Adulterated Salt Effects: ನಕಲು ಉಪ್ಪು ಮೆದುಳಿನ ಆರೋಗ್ಯಕ್ಕೆ ಹಾನಿಕಾರಕ, ಈ ರೀತಿ ಪತ್ತೆ ಹಚ್ಚಿ!

Health Effects Of Adulterated Salt: ಸಾಮಾನ್ಯವಾಗಿ ನಕಲಿ ಉಪ್ಪು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗುತ್ತದೆ, ಅವರ ಸೇವನೆಯಿಂದ ನಿಮ್ಮ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ನಾವು ತಿನ್ನುತ್ತಿರುವ ಉಪ್ಪು ನಕಲಿಯಾಗಿದೆಯಾ ಅಥವಾ ಅಸಲಿಯಾಗಿದೆಯಾ ಎಂಬುದನ್ನು ಹೇಗೆ ತಿಳುದುಕೊಳ್ಳೋಣ ಬನ್ನಿ, (Lifestyle News In Kannada)  

Written by - Nitin Tabib | Last Updated : Mar 23, 2024, 01:24 PM IST
  • ಜನರು ಈ ಕಲಬೆರಕೆ ಉಪ್ಪನ್ನು ಸೇವಿಸಿ ಅರಿವಿಲ್ಲದೆ ತಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಿಕೊಳ್ಳುತ್ತಿದ್ದಾರೆ.
  • ಈ ಲೇಖನದಲ್ಲಿ ನಾವು ಕಲಬೆರಕೆ ಉಪ್ಪನ್ನು ತಿನ್ನುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು,
  • ಅದರ ಜೊತೆಗೆ ನಕಲಿ ಉಪ್ಪನ್ನು ಗುರುತಿಸುವುದು ಹೇಗೆ ಹೇಳಿಕೊಡುತ್ತಿದ್ದೇವೆ.
Adulterated Salt Effects: ನಕಲು ಉಪ್ಪು ಮೆದುಳಿನ ಆರೋಗ್ಯಕ್ಕೆ ಹಾನಿಕಾರಕ, ಈ ರೀತಿ ಪತ್ತೆ ಹಚ್ಚಿ! title=

Health Hazards Of Adulstrated Salt: ಇತ್ತೀಚಿನ ದಿನಗಳಲ್ಲಿ ಶುದ್ಧವಾದ ಮತ್ತು ಅಸಲಿ ಆಹಾರ ಪದಾರ್ಥಗಳನ್ನು ಪತ್ತೆ ಹಚ್ಚಿ ಅವುಗಳನ್ನು ಸೇವಿಸಿ ಆರೋಗ್ಯವಂತವಾಗಿರುವುದು ಒಂದು ಸವಾಲಿನ ಪ್ರಶ್ನೆಯಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ವಸ್ತುಗಳು ಕಲಬೆರಕೆಯಿಂದ ಕೂಡಿದ್ದು, ಅವು ಜನರ ಆರೋಗ್ಯಕ್ಕೆ ಭಾರಿ ಅಪಾಯವನ್ನುಂಟು ಮಾಡುತ್ತಿವೆ. ಮಸಾಲೆ ಪದಾರ್ಥಗಳಿಂದ ಹಿಡಿದು ಚಹಾ ಎಲೆಗಳು ಮತ್ತು ಹಿಟ್ಟಿನಿಂದ ಹಿಡಿದು ಬಿಸ್ಕತ್ತುಗಳು, ಸಾಲ್ಟಿ ಪದಾರ್ಥಗಳಿಂದ ಹಿಡಿದು  ಮತ್ತು ದೇಸಿ ತುಪ್ಪದವರೆಗೆ ಎಲ್ಲದರಲ್ಲೂ ಕಲಬೆರಕೆಯಾಗುತ್ತಿರುವ ಸುದ್ದಿಗಳನ್ನು ನೀವೂ ಕೂಡ ಆಗಾಗ್ಗೆ ಕೇಳಿರಬಹುದು. ಆದರೆ, ದಿನವಿಡೀ ನಿಮ್ಮ ಅಡುಗೆಮನೆಯಲ್ಲಿ ನೀವು ಬಳಸುವ ಉಪ್ಪು (health hazards of eating adultrated salt) ಕೂಡ ಕಲಬೆರಕೆಯಿಂದ ಹೊರತಾಗಿಲ್ಲ ಎಂಬ ಸಂಗತಿ ನಿಮಗೆ ತಿಳಿದಿದೆಯೇ?  ಹೌದು, ಉಪ್ಪು ಕೂಡ ಕಲಬೆರಕೆಗೆ ಗುರಿಯಾಗಿದ್ದು, ಜನರು ತಮ್ಮ ಮನೆಗಳಿಗೂ ಈ ಉಪ್ಪನ್ನು ಕೊಂಡೊಯ್ಯುತ್ತಿದ್ದಾರೆ. (Lifestyle News In Kannada)

