Video: ಶಿವಮೊಗ್ಗದ ಜೋಗ ಜಲಪಾತದಲ್ಲಿ ಶರಾವತಿಯ ರುದ್ರರಮಣೀಯ ನರ್ತನ!

ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಜೋಗ ಜಲಪಾತದಲ್ಲಿ ಭಾರೀ ಪ್ರಮಾಣದ ನೀರು ಧುಮ್ಮಿಕ್ಕಿ ಹರಿಯುತ್ತಿದೆ. ಈ ದೃಶ್ಯವನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. 

Last Updated : Aug 15, 2018, 06:33 PM IST
Video: ಶಿವಮೊಗ್ಗದ ಜೋಗ ಜಲಪಾತದಲ್ಲಿ ಶರಾವತಿಯ ರುದ್ರರಮಣೀಯ ನರ್ತನ! title=

ಶಿವಮೊಗ್ಗ: ಕರ್ನಾಟಕದ ಮಲೆನಾಡು ಹಾಗಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಜೋಗ ಜಲಪಾತದಲ್ಲಿ ಭಾರೀ ಪ್ರಮಾಣದ ನೀರು ಧುಮ್ಮಿಕ್ಕಿ ಹರಿಯುತ್ತಿದೆ. ಈ ದೃಶ್ಯವನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. 

ಕೇರಳದಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ನದಿಗಳು ತುಂಬಿ ಹರಿಯುತ್ತಿದ್ದು, ಕರ್ನಾಟಕದ ಕರಾವಳಿ ಭಾಗದಲ್ಲೂ ಮಳೆ ಮುಂದುವರೆದಿದ್ದು, ಶರಾವತಿ ನದಿ ಮೈದುಂಬಿ ಹರಿಯುತ್ತಿದೆ. ಹೀಗಾಗಿ ಸಾಗರ ತಾಲೂಕಿನ ಕರಗಾಲ್ ಗ್ರಾಮದಲ್ಲಿ ಶರಾವತಿ ನದಿಗೆ ಕಟ್ಟಲಾಗಿರುವ ಲಿಂಗನಮಕ್ಕಿ ಜಲಾಶಯದ ಎಲ್ಲಾ ಗೇಟ್ ಗಳನ್ನೂ ತೆರೆದು ನೀರು ಹರಿಯಬಿಡಲಾಗಿದೆ. ಪರಿಣಾಮ ಭಾರತದ ಎರಡನೇ ಅತಿ ಎತ್ತರದ ಜಲಪಾತ ಎಂದೇ ಹೆಸರಾಗಿರುವ 292 ಮೀ. ಎತ್ತರದ ಜೋಗ ಜಲಪಾತ ಭೋರ್ಗರೆಯುತ್ತಿದ್ದು, ನಾಲ್ಕು ಕವಲುಗಳಾದ ರಾಜ, ರಾಣಿ, ರೋರರ್, ರಾಕೆಟ್ ಗಳ ರುದ್ರ ನರ್ತನ ನೋಡುವುದೇ ಒಂದು ಸೊಗಸು. 

ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆಯಾಡುತ್ತಾ ತಭಾಸದಿಂದ ಧುಮ್ಮಿಕ್ಕುವ ಈ ಜಲಪಾತದ ರುದ್ರ ರಮಣೀಯ ದೃಶ್ಯವನ್ನು ನೀವೂ ನೋಡಿ ಆನಂದಿಸಿ. 

Trending News