Mercury Retrograde 2021: ಒಂಬತ್ತು ಗ್ರಹಗಳಲ್ಲಿ ಬುಧ ಗ್ರಹ ವಿಶೇಷ ಮಹತ್ವಹೊಂದಿದೆ. ಬುಧನನ್ನು ಬುದ್ಧಿಯ ಕಾರಕ ಎಂದು ಪರಿಗಣಿಸಲಾಗುತ್ತದೆ. ಬುಧ ಜೇಷ್ಠ ಮಾಸದ ಅಷ್ಟಮಿ ತಿಥಿಯಂದು ಅಂದರೆ 02 ಜೂನ್ 2021ರಂದು ಅಂದರೆ ಬುಧವಾರ ರಾತ್ರಿ 2ಗಂಟೆ 12 ನಿಮಿಷಕ್ಕೆ ವಕ್ರಿಯಾಗಲಿದ್ದಾನೆ. ಇದಾದ ಬಳಿಕ ಬುಧ ಜೂನ್ 04 ರಂದು ಪಶ್ಚಿಮದಲ್ಲಿ ಅಸ್ತನಾಗಲಿದ್ದಾನೆ (Budh Ast 2021). ಜ್ಯೋತಿಷ್ಯ (Astrology) ತಜ್ಞರ ಪ್ರಕಾರ, ಬುಧದೇವ ವಕ್ರಿಯಾಯಾದಾಗ ಹಾಗೂ ಅಸ್ತನಾಗಿರುವಾಗ ತುಂಬಾ ಕಡಿಮೆ ಪ್ರಭಾವಶಾಲಿಯಗಿರುತ್ತಾನೆ ಎನ್ನಲಾಗುತ್ತದೆ. ಬುಧನ ಈ ವಕ್ರಾವಸ್ಥೆ ಎಲ್ಲ 12 ರಾಶಿಗಳ (Zodiac Signs) ಮೇಲೆ ಪ್ರಭಾವ ಬೀರಲಿದೆ.
ಇದನ್ನೂ ಓದಿ- ದೇವರ ಕೋಣೆಯ ವಿಚಾರದಲ್ಲಿ ಈ ತಪ್ಪುಗಳು ಆಗದಿರಲಿ ಎಚ್ಚರ..!
ಪುನಃ ಬುಧ ಯಾವಾಗ ದಾರಿಗೆ ಬರಲಿದ್ದಾನೆ?
ಜೂನ್ 11ರ ರಾತ್ರಿ 3 ಗಂಟೆ 30 ನಿಮಿಷಕ್ಕೆ ಬುಧ (Mercury Retrograde) ಮತ್ತೆ ನನ್ನ ದಾರಿಗೆ ಬರಲಿದ್ದಾನೆ. ಇದಾದ ಬಳಿಕ ಜೂನ್ 20 ರಂದು ಮತ್ತೆ ಬುಧ ಉದಯಿಸಲಿದ್ದಾನೆ. ಈ ಅವಧಿಯಲ್ಲಿ ಬುಧ ತನ್ನ ನೀಚರಾಶಿಯಾಗಿರುವ ಮೀನ ರಾಷ್ಟಿಯಲ್ಲಿ ವಕ್ರಿಯಾಗಲಿದ್ದಾನೆ. ಹಸಿರು ವಸ್ತುಗಳ ದಾನ ಹಾಗೂ ಬಳಕೆ ಮಾಡುವುದರಿಂದ ಬುಧದೇವನ ಶುಭ ಪ್ರಭಾವ ಪ್ರಾಪ್ತಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.
ಇದನ್ನೂ ಓದಿ- ದೇವಾನುದೇವತೆಗಳ ಅನುಗ್ರಹಕ್ಕಾಗಿ ಕೇವಲ ಈ ಕೆಲಸ ಮಾಡಿ
ಬುಧ ವಕ್ರಿಯ ಪ್ರಭಾವ (Impact Of Mercury Retrograde)
ತನ್ನ ನೀಚರಾಶಿಯಲ್ಲಿ ಬುಧಗ್ರಹದ ಉಲ್ಟಾ ನಡೆ ವೃಷಭ, ಮಿಥುನ, ಕರ್ಕ, ಕನ್ಯಾ, ವೃಶ್ಚಿಕ, ಕುಂಭ ಹಾಗೂ ಮಕರ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ಅವಧಿಯಲ್ಲಿ ಮೇಷ, ಧನು, ತುಲಾ ಹಾಗೂ ಮೀನ ರಾಶಿಯ ಜನರು ಎಚ್ಚರಿಕೆಯಿಂದಿರಬೇಕಾಗಲಿದೆ. ಈ ಅವಧಿಯಲ್ಲಿ ಬುಧನ ಶುಭ ಫಲ ಪ್ರಾಪ್ತಿಗಾಗಿ ಓಂ ಬ್ರಾಂ ಬ್ರಿಂ ಬ್ರೌಂ ಸಃ ಬುಧಾಯನಮಃ ಮಂತ್ರವನ್ನು (Budh Mantra) ಜಪಿಸಬೇಕು.
ಇದನ್ನೂ ಓದಿ- ಈ ದಿನ ನಡೆಯಲಿದೆ ವರ್ಷದ ಮೊದಲ ಸೂರ್ಯಗ್ರಹಣ : ಇಲ್ಲಿದೆ ಸಂಪೂರ್ಣ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