Coriander Health Tips: ಕೊತ್ತಂಬರಿ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಹೀಗಿವೆ ನೋಡಿ

ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಮೆದುಳಿನ ಆರೋಗ್ಯವನ್ನು ರಕ್ಷಿಸುತ್ತದೆ. ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಸೋಂಕುಗಳ ವಿರುದ್ಧ ಹೋರಾಡಿ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ. ಹಾಗಾಗಿ ನಿಮ್ಮ ಆಹಾರ ಕ್ರಮದಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಳ್ಳುವುದು ಉತ್ತಮ.

Written by - PRATIBHA ANAND | Last Updated : Apr 7, 2022, 01:00 PM IST
  • ಕೊತ್ತಂಬರಿ ಸೊಪ್ಪಿನ ಆರೋಗ್ಯ ಪ್ರಯೋಜನಗಳು
  • ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳಿದ್ದರೂ ಕೊತ್ತಂಬರಿ ಸೊಪ್ಪಿನಿಂದ ಔಷಧ ಮಾಡಬಹುದು
  • ಹೆಣ್ಣುಮಕ್ಕಳ ಋತುಚಕ್ರದ ಸಮಯದಲ್ಲಿ ಬರುವ ಸಮಸ್ಯೆಗಳಿಗೂ ಮುಕ್ತಿ
Coriander Health Tips: ಕೊತ್ತಂಬರಿ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಹೀಗಿವೆ ನೋಡಿ title=
Coriander Health Tips

ಕೊತ್ತಂಬರಿ ಸೊಪ್ಪನ್ನ ಕೇವಲ ಅಡುಗೆಯ ರುಚಿ ಹೆಚ್ಚಿಸಲು ಅಥವಾ ಮಾಡಿದ ಅಡುಗೆಯ ಅಲಂಕಾರಕ್ಕಾಗಿ ಮಾತ್ರ ಬಳಸುತ್ತೇವೆ. ಆದರೆ ಕೊತ್ತಂಬರಿ ಸೊಪ್ಪಿನಲ್ಲಿರುವ ಪೋಶಕಾಂಶಗಳ ಬಗ್ಗೆ ತಿಳಿದರೆ ಇನ್ಮುಂದೆ ಯಾವುದೇ ಕಾರಣಕ್ಕೂ ನೀವು ತಾತ್ಸಾರ ಮಾಡುವುದಿಲ್ಲ. 

ಇದನ್ನು ಓದಿ: Skin Care: ಧಾರ್ಮಿಕ ಸ್ಥಳಗಳಲ್ಲಿ ಬಳಸುವ ಈ ಎಲೆ ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತೆ

ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಮೆದುಳಿನ ಆರೋಗ್ಯವನ್ನು ರಕ್ಷಿಸುತ್ತದೆ. ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಸೋಂಕುಗಳ ವಿರುದ್ಧ ಹೋರಾಡಿ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ. ಹಾಗಾಗಿ ನಿಮ್ಮ ಆಹಾರ ಕ್ರಮದಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಳ್ಳುವುದು ಉತ್ತಮ.

ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್‌ A ಮತ್ತು C ಹೇರಳವಾಗಿರುತ್ತದೆ. ಅಲ್ಲದೆ  ಕೊತ್ತಂಬರಿ ಸೊಪ್ಪು ಕ್ಯಾಲ್ಸಿಯಂ, ಮೆಗ್ನಿಶಿಯಂ ಹಾಗೂ ಪೊಟಾಶಿಯಂನಂತಹ ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಹಾಗೂ ಸೋಡಿಯಂ ಪ್ರಮಾಣ ಕಡಿಮೆ ಇರುವುದರಿಂದ ಇದರಲ್ಲಿ ಇರುವ ಪೊಟಾಶಿಯಂ ಅಂಶವು ದೇಹದಲ್ಲಿನ ರಕ್ತದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಇದನ್ನು ಓದಿ: Aquarium: ಮನೆಯ ಅಂದ ಹೆಚ್ಚಿಸುವ "ಪುಟ್ಟ ಮತ್ಸ್ಯಲೋಕ"

ಕಣ್ಣಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿದ್ದರೂ ಕೊತ್ತಂಬರಿ ಸೊಪ್ಪನ್ನು ಜಜ್ಜಿ ನೀರಿನಲ್ಲಿ ಬೇಯಿಸಿ ಆ ನೀರನ್ನು ಶುಭ್ರ ಬಟ್ಟೆಯಲ್ಲಿ ಶೋಧಿಸಿ, ನಂತರ ಹತ್ತಿಯಿಂದ ಹನಿಗಳನ್ನು ಕಣ್ಣಿಗೆ ಬಿಟ್ಟುಕೊಂಡರೆ ಕಣ್ಣಿನ ನೋವು ದೂರವಾಗುತ್ತದೆ. ಇನ್ನು ಕೊತ್ತಂಬರಿ ಸೊಪ್ಪಿನಲ್ಲಿ ಅಗತ್ಯವಾದ ಎಣ್ಣೆ ಮತ್ತು ಸಮೃದ್ಧ ಸುವಾಸನೆ ಇರುವುದರಿಂದ ಜಠರದಲ್ಲಿನ ಕಿಣ್ವಗಳು ಹಾಗೂ ಜೀರ್ಣಕಾರಿ ರಸಗಳನ್ನು ವೃದ್ಧಿಗೊಳಿಸುತ್ತದೆ.

ಕೆಲವು ಹೆಣ್ಣು ಮಕ್ಕಳಿಗೆ ಗರ್ಭಾವಸ್ಥೆಯಲ್ಲಿರುವಾಗ ವಾಂತಿ ಮತ್ತು ನಾಸಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅಂತವರು 1 ಕಪ್‌ ಕೊತ್ತಂಬರಿ ಸೊಪ್ಪಿಗೆ  2 ಸ್ಪೂನ್‌ ಸಕ್ಕರೆ ಹಾಗೂ 2 ಗ್ಲಾಸ್‌ ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ ಅದನ್ನು ಸೇವಿಸುವುದರಿಂದ ವಾಕರಿಕೆ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದು.

ಇನ್ನು ಹಲವು ಹೆಣ್ಣುಮಕ್ಕಳು ಋತುಚಕ್ರದ ಸಮಯದಲ್ಲಿ ಬಹಳಷ್ಟು ತೊಂದರೆಯನ್ನು ಎದುರಿಸುತ್ತಾರೆ. ಅಂತಹವರು ಕೊತ್ತಂಬರಿ ಸೊಪ್ಪಿನ ಜ್ಯೂಸ್‌ ಕುಡಿಯುವುದರ ಮೂಲಕ ಸಮಸ್ಯೆಗಳಿಂದ ಮುಕ್ತಿ ಕಾಣಬಹುದು. ಹಾಗೂ ದೇಹದ ಬೊಜ್ಜಿನಾಂಶವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News