Tulsi Remedy: ದಾರಿದ್ರ್ಯ-ದೌರ್ಭಾಗ್ಯ ತೊಲಗಿಸಲು ತುಳಸಿ ಗಿಡದ ಬುಡದಲ್ಲಿ ಈ ದಿನ ಈ ವಸ್ತುವನ್ನಿಡಿ

Tulsi Remedy: ಹಿಂದೂ ಧರ್ಮಶಾಸ್ತ್ರಗಳಲ್ಲಿ ತುಳಸಿಗೆ ಪೂಜ್ಯನೀಯ ಸ್ಥಾನ ಪ್ರಾಪ್ತಿಯಾಗಿದೆ. ತುಳಸಿಗೆ ಸಂಬಂಧಿಸಿದ ಉಪಾಯಗಳನ್ನು ಮಾಡಿದರೆ ಹಾಗೂ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿದರೆ ವ್ಯಕ್ತಿಯ ಮನೆಯಲ್ಲಿ ಸುಖ-ಸಮೃದ್ಧಿ ಹಾಗೂ ಧನದ ಹರಿವು ಹೆಚ್ಚಾಗುತ್ತದೆ ಮತ್ತು ದೌರ್ಭಾಗ್ಯ ತೊಲಗುತ್ತದೆ.   

Written by - Nitin Tabib | Last Updated : May 27, 2022, 04:31 PM IST
  • ದಾರಿದ್ರ್ಯ-ದುರಾದೃಷ್ಟ ಜೀವನದಿಂದ ದೂರಗೊಳಿಸಬೇಕೇ?
  • ತುಳಸಿಗೆ ಸಂಬಂಧಿಸಿದ ಈ ಉಪಾಯ ಮಾಡಿ
  • ಈ ಉಪಾಯವನ್ನು ಭಾನುವಾರ ಅಥವಾ ಏಕಾದಶಿಯ ದಿನ ಮಾಡಿದರೆ ಸಾಕಷ್ಟು ಶ್ರೇಯಸ್ಕರ
Tulsi Remedy: ದಾರಿದ್ರ್ಯ-ದೌರ್ಭಾಗ್ಯ ತೊಲಗಿಸಲು ತುಳಸಿ ಗಿಡದ ಬುಡದಲ್ಲಿ ಈ ದಿನ ಈ ವಸ್ತುವನ್ನಿಡಿ title=
Tulsi Remedy

Tulsi Tips: ಸನಾತನ ಧರ್ಮದಲ್ಲಿ ಅನೇಕ ಸಸ್ಯಗಳಿಗೆ ಪೂಜ್ಯ ಸ್ಥಾನವಿದೆ. ಅವುಗಳಲ್ಲಿ ತುಳಸಿ ಗಿಡವೂ ಕೂಡ ಒಂದು. ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ತುಳಸಿ ಪೂಜೆಯ ಬಗ್ಗೆ ಹಲವು ವಿಧಿ-ವಿಧಾನಗಳನ್ನು ಹೇಳಲಾಗಿದೆ. ತುಳಸಿಯನ್ನು ನಿಯಮಿತವಾಗಿ ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಾಗುತ್ತದೆ ಮತ್ತು ಸಾಕಷ್ಟು ಸಂಪತ್ತು ಹರಿದುಬರುತ್ತದೆ ಎಂದು ನಂಬಲಾಗಿದೆ. ವಿಷ್ಣು ಮತ್ತು ತಾಯಿ ತುಳಸಿಯ ಕೃಪೆಯಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ.

