Peacock Good Luck: ದಾರಿಯಲ್ಲಿ ಇದ್ದಕ್ಕಿದ್ದಂತೆ ನವಿಲು ಕಾಣಿಸಿಕೊಂಡರೆ ಅದರ ಅರ್ಥವೇನು ಗೊತ್ತಾ?

Seeing Peacock Meaning: ಹಿಂದೂ ಧರ್ಮದಲ್ಲಿ ನವಿಲನ್ನು ದೈವಿಕ ಪಕ್ಷಿ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಧಾರ್ಮಿಕ ಮಹತ್ವವೂ ಇದೆ. ಇದನ್ನು ಸುಬ್ರಹ್ಮಣ್ಯ ದೇವರ ವಾಹನವೆಂದು ಹೇಳಲಾಗುತ್ತದೆ. ಇನ್ನು ನೀವು ದಾರಿಯಲ್ಲಿ ಹೋಗುವಾಗ ಅಥವಾ ಮನೆಯಿಂದ ಹೊರಡುವಾಗ ಇದ್ದಕ್ಕಿದ್ದಂತೆ ನವಿಲುಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ ನವಿಲು ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ ಏನಾಗುತ್ತದೆ ಎಂದು ತಿಳಿಯೋಣ.

1 /5

ಹಾರುವ ನವಿಲು ಕಾಣುವುದು ಬಹಳ ಅಪರೂಪ. ಇಂತಹ ದೃಶ್ಯ ಕಾಣಸಿಗುವುದೇ ಅಪರೂಪ. ಆದರೆ ಎಂದಾದರೂ ಹಾರುವ ನವಿಲು ಕಂಡರೆ ತುಂಬಾ ಶುಭ. ಇದು ಸಂಭವಿಸಿದಲ್ಲಿ, ನೀವು ಎಲ್ಲಿಂದಲಾದರೂ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

2 /5

ಬೆಳಿಗ್ಗೆ ಇದ್ದಕ್ಕಿದ್ದಂತೆ ನವಿಲು ನಿಮ್ಮ ಮನೆಗೆ ಬಂದರೆ ಅದು ಶುಭ ಸಂಕೇತವಾಗಿದೆ. ನಿಮ್ಮ ಅದೃಷ್ಟವು ಬೆಳಗಲಿದೆ ಅಥವಾ ಅದೃಷ್ಟವು ಏರಲಿದೆ ಎಂದು ಅರ್ಥವನ್ನು ನೀಡುತ್ತದೆ. ಜೊತೆಗೆ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ ಎಂಬ ಸೂಚನೆಯಾಗಿದೆ.

3 /5

ನರ್ತಿಸುವ ನವಿಲು ಕೂಡ ಸುಲಭವಾಗಿ ಗೋಚರಿಸುವುದಿಲ್ಲ. ಆದರೆ ಹೀಗೆ ಕಂಡರೆ ಭವಿಷ್ಯದಲ್ಲಿ ಬರುವ ಸಮಸ್ಯೆಗಳ ಬಗ್ಗೆ ಸೂಚನೆ ನೀಡಿದಂತೆ. ಎರಡನೆಯ ಅರ್ಥವೆಂದರೆ ಜೀವನದಲ್ಲಿ ಏನಾದರೂ ಹೊಸದು ಸಂಭವಿಸುತ್ತದೆ.

4 /5

ಮುಂಜಾನೆ ನೀವು ಮನೆಯಿಂದ ಹೊರಡುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ನವಿಲು ಕಂಡರೆ, ನಿಮ್ಮ ದಿನವು ಮಂಗಳಕರವಾಗಿರುತ್ತದೆ ಎಂದು ಅರ್ಥ. ವಿಶೇಷವಾಗಿ ಕಛೇರಿ ಅಥವಾ ಕೆಲಸದ ಸ್ಥಳದಲ್ಲಿ ಬಹಳಷ್ಟು ಲಾಭ ಇರುತ್ತದೆ. ಮುಂಜಾನೆ ನವಿಲಿನ ಸದ್ದು ಕೇಳುವುದು ಅಥವಾ ನವಿಲು ಗರಿಗಳನ್ನು ನೋಡುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ.

5 /5

ನಿಮ್ಮ ಕನಸಿನಲ್ಲಿ ನೃತ್ಯ ಮಾಡುವ ನವಿಲು ಕಂಡರೆ, ಅದು ಭವಿಷ್ಯದ ಬಗ್ಗೆ ನಿಮಗೆ ಎಚ್ಚರಿಕೆ ನೀಡುತ್ತದೆ. ಮತ್ತೊಂದೆಡೆ, ಕನಸಿನಲ್ಲಿ ನವಿಲು ಗರಿಗಳು ಕಂಡುಬಂದರೆ, ದೊಡ್ಡ ಸಾಧನೆಯನ್ನು ಮಾಡುತ್ತೀರಿ ಎಂದರ್ಥ. ನೀವು ಬಹಳ ಸಮಯದಿಂದ ಕಾಯುತ್ತಿರುವ ಸಾಧನೆ ಅದಾಗಿರುತ್ತದೆ.  (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)