Neha Bhasin bikini Photos : ಬಾಲಿವುಡ್‌ ಸಿಂಗರ್‌ ಬಿಕಿನಿ ಅವತಾರ ನೋಡಿ ಶಾಕ್‌ ಆದ ಫ್ಯಾನ್ಸ್‌..!

ಖ್ಯಾತ ಬಾಲಿವುಡ್ ಗಾಯಕಿ ಮತ್ತು ಬಿಗ್ ಬಾಸ್ ಓಟಿಟಿ ಖ್ಯಾತಿಯ ನೇಹಾ ಭಾಸಿನ್ ಬಿಕಿನಿ ತೊಟ್ಟ ಹಾಟ್‌ ಅವತಾರ ಫೋಟೋ ಮತ್ತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ನೇಹಾ ಹೊಸ ಅವತಾರ ನೋಡಿ ಶಾಕ್‌ ಆಗಿರುವ ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ. ಅಲ್ಲದೆ, ಬುದ್ದಿಮಾತು ಹೇಳಿದ್ದಾರೆ.

Written by - Krishna N K | Last Updated : Nov 25, 2022, 12:47 PM IST
  • ಖ್ಯಾತ ಬಾಲಿವುಡ್ ಗಾಯಕಿ ಬಿಕಿನಿ ಅವತಾರಕ್ಕೆ ನೆಟ್ಟಿಗರು ಶಾಕ್‌
  • ಬಿಗ್‌ಬಾಸ್‌ ಓಟಿಟಿ ಖ್ಯಾತಿಯ ನೇಹಾ ಭಾಸಿನ್ ಹಾಟ್‌ ಫೋಟೋಸ್‌ ವೈರಲ್‌
  • ಪೋರ್ಸ್‌ ಸ್ಟಾರ್‌ಗಳಂತೆ ವರ್ತಿಸಬೇಡಿ ಎಂದು ಬುದ್ದಿಮಾತು ಹೇಳಿದ ಫ್ಯಾನ್ಸ್‌
Neha Bhasin bikini Photos : ಬಾಲಿವುಡ್‌ ಸಿಂಗರ್‌ ಬಿಕಿನಿ ಅವತಾರ ನೋಡಿ ಶಾಕ್‌ ಆದ ಫ್ಯಾನ್ಸ್‌..! title=

Neha Bhasin bikini photos : ಖ್ಯಾತ ಬಾಲಿವುಡ್ ಗಾಯಕಿ ಮತ್ತು ಬಿಗ್ ಬಾಸ್ ಓಟಿಟಿ ಖ್ಯಾತಿಯ ನೇಹಾ ಭಾಸಿನ್ ಬಿಕಿನಿ ತೊಟ್ಟ ಹಾಟ್‌ ಅವತಾರ ಫೋಟೋ ಮತ್ತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ನೇಹಾ ಹೊಸ ಅವತಾರ ನೋಡಿ ಶಾಕ್‌ ಆಗಿರುವ ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ. ಅಲ್ಲದೆ, ಬುದ್ದಿಮಾತು ಹೇಳಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ನೇಹಾ ಭಾಸಿನ್ ಬಿಕಿನಿ ಅವತಾರ ಪ್ರದರ್ಶನ ಮಾಡಿದ್ದಾರೆ. ವೈಟ್‌ ಬಣ್ಣದ ಟೀಲ್ ಪಟ್ಟೆ ಬಿಕಿನಿ ಸೆಟ್ ಧರಿಸಿದ ಅವರ ಫೋಟೋಗಳು ನೆಟಿಜನ್‌ಗಳನ್ನು ಕೆರಳಿಸುವಂತೆ ಮಾಡುತ್ತಿವೆ. ಅಲ್ಲದೆ, ಪೋರ್ನ್ ಸ್ಟಾರ್ ನಂತೆ ಈ ಅವತಾರ ಯಾಕೆ ಎಂದು ನೆಟ್ಟಿಗರು ನೇಹಾ ವಿರುದ್ಧ ಹರಿಹಾಯ್ದಿದ್ದಾರೆ. ಈ ರೀತಿ ವರ್ತನೆ ಸರಿಯಲ್ಲ ಎಂದು ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ನನಗೆ ಗರ್ಲ್ ಫ್ರೆಂಡ್ ಇದ್ದಿದ್ದು ನಿಜಾ.. ಇಷ್ಟು ಕೀಳುಮಟ್ಟಕ್ಕೆ ಇಳಿಯೊದಿಲ್ಲ..!

ಅಲ್ಲದೆ, ನೀವು ಅದ್ಭುತ ಭಾವಪೂರ್ಣ ಧ್ವನಿಗೆ ಹೆಸರುವಾಸಿಯೇ ಹೊರತು ಈ ರೀತಿಯ ದೇಹ ಪ್ರದರ್ಶನದಿಂದ ಅಲ್ಲ. ಹೀಗೆ ಮಾಡುವ ಜನ ಡಜನ್‌ಗಟ್ಟಲೆ ಇದ್ದಾರೆ. ನೀವು ಅವರೊಂದಿಗೆ ಸೇರುವ ಅಗತ್ಯವಿಲ್ಲ. ಸ್ವಾತಂತ್ರ್ಯದ ಹೆಸರಿನಲ್ಲಿ ದಯವಿಟ್ಟು ನಿಮ್ಮತನವನ್ನು ಕಳೆದುಕೊಳ್ಳಬೇಡಿ. ಅಸಭ್ಯತೆ ನಿಮಗೆ ಸರಿಹೊಂದುವುದಿಲ್ಲ ಎಂದು ನೇಹಾಗೆ ಬುದ್ದಿಮಾತು ಹೇಳಿದ್ದಾರೆ.

ಇತ್ತೀಚೆಗೆ ನೇಹಾ ಭಾಸಿನ್ ಬೋಲ್ಡ್ ಉಡುಪಿನಲ್ಲಿ ಹುಟ್ಟುಹಬ್ಬದ ಆಚರಿಸಿ ಟ್ರೋಲ್ಗೆ ಒಳಗಾಗಿದ್ದರು. ಇದೀಗ ತುಂಡು ಬಟ್ಟೆ ಧರಿಸಿ ಮತ್ತೊಮ್ಮೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನೇಹಾ ಬರ್ತ್‌ಡೇ ಪಾರ್ಟಿಯಲ್ಲಿ ರಶ್ಮಿ ದೇಸಾಯಿ, ಉಮರ್ ರಿಯಾಜ್, ರಾಜೀವ್ ಅದಾತಿಯಾ, ಜೀಶನ್ ಖಾನ್, ನಿಶಾಂತ್ ಭಟ್, ಹಿಮೇಶ್ ರೇಶಮಿಯಾ ಸೇರಿದಂತೆ ಇತರರು ಕಾಣಿಸಿಕೊಂಡರು. ʼಊಟ್‌ ಪತಂಗಿʼ ಹಾಡಿಗಾಗಿ ನೇಹಾ 2021 ರಲ್ಲಿ ಟೈಮ್ಸ್ ಸ್ಕ್ವೇರ್ ಬಿಲ್‌ಬೋರ್ಡ್‌ನಲ್ಲಿ ಮಿಂಚಿದ್ದರು. ಹಿಂದಿ, ತೆಲುಗು ಮತ್ತು ಪಂಜಾಬಿ ಸಿನಿಮಾಗಳಲ್ಲಿ ಹಲವು ಹಿಟ್ ಹಾಡುಗಳನ್ನು ಹಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News