ನವಂಬರ್ 1ರಂದು ರಾಜ್ಯೋತ್ಸವಕ್ಕೆ ಸಿಗಲಿದೆ ಪಿಂಚಣಿ ಉಡುಗೊರೆ

ಹಿರಿಯ ನಾಗರಿಕರ ಪಿಂಚಣಿ ಮೊತ್ತ ಏರಿಕೆ ಹಾಗೂ ಗರ್ಭಿಣಿಯರಿಗಾಗಿ ರೂಪಿಸಲಾಗಿರುವ ಮಾತೃಶ್ರೀ ಯೋಜನೆಗೆ ನ.1ರಂದು ಚಾಲನೆ ನೀಡಲು ಸರ್ಕಾರದ ಸಿದ್ಧತೆ. ಪಿಂಚಣಿ ಹೆಚ್ಚಳಕ್ಕಾಗಿ ಬಜೆಟ್​ನಲ್ಲಿ 660 ಕೋಟಿ ರೂ. ಮೀಸಲಿರಿಸಿರುವ ಸರ್ಕಾರ.

Last Updated : Sep 19, 2018, 09:28 AM IST
ನವಂಬರ್ 1ರಂದು ರಾಜ್ಯೋತ್ಸವಕ್ಕೆ ಸಿಗಲಿದೆ ಪಿಂಚಣಿ ಉಡುಗೊರೆ title=

ಬೆಂಗಳೂರು: ಹಿರಿಯ ನಾಗರಿಕರ ಪಿಂಚಣಿ ಮೊತ್ತ ಏರಿಕೆ ಹಾಗೂ ಗರ್ಭಿಣಿಯರಿಗಾಗಿ ರೂಪಿಸಲಾಗಿರುವ ಮಾತೃಶ್ರೀ ಯೋಜನೆಗೆ ನವಂಬರ್ 1ರಂದು ಚಾಲನೆ ನೀಡಲು ಸರ್ಕಾರ ಸಿದ್ಧತೆ ನಡೆಸಿದ್ದು, ಸದ್ಯದಲ್ಲೇ ಈ ಬಗ್ಗೆ ಇಲಾಖೆಗೆ ಸೂಚನೆ ಹೋಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಜೆಟ್​ನಲ್ಲಿ ಘೋಷಿಸಿದ್ದಂತೆ ಪಿಂಚಣಿ ಹೆಚ್ಚಳಕ್ಕಾಗಿ ಸರ್ಕಾರ ಬಜೆಟ್​ನಲ್ಲಿ 660 ಕೋಟಿ ರೂ. ಮೀಸಲಿರಿಸಿದ್ದು, ಸಂಧ್ಯಾ ಸುರಕ್ಷಾ ಯೋಜನೆಯಡಿ ರಾಜ್ಯಾದ್ಯಂತ 32.92 ಲಕ್ಷ ಹಿರಿಯ ನಾಗರಿಕರು ಮಾಸಿಕ 600 ರೂ. ಪಿಂಚಣಿ ಪಡೆಯುತ್ತಿದ್ದು, ಈ ಮೊತ್ತ ನ. 1 ರಿಂದ 1000 ರೂ.ಗಳಿಗೆ ಹೆಚ್ಚಳವಾಗಲಿದೆ. ಡಿಸೆಂಬರ್​ನಲ್ಲಿ ಸಿಗುವ ಪಿಂಚಣಿಗೆ ಇದು ಅನ್ವಯವಾಗಲಿದೆ. 

ಇನ್ನು ಗರ್ಭಿಣಿಯರಿಗೆ ಪ್ರಸವ ಪೂರ್ವ ಮತ್ತು ಪ್ರಸವ ನಂತರದ ಆರೈಕೆಗಾಗಿ ಮಾತೃಶ್ರೀ ಯೋಜನೆಯಡಿ 350 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಮಾತೃಶ್ರೀ ಯೋಜನೆಯಡಿ ಗರ್ಭಿಣಿಯರಿಗೆ ಹೆರಿಗೆಗೆ ಮೂರು ತಿಂಗಳು ಮುನ್ನ ಹಾಗೂ ಹೆರಿಗೆ ನಂತರ 90 ದಿನ, ಪ್ರತಿ ತಿಂಗಳಿಗೆ 1000 ರೂ.ನಂತೆ ಅವರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಯೋಜನೆ ಜಾರಿಯಾಗಲಿದ್ದು, ಗರ್ಭಿಣಿಯರ ನೋಂದಣಿ ಮಾಡಿದ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ. 

Trending News