರಿಗೆ ಕಾವೇರಿ ತಾಯಿ ಇದ್ದಂತೆ. ತಾಯಿ ಕಾವೇರಿ ಹರಿದ ಕಾರಣಕ್ಕಾಗಿಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅಣೆಕಟ್ಟೆ ಕಟ್ಟಿದರು.
ಮಗನಿಗಿಂತ ತಾಯಿಯೇ ಶ್ರೇಷ್ಠ. ಈ ವಿಚಾರದಲ್ಲಿ ರಸ್ತೆಯ ಹೆಸರು ವಿವಾದ ಮಾಡಬೇಡ ಎಂದು 
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಮನವಿ‌ ಮಾಡಿದರು.

ಇದನ್ನೂ ಓದಿ- ಏಷ್ಯಾದ ಅತಿದೊಡ್ಡಏರೋ ಇಂಡಿಯಾ ಶೋ ಕರುನಾಡಲ್ಲಿ...!

ಯಾವುದೇ ಎಕ್ಸ್‌ಪ್ರೆಸ್‌ ಹೈವೆಗೆ ವ್ಯಕ್ತಿಯ ಹೆಸರಿಡುವ ಪದ್ಧತಿಯಿಲ್ಲ:
ಇದೇ ಸಂದರ್ಭದಲ್ಲಿ ದೇಶದ ಯಾವುದೇ ಎಕ್ಸ್‌ಪ್ರೆಸ್‌ ಹೈವೆಗೆ ವ್ಯಕ್ತಿಯ ಹೆಸರಿಡುವ ಪದ್ಧತಿ ಇನ್ನೂ ಇಲ್ಲ. ಕೇವಲ ನಗರದೊಳಗೆ ರಸ್ತೆಗಳಿಗಷ್ಟೇ ವ್ಯಕ್ತಿಯ ಹೆಸರಿಡಲಾಗಿದೆ. ನಾವು ಈಗಾಗಲೇ ರಾಜಮನೆತನಕ್ಕೆ ಎಷ್ಟು ಗೌರವ ಕೊಡಬೇಕೋ ಅಷ್ಟನ್ನು ಕೊಟ್ಟಿದ್ದೇವೆ. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಒಡೆಯರ್ ಹೆಸರು. ಮೈಸೂರು ರೈಲ್ವೆ ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಹೆಸರನ್ನ ಯಾವ ಮೈಸೂರಿನವರು ಇಡಲಿಲ್ಲ. ನಾನು ಮತ್ತು ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ತೀರ್ಮಾನ ಮಾಡಿದ್ದೆವು. ನಾನು ಎಕ್ಸ್‌ಪ್ರೆಸ್‌ ಹೈವೆಗೆ ಕಾವೇರಿ ಮಾತೆಯ ಪ್ರಸ್ತಾಪಿಸುತ್ತಿದ್ದಂತೆ ಒಬ್ಜೊಬ್ಬರು ಒಂದೊಂದು ಹೆಸರು ಹೇಳುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News