ಸಿದ್ದರಾಮಯ್ಯ ತಲೆಯಲ್ಲಿ ಮೆದುಳಿಲ್ಲ, ಇರೋದೆಲ್ಲಾ ಬರೀ ಸಗಣಿ: ಕೆ.ಎಸ್.ಈಶ್ವರಪ್ಪ

ದೇವೇಗೌಡರು, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್​, ಸಿದ್ದರಾಮಯ್ಯ ಅವರು ಎಸಿ ರೂಂನಲ್ಲಿ ಕೂರುವುದನ್ನು ಬಿಟ್ಟು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿ ಎಂದು ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.

Updated: Dec 5, 2018 , 01:59 PM IST
ಸಿದ್ದರಾಮಯ್ಯ ತಲೆಯಲ್ಲಿ ಮೆದುಳಿಲ್ಲ, ಇರೋದೆಲ್ಲಾ ಬರೀ ಸಗಣಿ: ಕೆ.ಎಸ್.ಈಶ್ವರಪ್ಪ

ವಿಜಯಪುರ: ಸಿದ್ದರಾಮಯ್ಯ ತಲೆಯಲ್ಲಿ ಮೆದುಳಿಗೆ ಬದಲಾಗಿ ಬರೀ ಸಗಣಿ ತುಂಬಿಕೊಂಡಿದೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ಮಾಡಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದ ಮೊದಲ ದಿನ ಒಂದು ಲಕ್ಷ ಜನರನ್ನು ಸೇರಿಸಿ ಬಿಜೆಪಿ ಪ್ರತಿಭಟನೆ ಮಾಡಲಿದೆ ಎಂದು ಹೇಳಿದರೆ, ನಾವು ಎರಡು ಲಕ್ಷ ರೈತರನ್ನು ಸೇರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅವರ ತಲೇಲಿ ಬರೀ ಸಗಣಿ ತುಂಬಿಕೊಂಡಿದೆ ಅನ್ಸುತ್ತೆ. ಹಾಗಾಗಿ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಒಮ್ಮೆ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಕಳೆದ 40 ವರ್ಷಗಳಲ್ಲಿ ಕಾಣದ ಬರಗಾಲವನ್ನು ಈ ವರ್ಷ ರಾಜ್ಯ ಎದುರಿಸಿದೆ. ರೈತರ ಬೆಳೆಗಳೆಲ್ಲಾ ಸಂಪೂರ್ಣ ನಾಶವಾಗಿದೆ. ಈ ಬಗ್ಗೆ ಜೆಡಿಎಸ್, ಕಾಂಗ್ರೆಸ್ ನಾಯಕರಿಗೆ ಅಲ್ಪವೂ ಕಾಳಜಿ ಇಲ್ಲ. ದೇವೇಗೌಡರು, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್​, ಸಿದ್ದರಾಮಯ್ಯ ಅವರು ಎಸಿ ರೂಂನಲ್ಲಿ ಕೂರುವುದನ್ನು ಬಿಟ್ಟು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿ. ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಿ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.