ಮಹಿಳೆಯರಿಗಿಂತಲೂ ಪುರುಷರೇ ಹೆಚ್ಚಿನ ರೋಗಗಳಿಗೆ ತುತ್ತಾಗುತ್ತಾರೆ. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಇಂದು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿಸಬೇಕು.
ನವದೆಹಲಿ: ಪುರುಷರು ಮತ್ತು ಮಹಿಳೆಯರ ದೇಹಗಳು ಅನೇಕ ವಿಷಯಗಳಲ್ಲಿ ವಿಭಿನ್ನವಾಗಿವೆ. ಹೀಗಾಗಿ ಅವರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ವಿಭಿನ್ನವಾಗಿರಬಹುದು. ರೋಗಗಳಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಆರೋಗ್ಯಕ್ಕೆ ದೊಟ್ಟಮಟ್ಟದ ಹಾನಿಯಾಗಬಹುದು. ಕೆಲವು ರೋಗಗಳು ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು ಪರಿಣಾಮ ಬೀರುತ್ತವೆ. ಆ ರೋಗಗಳು ಯಾವುವು ಎಂದು ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಖಿನ್ನತೆ: ಮಹಿಳೆಯರು ಭಾವನಾತ್ಮಕವಾಗಿ ದುರ್ಬಲರು ಎಂದು ಸಾಮಾನ್ಯವಾಗಿ ನಂಬಲಾಗಿದೆ. ಆದರೆ ಅವರಿಗೆ ಹೋಲಿಸಿದರೆ ಖಿನ್ನತೆಯ ಸಮಸ್ಯೆ ಪುರುಷರಲ್ಲಿ ಹೆಚ್ಚು ಕಂಡುಬರುತ್ತದೆ. ಇದಕ್ಕೆ ಕಾರಣವೆಂದರೆ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೆಚ್ಚು ವ್ಯಕ್ತಪಡಿಸುತ್ತಾರೆ, ಆದರೆ ಪುರುಷರು ತಮ್ಮ ಭಾವನೆಗಳನ್ನು ಮರೆಮಾಡುತ್ತಾರೆ. ಇದರಿಂದಾಗಿ ಅವರಿಗೆ ಒಳಗೊಳಗೆ ಉಸಿರುಗಟ್ಟಿದ ಅನುಭವವಾಗುತ್ತದೆ. ಯಾರೇ ಆಗಲಿ ಅಸಮಾಧಾನಗೊಂಡಾಗ ಆಪ್ತರೊಂದಿಗೆ ಸಮಸ್ಯೆಗಳ ಬಗ್ಗೆ ಹಂಚಿಕೊಳ್ಳುವುದು ಉತ್ತಮ. ಇದು ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ.
ಹೃದ್ರೋಗ: ಹೆಚ್ಚಿನ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಏಕೆಂದರೆ ಪುರುಷರು ಮಾತ್ರ ಹೆಚ್ಚಿನ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಹೆಚ್ಚು ತೊಂದರೆಗೊಳಗಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಲಕಾಲಕ್ಕೆ ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.
ಮಹಿಳೆಯರಿಗೆ ಹೋಲಿಸಿದರೆ ಪುರುಷರು ಹೆಚ್ಚಾಗಿ ಎಣ್ಣೆಯುಕ್ತ ವಸ್ತುಗಳನ್ನು ಹೊರಗಡೆ ತಿನ್ನುತ್ತಾರೆ. ಇದರಿಂದಾಗಿ ಅವರ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ. ಇದು ನಂತರ ಮಧುಮೇಹಕ್ಕೆ ಕಾರಣವಾಗುತ್ತದೆ. ಹೀಗಾಗಿಯೇ ನೀವು ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸಬೇಕು. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವುದು ತುಂಬಾ ಮುಖ್ಯವಾಗಿದೆ.
ಯಕೃತ್ತಿನ ಕಾಯಿಲೆ: ಮಹಿಳೆಯರಿಗಿಂತಲೂ ಪುರುಷರೇ ಹೆಚ್ಚು ಆಲ್ಕೊಹಾಲ್‍ಗೆ ವ್ಯಸನಿಯಾಗಿರುವುದು ನಿಮಗೆ ಗೊತ್ತೇ ಇರುವ ಸಂಗತಿ. ಇದರಿಂದಾಗಿ ಅವರ ಯಕೃತ್ತಿನ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುತ್ತದೆ. ಈ ಅಂಗಕ್ಕೆ ಸಂಬಂಧಿಸಿದ ರೋಗಗಳ ಅಪಾಯವು ಹೆಚ್ಚಾಗುತ್ತದೆ.
ಶ್ವಾಸಕೋಶದ ಕಾಯಿಲೆ: ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರು ಹೆಚ್ಚು ಧೂಮಪಾನ ಮಾಡುವುದನ್ನು ನೀವು ನೋಡಿರಬೇಕು. ಮನೆಯಿಂದ ಹೊರಗೆ ಹೋಗುವುದರಿಂದ ಅವರು ಹೆಚ್ಚು ಧೂಳು ಮತ್ತು ಮಾಲಿನ್ಯಕ್ಕೆ ಬಲಿಯಾಗುತ್ತಾರೆ. ಇಂತಹ ಸಂದರ್ಭದಲ್ಲಿ ಪುರುಷರು ಶ್ವಾಸಕೋಶದ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ.