ಈ ಚಹಾ ಸೇವನೆಯಿಂದ ನಿಮ್ಮ ಚರ್ಮ ಒಳಗಿನಿಂದ ಕಾಂತಿಯುತವಾಗಿ ಕಾಣುತ್ತದೆ..!

Beautiful Glowing Skin: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬಿಡುವಿಲ್ಲದ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ, ವಾಯು ಮಾಲಿನ್ಯವು ಮುಖದ ಮೇಲೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಡುಗೆ ಮನೆಯಲ್ಲಿ ಸಿಗುವ  ಪದಾರ್ಥಗಳಿಂದ ತಯಾರಿಸಿದ ನ್ಯಾಚುರಲ್ ಟೀ ಕುಡಿಯುವುದರಿಂದ ಮುಖದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

Written by - Zee Kannada News Desk | Last Updated : Jun 18, 2024, 12:25 PM IST
  • ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ತಯಾರಿಸಿದ ನ್ಯಾಚುರಲ್ ಟೀ ಕುಡಿಯುವುದರಿಂದ ಮುಖದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
  • ಸೋಂಪು, ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪಿನಿಂದ ತಯಾರಿಸಿದ ಅದ್ಭುತ ಚಹಾ ಇದಾಗಿದೆ.
  • ಈ ಚಹಾ ಮೊಡವೆ ಮತ್ತು ಕಲೆಗಳ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈ ಚಹಾ ಸೇವನೆಯಿಂದ ನಿಮ್ಮ ಚರ್ಮ ಒಳಗಿನಿಂದ ಕಾಂತಿಯುತವಾಗಿ ಕಾಣುತ್ತದೆ..! title=

Beautiful Skin: ಸೋಂಪು, ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪಿನಿಂದ ತಯಾರಿಸಿದ ಅದ್ಭುತ ಚಹಾ ಇದಾಗಿದೆ. ಸಾಮಾನ್ಯವಾಗಿ ಸೋಂಪು, ಜೀರಿಗೆ, ಕೊತ್ತಂಬರಿ ಸೊಪ್ಪು ಎಲ್ಲ ಮನೆಗಳಲ್ಲೂ ಬಳಸುತ್ತಾರೆ. ಆಹಾರದ ರುಚಿ ಮತ್ತು ಪೋಷಣೆಯನ್ನು ಸುಧಾರಿಸಲು ಇದನ್ನು ಬಳಸಲಾಗುತ್ತದೆ. ಹೆಚ್ಚಿನ ಲಾಭ ಪಡೆಯಲು ಜೀರಿಗೆ, ಸೋಂಪು, ಕೊತ್ತಂಬರಿ ಸೊಪ್ಪಿನ ಕಷಾಯ ಮಾಡಿ ಕುಡಿಯಬಹುದು. 

ದಿನಾ ಬೆಳಗ್ಗೆ ಈ ಚಹಾ ಕುಡಿಯುವುದರಿಂದ ನೈಸರ್ಗಿಕ ಹೊಳಪನ್ನು ನೀಡುತ್ತದೆ ಮತ್ತು ದಿನವಿಡೀ ತಾಜಾವಾಗಿರಿಸುರತ್ತದೆ. ಈ ಮೂರು ಪದಾರ್ಥಗಳಲ್ಲಿ ನಂಜುನಿರೋಧಕ ಗುಣಗಳು ಸಮೃದ್ಧಿಯಾಗಿವೆ. ಇದರಿಂದ ಮುಖದಲ್ಲಿ ಯಾವುದೇ ಸೋಂಕು ಉಂಟಾಗುವುದಿಲ್ಲ.

ಇದನ್ನೂ ಓದಿ: ನಿಮ್ಮ ಮುಖವನ್ನು ಸೆಕೆಂಡುಗಳಲ್ಲಿ ಕಾಂತಿಯುತಗೊಳಿಸುವ ಫೇಸ್ ಪ್ಯಾಕ್..

ಒಂದು ವೇಳೆ ನೀವು ಎಣ್ಣೆಯುಕ್ತ ಚರ್ಮದಿಂದ ಬಳಲುತ್ತಿದ್ದರೆ, ಬೇಸಿಗೆಯಲ್ಲಿ ಈ ಚಹಾವನ್ನು ಕುಡಿಯಿರಿ. ಏಕೆಂದರೆ ಶಾಖ ಮತ್ತು ಬೆವರಿನ ಕಾರಣ, ಚರ್ಮದ ಮೇಲೆ ಹೆಚ್ಚು ಎಣ್ಣೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕೊಳಕು ಸಂಗ್ರಹವಾಗುತ್ತದೆ. ಇದು ಅನೇಕ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಲ್ಲದೆ, ಬೇಸಿಗೆಯಲ್ಲಿ ಮೊಡವೆ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಅದ್ದರಿಂದಾಗಿ ಈ ಚಹಾವನ್ನು ಸೇವಿಸುವುದರಿಂದ  ಚರ್ಮವನ್ನು ತಂಪಾಗಿರಿಸುತ್ತದೆ. 

ಅದಷ್ಟೇ ಅಲ್ಲದೆ ಈ ಚಹಾ ಮೊಡವೆ ಮತ್ತು ಕಲೆಗಳ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾರ್ಮೋನುಗಳನ್ನು ಸಮತೋಲನಗೊಳಿಸುವ ಮೂಲಕ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ನಿರ್ವಹಿಸುತ್ತದೆ ಇದು ಚರ್ಮಕ್ಕೆ ಆರೋಗ್ಯಕರ ತ್ವಚೆಯ ಜೊತೆಗೆ ಹೊಳಪನ್ನು ನೀಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News