ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಇನ್ನು ಒಂದು ವಾರವಷ್ಟೇ ಬಾಕಿ ಇದೆ. ಈ ನಿಟ್ಟಿನಲ್ಲಿ ನಾವು ಕಳೆದ 20 ವರ್ಷಗಳಲ್ಲಿ ಕನ್ನಡಿಗರಿಗೆ ಹೆಚ್ಚಾಗಿ ಮಣೆ ಹಾಕಿರುವ ಪಕ್ಷವನ್ನು ಗುರುತಿಸಬೇಕಾಗಿದೆ.
1998 ರಿಂದ 2018 ರವರೆಗೆ ರಾಜ್ಯಸಭಾ ಸದಸ್ಯರ ಆಯ್ಕೆಯ ಪಟ್ಟಿಯನ್ನು ನೋಡಿದಾಗ ಇದುವರೆಗೆ ಕಾಂಗ್ರೆಸ್‌ನಿಂದ 21, ಬಿಜೆಪಿಯಿಂದ 13, ಜೆಡಿಎಸ್ ನಿಂದ 05, 04 ಪಕ್ಷೇತರರು ಸದಸ್ಯರ ಆಯ್ಕೆಗೆ ಅವಕಾಶ ಸಿಕ್ಕಿದೆ. ಒಟ್ಟು ಕಳೆದ ಇಪ್ಪತ್ತು ವರ್ಷದಲ್ಲಿ ರಾಜ್ಯದಿಂದ ರಾಜ್ಯಸಭಾ 43 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 09 ಸದಸ್ಯರು ಕನ್ನಡತೇರರಾಗಿದ್ದಾರೆ. ಈ ಒಂಭತ್ತರಲ್ಲಿ ಈ ವರೆಗೂ ಎಂಟು ಜನರನ್ನು ಕನ್ನಡೇತರನ್ನ ಬಿಜೆಪಿ ಪಕ್ಷವು ಆಯ್ಕೆ ಮಾಡಿದೆ.
ಅದರಲ್ಲಿ ಪೂರ್ಣ ಬೆಂಬಲದಿಂದ ಆರು, ಎರಡು ಬಾರಿ ಕನ್ನಡೇತರ ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ ಪಕ್ಷವು ಬೆಂಬಲ ನೀಡಿತ್ತು. ಸದ್ಯ ಉಪರಾಷ್ಟಪತಿಗಳಾಗಿರುವ ಆಂದ್ರ ಪ್ರದೇಶದ ವೆಂಕಯ್ಯ ನಾಯ್ಡುರವರು 1998, 2004, 2010. ಮೂರು ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ,ಜೊತೆಗೆ ತಮಿಳುನಾಡಿನ ಹೇಮಾ ಮಾಲಿನಿ ( 2011 ), ಆರ್. ರಾಮಕೃಷ್ಣನ್ ( 2012 ), ನಿರ್ಮಲಾ ಸೀತಾರಾಮನ್ ( 2016 ) ರಾಜ್ಯಸಭಾ ಸದಸ್ಯರಾಗಿದ್ದರು.
ಪಕ್ಷೇತರರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜೀವ್ ಚಂದ್ರಶೇಖರ್ ಗೆ ಜೆಡಿಎಸ್ ನೆರವಿನೊಂದಿಗೆ ಈ ಹಿಂದೆ ಎರಡು ಸಾರಿ ಬಿಜೆಪಿಯು ಅವರಿಗೆ ಬೆಂಬಲ ನೀಡಿತ್ತು.ಈ ಬಾರಿ ಅವರು ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ 2004 ರಲ್ಲಿ ತಮಿಳುನಾಡು ಮೂಲದ ರಾಮಸ್ವಾಮಿ ಎಂ.ಎ.ಎಂ ಎಂಬುವರರನ್ನು ರಾಜ್ಯಸಭೆ ಕಳುಹಿಸಿತ್ತು ಮತ್ತು ಬಿಜೆಪಿ ಜೊತೆ ಸೇರಿ ಎರಡು ಬಾರಿ ರಾಜೀವ್ ಚಂದ್ರಶೇಖರ್ ರವರನ್ನು ಅದು ಬೆಂಬಲಿಸಿದೆ.
ಇನ್ನು ಕಾಂಗ್ರೆಸ್ ವಿಚಾರಕ್ಕೆ ಬರುವುದಾದರೆ 1998 ರಿಂದ ಒಬ್ಬ ಕನ್ನಡೇತರಗೂ ರಾಜ್ಯದಿಂದ ರಾಜ್ಯಸಭೆಗೆ ಅದು ಮಣೆ ಹಾಕಿಲ್ಲ, 21 ಸದಸ್ಯರ ಅವಕಾಶ ಪೈಕಿ 21 ಸದಸ್ಯರನ್ನು ಅದು ಕನ್ನಡದವರನ್ನೇ ಆಯ್ಕೆ ಮಾಡಿದೆ.ಮಾರ್ಚ್ 23 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೂ ಕೂಡಾ ಅದು ಮೂವರು ಕನ್ನಡಿಗರನ್ನು ಕಣಕ್ಕೆ ಇಳಿಸಿದೆ.