ಧರ್ಮ ಶಾಸ್ತ್ರಗಳ ಪ್ರಕಾರ, ತುಳಸಿ ಗಿಡದ ಪೂಜೆಯ ಬಗ್ಗೆ ಹಲವು ನಿಯಮಗಳನ್ನು ಹೇಳಲಾಗಿದೆ ಏಕಾದಶಿ ಮತ್ತು ಭಾನುವಾರದಂದು ತುಳಸಿ ಗಿಡಕ್ಕೆ ನೀರು ಹಾಕುವುದನ್ನು ನಿಷೇಧಿಸಲಾಗಿದೆ. ತುಳಸಿ ದೇವಿ ಈ ದಿನಗಳಂದು ಉಪವಾಸ ಮಾಡುತ್ತಾಳೆ ಮತ್ತು ನೀರುಣಿಸುವುದರಿಂದ ಆಕೆಯ ಉಪವಾಸ ಮುರಿದಂತಾಗುತ್ತದೆ. ವ್ಯಕ್ತಿಯು ಪಾಪದ ಪಾಲುದಾರನಾಗುತ್ತಾನೆ ಎಂದು ನಂಬಲಾಗಿದೆ. ತುಳಸಿ ಮಾತೆಗೆ ಸಂಬಂಧಿಸಿದ ಪರಿಹಾರವೊಂದು ವ್ಯಕ್ತಿಯ ದುರದೃಷ್ಟವನ್ನು ತೊಲಗಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಯಾವುದು ಆ ಉಪಾಯ ತಿಳಿದುಕೊಳ್ಳೋಣ ಬನ್ನಿ.

ದುರದೃಷ್ಟವನ್ನು ಹೋಗಲಾಡಿಸಲು ತುಳಸಿಗೆ ಸಂಬಂಧಿಸಿದ ಈ ಉಪಾಯವನ್ನು ಅನುಸರಿಸಿ 
ನಿಮ್ಮ ಮುಚ್ಚಿದ ಅದೃಷ್ಟದ ಬಾಗಿಲನ್ನು ತೆರೆಯಲು ನೀವು ಬಯಸುತ್ತಿದ್ದರೆ ಅಥವಾ ನಿಮ್ಮ ಹಣೆಬರಹವನ್ನು ಬದಲಾಯಿಸಲು ಬಯಸುತ್ತಿದ್ದರೆ, ಏಕಾದಶಿಯ ದಿನದಂದು ಈ ಕ್ರಮಗಳನ್ನು ತೆಗೆದುಕೊಳ್ಳುವುದು ದೇವಿ ಲಕ್ಷ್ಮಿಯ ಮೆಚ್ಚುಗೆಗೆ ಪಾತ್ರವಾಗಲಿದೆ. ಮತ್ತು ದುರದೃಷ್ಟವು ದೂರಕ್ಕೆ ತೊಲಗುತ್ತದೆ. 

>> ಇದಕ್ಕಾಗಿ ನೀವು ಮಾಡಬೇಕಾಗಿರುವ ಕೆಲಸ ಎಂದರೆ ಮಣ್ಣಿನ ಅಥವಾ ಹಿಟ್ಟಿನ ದೀಪವನ್ನು ತಯಾರಿಸಿಕೊಳ್ಳಬೇಕು. ಹಿಟ್ಟಿನ ದೀಪವನ್ನು ಮಾಡುವಾಗ, ಅಪ್ಪಿತಪ್ಪಿಯೂ ಕೂಡ ಅದರಲ್ಲಿ ಉಪ್ಪು ಬೆರಸಬೇಡಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

>> ಇದರ ನಂತರ, ಸಂಜೆ ತುಳಸಿಯ ಬಳಿ ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಅದರಲ್ಲಿ ಒಂದು ಚಿಟಿಕೆ ಅರಿಶಿನವನ್ನು ಹಾಕಿ. ಮತ್ತು ಈ ದೀಪವನ್ನು ತುಳಸಿಯ ಬುಡದಲ್ಲಿ ಇರಿಸಿ.

>> ದೀಪವನ್ನು ಇಡುವಾಗ, ತಾಯಿ ತುಳಸಿಯನ್ನು ನೀವು ಸ್ಪರ್ಶಿಸುತ್ತಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಏಕೆಂದರೆ ಏಕಾದಶಿಯ ದಿನ ಮತ್ತು ಭಾನುವಾರದ ದಿನ ತುಳಸಿಯನ್ನು ಸ್ಪರ್ಶಿಸಬಾರದು ಎಂಬುದನ್ನು ನೆನಪಿನಲ್ಲಿಡಿ. 

