PM Modi Meets Tribal Brothers: ಅನಾಥ ಕಂದಮ್ಮಗಳ ಭೇಟಿ ಮಾಡಿದ ಪ್ರಧಾನಿ: ಶಿಕ್ಷಣದ ಜವಾಬ್ದಾರಿ ಹೊತ್ತ ಮೋದಿ

Gujarat Assembly Election: ಅವಿ (14) ಮತ್ತು ಜೈ (11) ಅವರ ಪೋಷಕರು ದೀರ್ಘಕಾಲದ ಅನಾರೋಗ್ಯದ ಕಾರಣದಿಂದ ಆರು ವರ್ಷಗಳ ಹಿಂದೆ ನಿಧನರಾದರು. ಅಂದಿನಿಂದ ಇಬ್ಬರೂ ಕೂಲಿ ಮಾಡುತ್ತಾ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಸಹೋದರರಿಬ್ಬರೂ ಶಿಕ್ಷಣ ಬಿಡಲಿಲ್ಲ, ಅವಿ 9ನೇ ತರಗತಿಯಲ್ಲಿ ಓದುತ್ತಿದ್ದರೆ, ಜೈ 6ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.

Written by - Bhavishya Shetty | Last Updated : Nov 28, 2022, 07:44 AM IST
    • ಪ್ರಧಾನಿ ನರೇಂದ್ರ ಮೋದಿ ಭಾನುವಾರ ಗುಜರಾತ್‌ನ ನೇತ್ರಂಗ್‌ಗೆ ಆಗಮನ
    • ಇಬ್ಬರು ಅನಾಥ ಬುಡಕಟ್ಟು ಸಹೋದರರನ್ನು ಭೇಟಿ ಮಾಡಿ ಮಾತನಾಡಿದ ಮೋದಿ
    • ಈ ಮಕ್ಕಳ ಶಿಕ್ಷಣ ಜವಾಬ್ದಾರಿ ವಹಿಸಿಕೊಂಡ ಪ್ರಧಾನಿ
PM Modi Meets Tribal Brothers: ಅನಾಥ ಕಂದಮ್ಮಗಳ ಭೇಟಿ ಮಾಡಿದ ಪ್ರಧಾನಿ: ಶಿಕ್ಷಣದ ಜವಾಬ್ದಾರಿ ಹೊತ್ತ ಮೋದಿ  title=
gujarat assembly

Gujarat Assembly Election: ಗುಜರಾತ್ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಹೆಚ್ಚು ಸಮಯ ಉಳಿದಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಆರಂಭಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್‌ನ ನೇತ್ರಂಗ್‌ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರು ಅನಾಥ ಬುಡಕಟ್ಟು ಸಹೋದರರನ್ನು ಭೇಟಿ ಮಾಡಿ ಮಾತನಾಡಿದರು. ನೇತ್ರಂಗ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಆರು ವರ್ಷಗಳ ಹಿಂದೆ ತಂದೆ-ತಾಯಿ ಮೃತಪಟ್ಟಿರುವ ಇಬ್ಬರು ಬುಡಕಟ್ಟು ಸಹೋದರರನ್ನು ಭೇಟಿಯಾಗಬೇಕಿದ್ದ ಕಾರಣ ನಾನು ಸ್ವಲ್ಪ ತಡವಾಗಿ ಇಲ್ಲಿಗೆ ಬಂದಿದ್ದೇನೆ” ಎಂದರು.

ಇದನ್ನೂ ಓದಿ: Viral Video: ದೈತ್ಯ ಹಾವಿನ ಮೇಲೆ ದಾಳಿ ಇಟ್ಟ ಮೊಸಳೆ.. ಮುಂದೇನಾಯ್ತು ತಿಳಿಯಲು ವಿಡಿಯೋ ನೋಡಿ

ಅವಿ (14) ಮತ್ತು ಜೈ (11) ಅವರ ಪೋಷಕರು ದೀರ್ಘಕಾಲದ ಅನಾರೋಗ್ಯದ ಕಾರಣದಿಂದ ಆರು ವರ್ಷಗಳ ಹಿಂದೆ ನಿಧನರಾದರು. ಅಂದಿನಿಂದ ಇಬ್ಬರೂ ಕೂಲಿ ಮಾಡುತ್ತಾ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಸಹೋದರರಿಬ್ಬರೂ ಶಿಕ್ಷಣ ಬಿಡಲಿಲ್ಲ, ಅವಿ 9ನೇ ತರಗತಿಯಲ್ಲಿ ಓದುತ್ತಿದ್ದರೆ, ಜೈ 6ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಅವರ ಕಥೆ ತಿಳಿದ ಪ್ರಧಾನಿ ಮೋದಿ ಸಹೋದರರಿಬ್ಬರಿಗೂ ಮೂಲ ಸೌಕರ್ಯವಿರುವ ಮನೆ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಧಾನಿ ಮೋದಿ ನೇತ್ರಂಗ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಬ್ಬರೂ ಸಹೋದರರನ್ನು ಭೇಟಿಯಾದರು. ಪ್ರಧಾನಿ ಮೋದಿಯನ್ನು ಭೇಟಿಯಾದ ನಂತರ, ಇಬ್ಬರೂ ಸಹೋದರರು ಮಾತನಾಡಿ, “ತಾವು ತುಂಬಾ ಉತ್ಸುಕರಾಗಿದ್ದೇವೆ, ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದು ಹೇಳಿದರು.

ಪ್ರಧಾನಿ ಮೋದಿ ಏನು ಹೇಳಿದರು ಎಂದು ಕೇಳಿದಾಗ, ಅವಿ 'ನೀನು ಏನಾಗಬೇಕೆಂದು ಅವರು ನನ್ನನ್ನು ಕೇಳಿದರು? ಅದಕ್ಕೆ ನಾನು ಇಂಜಿನಿಯರ್ ಆಗಬೇಕು’ ಎಂದು ಹೇಳಿದ್ದೆ. ನಮ್ಮ ಅಧ್ಯಯನದ ಜವಾಬ್ದಾರಿಯನ್ನು ಅವರು ತೆಗೆದುಕೊಳ್ಳುತ್ತಾರೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ನನಗೂ ಇಂಜಿನಿಯರ್ ಆಗುವ ಆಸೆ ಇದೆ ಎಂದು ಜೈ ಹೇಳಿದರು. ಅವರ ಮನೆಯಲ್ಲಿ ಟಿವಿ, ಕಂಪ್ಯೂಟರ್ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಇಬ್ಬರು ಸಹೋದರರ ಭೇಟಿಯ ವಿಡಿಯೋವನ್ನು ಗುಜರಾತ್ ಬಿಜೆಪಿ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ದೇಶದಲ್ಲಿ ಬುಡಕಟ್ಟು ಸಮುದಾಯದ ಬಗ್ಗೆ ಕಾಂಗ್ರೆಸ್‌ಗೆ ಯಾವುದೇ ಗೌರವವಿಲ್ಲ ಎಂದು ನೇತ್ರಂಗ್ ರ್ಯಾಲಿಯಲ್ಲಿ ಮೋದಿ ಆರೋಪಿಸಿದರು. ಬಿರ್ಸಾ ಮುಂಡಾ ