ಬೆಂಗಳೂರಿನಲ್ಲಿ ಇಂದಿನಿಂದ ಏರೋಶೋ - ಸಿಲಿಕಾನ್‌ ಸಿಟಿ ಮಂದಿಗೆ ಟ್ರಾಫಿಕ್‌ ಬಿಸಿ

Aero India 2023: ಬೆಂಗಳೂರು ಪೂರ್ವಭಾಗದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ಕೆಆರ್ ಪುರಂ ಹೆಣ್ಣೂರು ಕ್ರಾಸ್, ಮ್ಯಾಲನಹಳ್ಳಿ, ಬೇಗೂರು ಬ್ಯಾಕ್ ಗೇಟ್ ಮೂಲಕ ವಿಮಾನ ನಿಲ್ದಾಣಕ್ಕೆ ತಲುಪಬಹುದು.

Written by - Yashaswini V | Last Updated : Feb 13, 2023, 10:52 AM IST
  • ಇಂದಿನಿಂದ ಏರೋಶೋ ಹಿನ್ನೆಲೆಯಲ್ಲಿ ಸಂಚಾರ ಬದಲಾವಣೆ
  • ಟ್ರಾಫಿಕ್ ನಿಯಂತ್ರಣಕ್ಕೆ ಮಾರ್ಗ ಬದಲಾವಣೆ ಆದೇಶ
  • ಯಲಹಂಕ ಸುತ್ತಲೂ ಸಂಚಾರ ದಟ್ಟನೆ ನಿಯಂತ್ರಣಕ್ಕೆ ಪ್ಲಾನ್
ಬೆಂಗಳೂರಿನಲ್ಲಿ ಇಂದಿನಿಂದ ಏರೋಶೋ - ಸಿಲಿಕಾನ್‌ ಸಿಟಿ ಮಂದಿಗೆ ಟ್ರಾಫಿಕ್‌ ಬಿಸಿ title=
Aero India 2023 in bengaluru

ಬೆಂಗಳೂರು:  ಬೆಂಗಳೂರಿನಲ್ಲಿ ಇಂದಿನಿಂದ ಏರೋಶೋ ಆರಂಭವಾಗಲಿದ್ದು ಸಿಲಿಕಾನ್‌ ಸಿಟಿ ಮಂದಿಗೆ ಟ್ರಾಫಿಕ್‌ ಬಿಸಿ ತಟ್ಟಲಿದೆ. ಯಲಹಂಕ ಸುತ್ತಲೂ ಸಂಚಾರ ದಟ್ಟನೆ ನಿಯಂತ್ರಣಕ್ಕಾಗಿ ಸಂಚಾರ ಮಾರ್ಗ ಬದಲಿಸಿ ಟ್ರಾಫಿಕ್‌ ನಿಯಂತ್ರಣಕ್ಕೆ ಪ್ಲಾನ್‌ ಮಾಡಲಾಗಿದೆ. 

ಬೆಳಗ್ಗೆ 8ರಿಂದ 11:30ವರೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಬಳ್ಳಾರಿ ರಸ್ತೆಯ ಎಸ್ಟೀಮ್ ಮಾಲ್‌ನಿಂದ ಎಲಿವೇಟೆಡ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಟ್ರಾಫಿಕ್‌ ಪೊಲೀಸರ ಸೂಚನೆ ನೀಡಿದ್ದಾರೆ. ಏರ್‌ಪೋರ್ಟ್‌ಗೆ ಹೋಗುವವರಿಗೂ ಮಾರ್ಗ ಬದಲಾವಣೆ ಮಾಡಲಾಗಿದ್ದು,  ಏರ್ಪೋರ್ಟ್‌ಗೆ ತಲುಪಲು ಹೆಣ್ಣೂರು ಜಂಕ್ಷನ್ ಮೂಲಕ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ. ಇದಲ್ಲದೆ, ಏರೋ ಶೋ ಹಿನ್ನಲೆಯಲ್ಲಿ ಮುಂದಿನ ಐದು ದಿನಗಳ ಕಾಲ  ಬೃಹತ್‌ ವಾಹನಗಳಿಗೆ ಏರ್ಪೋರ್ಟ್‌ ರಸ್ತೆಯಲ್ಲಿ ನಿಷೇಧ ಹೇರಲಾಗಿದೆ. 

ಏರ್ಪೋರ್ಟ್‌ಗೆ ತಲುಪಲು ಪರ್ಯಾಯ ಮಾರ್ಗಗಳು:
ಬೆಂಗಳೂರು ಪೂರ್ವಭಾಗದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ಕೆಆರ್ ಪುರಂ ಹೆಣ್ಣೂರು ಕ್ರಾಸ್, ಮ್ಯಾಲನಹಳ್ಳಿ, ಬೇಗೂರು ಬ್ಯಾಕ್ ಗೇಟ್ ಮೂಲಕ ವಿಮಾನ ನಿಲ್ದಾಣಕ್ಕೆ ತಲುಪಬಹುದು.