>> ಒಂದು ವೇಳೆ ನಿಮ್ಮ ಮನೆಯಲ್ಲಿ ತುಳಸಿ ಗಿಡವಿಲ್ಲದಿದ್ದರೆ, ದೀಪವನ್ನು ನೀವು ದೇವಸ್ಥಾನದಲ್ಲೂ ಇರಿಸಬಹುದು. ಆದರೆ, ದೀಪವನ್ನು ಇಡುವಾಗ ಅದರ ದಿಕ್ಕನ್ನು ನೋಡಿಕೊಳ್ಳುವುದು ತುಂಬಾ ಮುಖ್ಯ.

>> ತುಳಸಿ ಗಿಡದ ಬುಡದಲ್ಲಿ ಈ ದೀಪವನ್ನು ಉತ್ತರ ದಿಕ್ಕಿನಲ್ಲಿ ಇಡಿ. ಅಲ್ಲದೆ, ದೀಪದ ಜೊತೆಗೆ ಸ್ವಲ್ಪ ಬೆಲ್ಲವನ್ನು ಗಿಡದಲ್ಲಿ ಇರಿಸಿ.

>> ಬೆಲ್ಲ ಶ್ರೀವಿಷ್ಣುವಿಗೆ ತುಂಬಾ ಪ್ರಿಯವಾಗಿದೆ ಮತ್ತು ಬೆಲ್ಲವು ವ್ಯಕ್ತಿಗೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಇದೇ ವೇಳೆ, ಅರಿಶಿನವು ದುರದೃಷ್ಟವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಏಕಾದಶಿಯ ದಿನ ದೇವಿ ತುಳಸಿ ವಿಷ್ಣುವಿನ ಸೇವೆಯಲ್ಲಿರುತ್ತಲೇ ಎಂಬುದು ಧಾರ್ಮಿಕ ನಂಬಿಕೆ. 

>> ಇದಲ್ಲದೆ, ತುಳಸಿ ಗಿಡದ ಬಳಿ ಕುಳಿತು  ಓಂ ನಮೋ ಭಗವತೇ ವಾಸುದೇವಾಯ ನಮಃ ಎಂದು ಕನಿಷ್ಠ 108 ಬಾರಿ ಜಪಿಸಿ. ಮತ್ತು ನಿಮ್ಮ ಎಲ್ಲಾ ಸಮಸ್ಯೆಗಳನ್ನು ದೇವಿ ತುಳಸಿ ಮತ್ತು ಶ್ರೀ ವಿಷ್ಣುವಿನ ಮುಂದೆ ಇರಿಸಿ.

ಇದನ್ನೂ ಓದಿ-Astro Tips: ಈ ರೀತಿಯ ಕೆಲಸಗಳನ್ನು ಮಾಡಿದರೆ ಜಾತಕದ ಶುಭ ಗ್ರಹಗಳು ಕೂಡ ಅಶುಭ ಫಲಿತಾಂಶ ನೀಡುತ್ತವೆ

>> ಮರುದಿನ ಹಸುವಿಗೆ ಹಿಟ್ಟಿನಿಂದ ಮಾಡಿದ ದೀಪವನ್ನು ತಿನ್ನಿಸಿ. ಈ ದೀಪವನ್ನು ಬೇರೆ ಎಲ್ಲಿಯೂ ಇಡಬೇಡಿ.

ಇದನ್ನೂ ಓದಿ-Good And Bad Indications Of Crow: ಶುಭ ಹಾಗೂ ಅಶುಭಗಳ ಕುರಿತು ತುಂಬಾ ಮಹತ್ವದ ಸಂಕೇತಗಳನ್ನು ನೀಡುತ್ತದೆ ಯಮದೂತ ಕಾಗೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News