ಕೇಂದ್ರ ಸರಕಾರ ಜಾರಿಮಾಡಲು ಹೊರಟಿರುವ ರೈತ ಮತ್ತು ಕಾರ್ಮಿಕ ಕಾನೂನುಗಳಿಂದ ಭಾರತದ ಭವಿಷ್ಯ ಕರಾಳವಾಗಲಿದೆ ಹೀಗಾಗಿ ಈ ರೈತ ಹಾಗೂ ಕಾರ್ಮಿಕ ನೀತಿಗಳನ್ನು ಹಿಮ್ಮೆಟ್ಟಿಸುವುದು ಇವತ್ತಿನ ತುರ್ತಾಗಿದೆ ಎಂದು ಸಿ.ಐ.ಟಿ.ಯು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ಅಭಿಪ್ರಾಯಪಟ್ಟರು.
ಗದಗ ಜಿಲ್ಲೆಯಲ್ಲಿ ಬೆಳವಣಿಕಿ ಎಂದರೆ ಅದು ಕಾಮ್ರೇಡ್ ಗಳ ಊರು ಎನ್ನುವಷ್ಟರ ಮಟ್ಟಿಗೆ ಈ ಗ್ರಾಮ ಜನಜನಿತವಾಗಿದೆ.ಕಳೆದ ಎರಡು ದಶಕಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾದ ರಾಜಕಾರಣವನ್ನು ಕಟ್ಟಲು ಈ ಗ್ರಾಮದ ಸಂಗಾತಿಗಳು ಬಿಸಿಯೂಟ ನೌಕರರು, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ನೌಕರರು,ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಹೀಗೆ ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಆ ಮೂಲಕ ಕಳೆದ 20 ವರ್ಷಗಳ ಅವಧಿಯಲ್ಲಿ ಗ್ರಾಮದ ಮಟ್ಟದಲ್ಲಿ ನಿರ್ಣಾಯಕ ರಾಜಕೀಯ ಶಕ್ತಿಯಾಗಿದ್ದಾರೆ.ಈ ಕಾರಣಕ್ಕಾಗಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಗ್ರಾಪಂ ಚುನಾವಣೆಯಲ್ಲಿ ಪ್ರಬಲ ಸ್ಪರ್ಧಿಗಳಾಗಿ ಹೊರಹೊಮ್ಮುತ್ತಿದ್ದಾರೆ.ಈ ಬಾರಿ ನಡೆದ ಗ್ರಾಮ ಪಂಚಾಯತ್ ಚುನಾವಣೆ (
ರಾಜ್ಯದಲ್ಲೆಡೆ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆ ಪ್ರಚಾರದ ಆರ್ಭಟ ಜೋರಾಗಿದ್ದು. ಗ್ರಾಮ ಪಂಚಾಯತ್ ಅಭ್ಯರ್ಥಿಗಳೆಲ್ಲರೂ ಸಹಿತ ಈ ಬಾರಿ ತಮ್ಮ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ,ಆ ಮೂಲಕ ಅಭ್ಯರ್ಥಿಗಳು ಮತದಾರರನ್ನು ತಲುಪುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.