Ketu Transit: ಕೇತು ರಾಶಿ ಪರಿವರ್ತನೆ, ಈ ರಾಶಿಯವರ ಮೇಲೆ ನೇರ ಪರಿಣಾಮ

Ketu Transit: ಒಂದು ಗ್ರಹದ ಬದಲಾವಣೆಯಿಂದಾಗಿ, ಅದರ ಪರಿಣಾಮವು ಎಲ್ಲಾ 12 ರಾಶಿಚಕ್ರ ಚಿಹ್ನೆಗಳಲ್ಲಿ ಕಂಡುಬರುತ್ತದೆ. ಕೇತು ಒಂದು ನೆರಳು ಗ್ರಹ. ಏಪ್ರಿಲ್ 12 ರಂದು ಕೇತುವಿನ ರಾಶಿ ಬದಲಾವಣೆಯಾಗಲಿದೆ. ಜಾತಕದಲ್ಲಿ ಕೇತು ಸಂಚರಿಸುವ ಸ್ಥಳಕ್ಕನುಗುಣವಾಗಿ ಆ ವ್ಯಕ್ತಿಯ ಲಾಭಗಳಾಗುತ್ತವೆ. 

Written by - Yashaswini V | Last Updated : Jan 27, 2022, 07:39 AM IST
  • ಕೇತುವಿನ ಸಂಚಾರದಿಂದ ಆರೋಗ್ಯ ಸಮಸ್ಯೆಗಳು ಬರಬಹುದು
  • ಕಾರ್ಯಶೈಲಿಯಲ್ಲಿ ಬದಲಾವಣೆ ಇರುತ್ತದೆ
  • ಕೆಲಸದಲ್ಲಿ ತೊಂದರೆಗಳನ್ನು ಎದುರಿಸಬಹುದು
Ketu Transit: ಕೇತು ರಾಶಿ ಪರಿವರ್ತನೆ, ಈ ರಾಶಿಯವರ ಮೇಲೆ ನೇರ ಪರಿಣಾಮ title=
Ketu Transit Effects

Ketu Transit: ಜ್ಯೋತಿಷ್ಯದ ಪ್ರಕಾರ, ಗ್ರಹಗಳು ರಾಶಿಯನ್ನು ಬದಲಾಯಿಸಿದಾಗ, ಅದರ ಪ್ರಭಾವವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಇರುತ್ತದೆ. ಗ್ರಹಗಳ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರಿಗೆ ಒಳ್ಳೆಯ ಫಲಿತಾಂಶಗಳು ಲಭ್ಯವಾದರೆ, ಇನ್ನೂ ಕೆಲವು ರಾಶಿಯವರಿಗೆ ಅಶುಭ ಫಲಗಳು ಸಿಗಲಿವೆ. 

ಒಂದು ಗ್ರಹದ ಬದಲಾವಣೆಯಿಂದಾಗಿ, ಅದರ ಪರಿಣಾಮವು ಎಲ್ಲಾ 12 ರಾಶಿಚಕ್ರ ಚಿಹ್ನೆಗಳಲ್ಲಿ ಕಂಡುಬರುತ್ತದೆ. ಕೇತು ಒಂದು ನೆರಳು ಗ್ರಹ. ಏಪ್ರಿಲ್ 12 ರಂದು ಕೇತುವಿನ ರಾಶಿ ಬದಲಾವಣೆಯಾಗಲಿದೆ. ಜಾತಕದಲ್ಲಿ ಕೇತು ಸಂಚರಿಸುವ ಸ್ಥಳಕ್ಕನುಗುಣವಾಗಿ ಆ ವ್ಯಕ್ತಿಯ ಲಾಭಗಳಾಗುತ್ತವೆ. 

ಕೇತುವಿನ ಈ ಬದಲಾವಣೆಯು (Ketu Rashi Parivartan) ಮೇಷ ರಾಶಿಯವರಿಗೆ ವಿಶೇಷವಾಗಿರುತ್ತದೆ ಎಂದು ಹೇಳಲಾಗುತ್ತದೆ. ಕೇತುವಿನ ರಾಶಿ ಪರಿವರ್ತನೆಯು ಮೇಷ ರಾಶಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.

ಇದನ್ನೂ ಓದಿ- Surya Rashi Parivartan: ಸೂರ್ಯನ ರಾಶಿ ಬದಲಾವಣೆಯಿಂದ ಯಾರ ಜೀವನ ಉಜ್ವಲಿಸಲಿದೆ? ಯಾರಿಗೆ ಕಷ್ಟ?

ಈ ಬದಲಾವಣೆಗಳು ಜೀವನದಲ್ಲಿ ಬರಬಹುದು:
ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಕೇತುವು ಮೇಷ ರಾಶಿಯ ಜೀವನ ಪಾಪದಲ್ಲಿ ಸಂಚರಿಸುತ್ತಾನೆ. ಮೇಷ ರಾಶಿಯವರು ಕೇತುವಿನ ಈ ಪ್ರಯಾಣದಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೇ ಕೇತುವಿನ ರಾಶಿಚಕ್ರ ಬದಲಾವಣೆಯಿಂದಾಗಿ ಹಲವು ಸಮಸ್ಯೆಗಳು ಎದುರಾಗಬಹುದು. ಕಾರ್ಯಶೈಲಿಯಲ್ಲಿ ಬದಲಾವಣೆ ಇರುತ್ತದೆ ಮತ್ತು ನಿಮ್ಮ ಶ್ರಮಕ್ಕೆ ತಕ್ಕಂತೆ ಯಶಸ್ಸು ಸಿಗುವುದಿಲ್ಲ. ಕೆಲಸದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು.

ಇದನ್ನೂ ಓದಿ- ಶನಿಯ ರಾಶಿಯಲ್ಲಿ ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಜನೆ, 3 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು

ಮೇಷ (Aries) ವ ರಾಶಿಯವರು ಈ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು:
ಮೇಷ ರಾಶಿಯವರು ಕೇತು ಪ್ರಯಾಣದ ಸಮಯದಲ್ಲಿ ಜಾಗರೂಕರಾಗಿರಬೇಕು. ಈ ಅವಧಿಯಲ್ಲಿ ಕೋಪ ಮತ್ತು ಮಾತನ್ನು ನಿಯಂತ್ರಿಸಬೇಕು. ಸಣ್ಣ ವಿಷಯಗಳಿಗೆ ಜಗಳಗಳು ಬರಬಹುದು. ಈ ಸಮಯದಲ್ಲಿ ಸಂಗಾತಿಯ ಬಗ್ಗೆ ವಿಶೇಷ ಗಮನ ಹರಿಸಬೇಕು. ನೀವು ಈಗಾಗಲೇ ಯಾವುದೇ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ, ನಿರ್ಲಕ್ಷಿಸದೆ ವೈದ್ಯಕೀಯ ಸಲಹೆಯನ್ನು ಪಡೆಯಿರಿ.

ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ದೃಢಪಡಿಸಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News