Vastu Tips: Kitchenನಲ್ಲಿ ಅಪ್ಪಿ-ತಪ್ಪಿಯೂ ಕೂಡ ಈ ವಸ್ತುಗಳನ್ನಿಡಬೇಡಿ, ಇಲ್ದಿದ್ರೆ ಆರ್ಥಿಕ ಸಂಕಷ್ಟದಿಂದ ಜೀವನವೇ ಗೋಳು

Kitchen Vastu Tips - ಅಡುಗೆ ಮನೆಯನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನುತ್ತಾರೆ. ಆದರೆ ಕೆಲವು ವಿಷಯಗಳನ್ನು ನಿರ್ಲಕ್ಷಿಸಿದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ವಾಸ್ತು ಪ್ರಕಾರ (Vastu Shastra) ಕೆಲವು ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಬಾರದು.

Written by - Nitin Tabib | Last Updated : Jan 24, 2022, 08:13 PM IST
  • ಮನೆಯಲ್ಲಿರಲ್ಲ ದೇವಿ ಲಕುಮಿಯ ವಾಸ.
  • ಮನೆಯಲ್ಲಿರಲಿದೆ ಆರ್ಥಿಕ ಮುಗ್ಗಟ್ಟು
  • ಮನೆಯಲ್ಲಿ ಹೆಚ್ಚಾಗಲಿದೆ ಋಣಾತ್ಮಕ ಶಕ್ತಿಯ ಪ್ರಭಾವ
Vastu Tips: Kitchenನಲ್ಲಿ ಅಪ್ಪಿ-ತಪ್ಪಿಯೂ ಕೂಡ ಈ ವಸ್ತುಗಳನ್ನಿಡಬೇಡಿ, ಇಲ್ದಿದ್ರೆ ಆರ್ಥಿಕ ಸಂಕಷ್ಟದಿಂದ ಜೀವನವೇ ಗೋಳು  title=
Things Not To Keep In Kitchen (File Photo)

ನವದೆಹಲಿ: Things Not To Keep In Kitchen - ಅಡುಗೆ ಮನೆ ಯಾವುದೇ ಒಂದು ಮನೆಯ ಪ್ರಮುಖ ಸ್ಥಳವಾಗಿದೆ. ಲಕ್ಷ್ಮಿ ಮತ್ತು ಅನ್ನಪೂರ್ಣ ದೇವಿಯು ಅಡುಗೆ ಮನೆಯಲ್ಲಿ (Kitchen Vastu Tips In Kannada) ನೆಲೆಸಿರುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ. ಆದ್ದರಿಂದಲೇ ಅಡುಗೆ ಮನೆಯನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹೇಳಲಾಗುತ್ತದೆ. ಆದರೆ ಕೆಲವು ವಿಷಯಗಳನ್ನು ನಿರ್ಲಕ್ಷಿಸಿದರೆ, ನಕಾರಾತ್ಮಕ ಶಕ್ತಿಯು ಮನೆಯಲ್ಲಿ ಹರಡಲು ಪ್ರಾರಂಭಿಸುತ್ತದೆ. ಇದು ಕುಟುಂಬದ ಎಲ್ಲ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಬಾರದು, ಏಕೆಂದರೆ ಅವು ಸಮಸ್ಯೆಗಳನ್ನು ಉಂಟುಮಾಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಅಡುಗೆ ಮನೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಕನ್ನಡಿ
ಮನೆಯನ್ನು ಸುಂದರವಾಗಿಸಲು ಕೆಲವರು ಅಡುಗೆಮನೆಯಲ್ಲಿ ಕನ್ನಡಿ ಅಳವಡಿಸಿಕೊಳ್ಳುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಕನ್ನಡಿ ಬಳಸಬಾರದು. ವಾಸ್ತವವಾಗಿ, ಅಡುಗೆಮನೆಯಲ್ಲಿನ ಒಲೆ ಬೆಂಕಿ ದೇವರ ಸೂಚಕವಾಗಿದೆ. ಕನ್ನಡಿಯಲ್ಲಿ ಬೆಂಕಿಯ ಪ್ರತಿಬಿಂಬ ಕಂಡರೆ ಮನೆಯಲ್ಲಿ ಅಶುಭ ಉಂಟಾಗಬಹುದು. ಅಂತಹ ಮನೆಯಲ್ಲಿ ಪರಸ್ಪರ ವೈಷಮ್ಯವಿದೆ. ಇದಲ್ಲದೇ ಮನೆಯ ಆರ್ಥಿಕ ಸ್ಥಿತಿಯೂ ಹದಗೆಡಲಾರಂಭಿಸುತ್ತದೆ.