ಇದನ್ನೂ ಓದಿ- Aero India 2023 : ಏರೋ ಇಂಡಿಯಾ 2023 ರ ಭವ್ಯತೆಗೆ ಸಾಕ್ಷಿ : ಇಲ್ಲಿದೆ ಈ ಭಾರಿಯ ವಿಶೇಷತೆಗಳು!

ಪಶ್ಚಿಮ ಭಾಗದಿಂದ ಏರ್​ಪೋರ್ಟ್​ಗೆ ಹೋಗುವವರು ಗೊರಗುಂಟೆ ಪಾಳ್ಯ, ಬಿಇಎಲ್ ಸರ್ಕಲ್, ಗಂಗಮ್ಮ ಸರ್ಕಲ್, ಮದರ್ ಡೈರಿ, ಉನ್ನಿಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗನಹಳ್ಳಿ, ಎಂವಿಐಟಿ, ವಿದ್ಯಾನಗರ್ ಕ್ರಾಸ್ ಮೂಲಕ ವಿಮಾನ ನಿಲ್ದಾಣ ತಲುಪಬಹುದು.ದೊಡ್ಡ ವಾಹನಗಳು ಪರ್ಯಾಯ ರಸ್ತೆಯ ಮೂಲಕ ಸಂಚಾರ ಕೈಗೊಳ್ಳಬೇಕು.

ಹೈದರಾಬಾದ್ ಮತ್ತು ಚಿಕ್ಕಬಳ್ಳಾಪುರದಿಂದ ಬರುವ ದೊಡ್ಡ ವಾಹನಗಳು ಹಾಗೂ ಖಾಸಗಿ ವಾಹನಗಳು ದೇವನಹಳ್ಳಿ ಬಳಿ ದೊಡ್ಡಬಳ್ಳಾರಪುರ ಕ್ರಾಸ್​ನಿಂದ ತಿರುವು ತೆಗೆದುಕೊಂಡು ರಾಷ್ಟ್ರೀಯ ಹೆದ್ದಾರಿ 4 ತುಮಕೂರು ಪುಣೆ ರಸ್ತೆ ಕಡೆಗೆ ಪ್ರಯಾಣ ಬೆಳೆಸಬಹುದಾಗಿದೆ ಎಂದು ಟ್ರಾಫಿಕ್‌ ಪೊಲೀಸರು ತಿಳಿಸಿದ್ದಾರೆ. 

ತುಮಕೂರು ರಸ್ತೆ ಕಡೆಯಿಂದ ಬರುವ ದೊಡ್ಡ ವಾಹನಗಳು ಸಿಎಂಟಿಐ ಜಂಕ್ಷನ್ ಬಳಿ ಡೈವರ್ಶನ್ ತೆಗೆದುಕೊಂಡು ರಿಂಗ್ ರಸ್ತೆಯತ್ತ ಸಾಗಿ ನೈಸ್ ರಸ್ತೆ ತಲುಪಬಹುದು ಎಂದು ಬೆಂಗಳೂರು ಟ್ರಾಫಿಕ್‌ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ- ಸಿಲಿಕಾನ್ ಸಿಟಿಯಲ್ಲಿ ತಗ್ಗಿದ ಟ್ರಾಫಿಕ್: ಸಂಚಾರ ಪೊಲೀಸರಿಗೆ ಹರಿದು ಬಂತು ಧನ್ಯವಾದಗಳ ಮಹಾಪೂರ

ನೆಲಮಂಗಲದಿಂದ ಬರುವವವರು ಸೊಂಡೇಕೊಪ್ಪ ರಸ್ತೆ ಮೂಲಕ ನೈಸ್ ರಸ್ತೆಗೆ ಹೋಗಬಹುದದಾಗಿದೆ. ತೋಟಗೆರೆ ಬಸವಣ್ಣ ದೇವಸ್ಥಾನ ಕಡೆಯಿಂದ ಬರುವ ವಾಹನಗಳು ದೊಡ್ಡಬಳ್ಳಾಪುರ ದೇವನಹಳ್ಳಿ ರಸ್ತೆ ಮೂಲಕ ಹೊಸಕೋಟೆ ಕಡೆಗೆ ಹೋಗಬಹುದು. 

ಚಿಕ್ಕಬಾಣಾವರ ಮೂಲಕ ಬರುವ ವಾಹನಗಳು ತೋಟಗೆರೆ ಬಸವಣ್ಣ ದೇವಸ್ಥಾನದತ್ತ ಯೂಟರ್ನ್ ಪಡೆದು ಅಲ್ಲಿಂದ ದೊಡ್ಡಬಳ್ಳಾಪುರ ದೇವನಹಳ್ಳಿ ರಸ್ತೆ ಮೂಲಕ ಹೊಸಕೋಟೆ ತಲುಪಬಹುದು ಎಂದು ಬೆಂಗಳೂರು ನಗರ ಟ್ರಾಫಿಕ್‌ ಪೊಲೀಸರು ಅಪ್‌ಡೇಟ್‌ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News