ಆದರೆ, ಉಪ್ಪಿನಲ್ಲಿನ ಕಲಬೆರಕೆ ಸುಲಭವಾಗಿ ಪತ್ತೆಯಾಗುವುದಿಲ್ಲ. ಹೀಗಾಗಿ ಜನರು ಈ ಕಲಬೆರಕೆ ಉಪ್ಪನ್ನು ಸೇವಿಸಿ ಅರಿವಿಲ್ಲದೆ ತಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಿಕೊಳ್ಳುತ್ತಿದ್ದಾರೆ. ಈ ಲೇಖನದಲ್ಲಿ ನಾವು ಕಲಬೆರಕೆ ಉಪ್ಪನ್ನು ತಿನ್ನುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅದರ ಜೊತೆಗೆ ನಕಲಿ ಉಪ್ಪನ್ನು ಗುರುತಿಸುವುದು ಹೇಗೆ ಹೇಳಿಕೊಡುತ್ತಿದ್ದೇವೆ. 

ಇದನ್ನೂ ಓದಿ-Mustard Oil-Salt Health Benefits: ಸಾಸಿವೆ ಎಣ್ಣೆ -ಉಪ್ಪಿನಿಂದಾಗುವ ಈ ಜಬರ್ದಸ್ತ್ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ?

ಕಲಬೆರಕೆ ಉಪ್ಪಿನಿಂದಾಗುವ ಹಾನಿಗಳು (health hazards of fake salt)
>> ಕಲಬೆರಕೆ ಉಪ್ಪು ಸೇವನೆಯಿಂದ ಗಂಭೀರ ಯಕೃತ್ತಿನ ಕಾಯಿಲೆ ಎದುರಾಗಬಹುದು. 
>> ಕಲಬೆರಕೆ ಉಪ್ಪು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುವುದಲ್ಲದೆ. ಹೊಟ್ಟೆಯಲ್ಲಿ ಉರಿತ ಮತ್ತು ನೋವಿಗೆ ಕಾರಣವಾಗುತ್ತದೆ
>> ಹೊಟ್ಟೆಯಲ್ಲಿ  ಗ್ಯಾಸ್ ಫಾರ್ಮೇಷನ್ ನಿಂದ ಬಳಲುತ್ತಿರುವವರು ಕಲಬೆರಕೆ ಉಪ್ಪನ್ನು ತಿನ್ನುವುದರಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
>> ಕಲಬೆರಕೆ ಉಪ್ಪು ಮೆದುಳಿಗೆ  ಮತ್ತು ಮೂತ್ರಪಿಂಡಗಳಿಗೆ ಹಾನಿ ಉಂಟು ಮಾಡುತ್ತದೆ.
>> ಈ ಕಾರಣದಿಂದಾಗಿ, ಕಿಡ್ನಿ ಸ್ಟೋನ್ ರೂಪುಗೊಳ್ಳಬಹುದು.
>> ನಕಲಿ ಉಪ್ಪು ತಿನ್ನುವುದರಿಂದ ಗೌಟ್ ಸಮಸ್ಯೆ ಹೆಚ್ಚಾಗಬಹುದು.

ಇದನ್ನೂ ಓದಿ-Diabetes Tips: ಡಯಾಬಿಟೀಸ್ ಇರುವವರು ರಾತ್ರಿ ಮಲಗುವಾಗ ಈ ಒಂದು ಕೆಲಸ ಮಾಡಿ, ಬೆಳಗ್ಗೆ ಈ ಲಾಭ ಸಿಗುತ್ತೆ!

ಈ ರೀತಿ ನಕಲಿ ಮತ್ತು ಅಸಲಿ ಉಪ್ಪು ಪತ್ತೆಹಚ್ಚಿ (Health effects of consuming adulterated salt in india)
ಉಪ್ಪಿನಲ್ಲಿನ ಕಲಬೆರಕೆಯನ್ನು ಪರೀಕ್ಷಿಸಲು ಹತ್ತಿ ಪರೀಕ್ಷೆ ಮಾಡಬಹುದು (How To Identify Fake Salt)
>> ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅದರಲ್ಲಿ 1-2 ಚಮಚ ಉಪ್ಪನ್ನು ಸೇರಿಸಿ.
>> ಈಗ ಹತ್ತಿ ಉಂಡೆ ಅಥವಾ ಹತ್ತಿಯ ತುಂಡನ್ನು ತೆಗೆದುಕೊಂಡು ಅದನ್ನು ಉಪ್ಪು-ನೀರಿನ ಮಿಶ್ರಣಕ್ಕೆ ಹಾಕಿ.
>> ಹತ್ತಿಯನ್ನು 5 ನಿಮಿಷಗಳ ಕಾಲ ಹಾಗೆಯೇ ನೀರಿನಲ್ಲಿ ಬಿಡಿ.
>> ಉಪ್ಪು ನಕಲಿಯಾಗಿದ್ದರೆ ಹತ್ತಿ ತನ್ನ ನೈಸರ್ಗಿಕ ಬಣ್ಣ ಕಳೆದುಕೊಳ್ಳಲು ಪ್ರಾರಂಭಿಸುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News