ನಾದಿಟ್ಟ ಹಿಟ್ಟು
ಸಾಮಾನ್ಯವಾಗಿ ಮಹಿಳೆಯರು ಅಡುಗೆಮನೆಯಲ್ಲಿ ರೊಟ್ಟಿಯನ್ನು ಬೇಯಿಸಿದ ನಂತರ ಉಳಿದ ನಾದಿಟ್ಟ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇರಿಸಿ ಮತ್ತು ಬೆಳಿಗ್ಗೆ ಅದನ್ನು ಮತ್ತೆ ಬಳಸುತ್ತಾರೆ. ಇದು ವಾಸ್ತು ಪ್ರಕಾರ ಸರಿಯಲ್ಲ. ಕಲಸಿದ ಅಥವಾ ನಾದಿಟ್ಟ ಹಿಟ್ಟನ್ನು ಅಡುಗೆಮನೆಯಲ್ಲಿ ಇಡುವುದರಿಂದ ಶನಿ ಮತ್ತು ರಾಹುವಿನ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಇದರಿಂದ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಬರುತ್ತವೆ.

ಔಷಧಿಗಳು
ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಕೈಸುಡುವಿಕೆ  ಅಥವಾ  ಗಾಯವಾಗುವಿಕೆ ಸಾಮಾನ್ಯವಾಗಿದೆ. ಇದಕ್ಕಾಗಿ, ಔಷಧಿಗಳು ಅಥವಾ ಬ್ಯಾಂಡೇಜ್ಗಳು ಇತ್ಯಾದಿಗಳನ್ನು ಅಡುಗೆಮನೆಯಲ್ಲಿ ಇರಿಸಲಾಗುತ್ತದೆ, ಇದರಿಂದ ಅವು ಅಗತ್ಯವಿದ್ದಾಗ ಉಪಯೋಗಕ್ಕೆ ಬರುತ್ತವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಯಾವುದೇ ಔಷಧಿಗಳನ್ನು ಇಡಬಾರದು. ಏಕೆಂದರೆ ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ, ಅನಗತ್ಯ ವೆಚ್ಚ ಹೆಚ್ಚಾಗುತ್ತವೆ.

ಇದನ್ನೂ ಓದಿ-Shani Gochar : ಕೆಲವು ದಿನಗಳಲ್ಲಿ ಶನಿದೇವನು ಈ 4 ರಾಶಿಯವರಿಗೆ ಅದೃಷ್ಟ ಬೆಳಗಿಸಲಿದ್ದಾನೆ!

ಒಡೆದ ಪಾತ್ರೆಗಳು
ಅಡುಗೆಮನೆಯಲ್ಲಿ ಅನೇಕ ರೀತಿಯ ಪಾತ್ರೆಗಳನ್ನು ಬಳಸಲಾಗುತ್ತದೆ. ಹೆಚ್ಚಿನ ಬಳಕೆಯ ನಂತರ ಕೆಲವು ಪಾತ್ರೆಗಳು ಒಡೆಯುತ್ತವೆ. ಆದರೆ ಕೆಲವೊಮ್ಮೆ ಸ್ವಲ್ಪ ಮಟ್ಟಿಗೆ ಒಡೆದ ಪಾತ್ರೆಗಳನ್ನು ಸಹ ಬಳಸಲಾಗುತ್ತದೆ. ಆದರೆ ವಾಸ್ತು ಪ್ರಕಾರ ಇದು ಒಳ್ಳೆಯದಲ್ಲ. ಅಡುಗೆಮನೆಯಲ್ಲಿ ಒಡೆದ ಪಾತ್ರೆಗಳನ್ನು ಬಳಸುವುದರಿಂದ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ.

ಇದನ್ನೂ ಓದಿ-ನಿಮ್ಮ ಮುಖಕ್ಕೆ ಬ್ಲೀಚಿಂಗ್ ಮಾಡಿಸಿದ ನಂತರ ಈ ತಪ್ಪುಗಳನ್ನು ಮಾಡದಿರಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ದೃಢಪಡಿಸುವುದಿಲ್ಲ)

ಇದನ್ನೂ ಓದಿ-ಕೇತುವಿನ ಚಲನೆಯಲ್ಲಿ ಬದಲಾವಣೆ , ಬಹಳ ಎಚ್ಚರದಿಂದ ಇರಬೇಕು ಈ ರಾಶಿಯವರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News