Friday Remedies: ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಶುಕ್ರವಾರ ಪೂಜೆಯಲ್ಲಿ ಈ ಕೆಲಸ ಮಾಡಿ

Friday Remedies: ಶುಕ್ರವಾರವು ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಈ ದಿನದಂದು ಆಕೆಯ ಆಶೀರ್ವಾದ ಪಡೆಯಲು, ತಾಯಿ ಲಕ್ಷ್ಮಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗಿ ಭಕ್ತರಿಗೆ ವರವನ್ನು ಧಾರೆಯೆರೆಯುತ್ತಾಳೆ ಎಂದು ನಂಬಲಾಗಿದೆ.

Written by - Yashaswini V | Last Updated : May 20, 2022, 07:27 AM IST
  • ಧಾರ್ಮಿಕ ನಂಬಿಕೆಯ ಪ್ರಕಾರ, ಶುಕ್ರವಾರದಂದು ಲಕ್ಷ್ಮಿ ದೇವಿಗೆ ಪೂಜೆಯ ವೇಳೆ ನೆಚ್ಚಿನ ವಸ್ತುಗಳನ್ನು ಅರ್ಪಿಸುವುದರಿಂದ ತಾಯಿ ಬೇಗ ಸಂತುಷ್ಟಳಾಗುತ್ತಾಳೆ.
  • ತಾಯಿ ಲಕ್ಷ್ಮಿಗೆ ಕಮಲದ ಹೂವು ಎಂದರೆ ಅಚ್ಚುಮೆಚ್ಚು.
  • ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ದೇವಿಗೆ ಬಿಳಿ ಬಣ್ಣದ ಸಿಹಿ ತಿನಿಸುಗಳು ಮತ್ತು ಹಾಲಿನ ಉತ್ಪನ್ನಗಳು ಎಂದರೆ ಬಹಳ ಪ್ರಿಯ.
Friday Remedies: ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಶುಕ್ರವಾರ ಪೂಜೆಯಲ್ಲಿ ಈ ಕೆಲಸ ಮಾಡಿ  title=
Must do this work worshiping Goddess Laxmi on friday

ಲಕ್ಷ್ಮಿ ಕೃಪೆಗಾಗಿ ಶುಕ್ರವಾರ ಈ ಕೆಲಸ ಮಾಡಿ: ಶುಕ್ರವಾರ ಹಿಂದೂ ಧರ್ಮದಲ್ಲಿ ಎಲ್ಲಾ ದೇವತೆಗಳಿಗೆ ಸಮರ್ಪಿತವಾಗಿದೆ. ಈ ದಿನದಂದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಸುಖ-ಸಂಪತ್ತು ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ. ಶುಕ್ರವಾರದ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಹಾಗಾಗಿಯೇ, ಪ್ರತಿಯೊಬ್ಬರೂ ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ಶುಕ್ರವಾರದಂದು ವಿಶೇಷ ಪೂಜೆ, ಉಪವಾಸ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.  ಈ ವಿಶೇಷ ದಿನದಂದು ಲಕ್ಷ್ಮಿ ದೇವಿಯನ್ನು ವಿಶೇಷವಾಗಿ ಪೂಜಿಸಿದರೆ ಅಥವಾ ಕೆಲವು ಕ್ರಮಗಳನ್ನು ತೆಗೆದುಕೊಂಡರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ. 

ಧಾರ್ಮಿಕ ನಂಬಿಕೆಯ ಪ್ರಕಾರ, ಶುಕ್ರವಾರದಂದು ಲಕ್ಷ್ಮಿ ದೇವಿಗೆ ಪೂಜೆಯ ವೇಳೆ ನೆಚ್ಚಿನ ವಸ್ತುಗಳನ್ನು ಅರ್ಪಿಸುವುದರಿಂದ ತಾಯಿ ಬೇಗ ಸಂತುಷ್ಟಳಾಗುತ್ತಾಳೆ. ಭಕ್ತರಿಗೆ ಆಶೀರ್ವಾದವನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ. ಶುಕ್ರವಾರದಂದು ಲಕ್ಷ್ಮಿ ದೇವಿ ಪೂಜೆ ಸಮಯದಲ್ಲಿ ಯಾವ ವಸ್ತುಗಳನ್ನು ಅರ್ಪಿಸಬಹುದು ಎಂಬುದನ್ನು ತಿಳಿಯಿರಿ. 

ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಪೂಜೆ ವೇಳೆ ತಪ್ಪದೇ ಮಾಡಿ ಈ ಕೆಲಸ :
* ಲಕ್ಷ್ಮಿ ಪೂಜೆಯಲ್ಲಿರಲಿ ಈ ಹೂವು:

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ ತಾಯಿ ಲಕ್ಷ್ಮಿಗೆ ಕಮಲದ ಹೂವು ಎಂದರೆ ಅಚ್ಚುಮೆಚ್ಚು. ಹಾಗಾಗಿ ಲಕ್ಷ್ಮಿ ಪೂಜೆಯಲ್ಲಿ ಕಮಲದ ಹೂವುಗಳನ್ನು ತಪ್ಪದೇ ಬಳಸಿ.

ಇದನ್ನೂ ಓದಿ- Garuda Purana: ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಇಂದಿನಿಂದಲೇ ಈ ಅಭ್ಯಾಸಗಳನ್ನು ಬಿಟ್ಟುಬಿಡಿ

* ಬಿಳಿ ಬಣ್ಣದ ಸಿಹಿ ತಿನಿಸು:
ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ದೇವಿಗೆ ಬಿಳಿ ಬಣ್ಣದ ಸಿಹಿ ತಿನಿಸುಗಳು ಮತ್ತು ಹಾಲಿನ ಉತ್ಪನ್ನಗಳು ಎಂದರೆ ಬಹಳ ಪ್ರಿಯ. ಆದ್ದರಿಂದ ಶುಕ್ರವಾರದಂದು ಲಕ್ಷ್ಮಿ ಪೂಜೆಯ ವೇಳೆ ಬಿಳಿ  ಬಣ್ಣದ ಸಿಹಿ ತಿನಿಸುಗಳನ್ನು ನೇವೇದ್ಯವಾಗಿ ಅರ್ಪಿಸಿ. ಅದರಲ್ಲೂ ಮುಖ್ಯವಾಗಿ ಹಾಲು, ಅನ್ನದಿಂದ ಮಾಡಿದ ಖೀರ್, ಸಿಹಿ ಪೊಂಗಲ್, ಕ್ಷೀರಾನ್ನವನ್ನು ಅರ್ಪಿಸಬಹುದು. ಪೂಜೆಯ ಬಳಿಕ ಕನ್ಯೆಯರನ್ನು ಮನೆಗೆ ಕರೆಸಿ ಅವರಿಗೆ ಇದನ್ನು ಪ್ರಸಾದವಾಗಿ ನೀಡಿ. ಈ ರೀತಿ ಮಾಡುವುದರಿಂದ ತಾಯಿ ಆದಷ್ಟು ಬೇಗ ಸಂತೋಷಪಡುತ್ತಾಳೆ. ಭಕ್ತರ ಆಸೆ-ಆಕಾಂಕ್ಷೆಗಳನ್ನು ಬೇಗನೆ ಈಡೇರಿಸುತ್ತಾಳೆ ಎನ್ನಲಾಗುವುದು.

* ಶುಕ್ರವಾರದಂದು ಈ ಪರಿಹಾರಗಳನ್ನು ಮಾಡಿ:
- ಶುಕ್ರವಾರ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ, ಆದ್ದರಿಂದ ಈ ದಿನ 'ಓಂ ಶ್ರೀಂ ಶ್ರೀಯೇ ನಮಃ' ಮಂತ್ರವನ್ನು 108 ಬಾರಿ ಜಪಿಸಿ.

- ಮಾತೆ ಲಕ್ಷ್ಮಿಯು ವಿಷ್ಣುವಿನ ಪತ್ನಿ. ಆದ್ದರಿಂದ ಶುಕ್ರವಾರದಂದು, ದಕ್ಷಿಣಾವರ್ತಿ ಶಂಖದಲ್ಲಿ ನೀರನ್ನು ತುಂಬುವ ಮೂಲಕ ವಿಷ್ಣುವನ್ನು ಪೂಜಿಸಿ. ಇದರಿಡ್ನ  ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ.

ಇದನ್ನೂ ಓದಿ- Shukra Rashi Parivartan: ಮೇ 23 ರಿಂದ ಬೆಳಗಲಿದೆ ಈ ಐದು ರಾಶಿಯವರ ಅದೃಷ್ಟ

- ಶುಕ್ರವಾರದಂದು ಲಕ್ಷ್ಮಿ ದೇವಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿ ಮತ್ತು ದೀಪದಲ್ಲಿ ಸ್ವಲ್ಪ ಕುಂಕುಮವನ್ನು ಹಾಕಿ.

- ಶುಕ್ರವಾರದ  ದಿನ ದಾನಕ್ಕೂ ವಿಶೇಷ ಮಹತ್ವವಿದೆ. ಈ ದಿನ ಬಡವರಿಗೆ ಮತ್ತು ನಿರ್ಗತಿಕರಿಗೆ ಬಿಳಿ ಅಕ್ಕಿ ಮತ್ತು ಬಟ್ಟೆಗಳನ್ನು ದಾನ ಮಾಡಿ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ  ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News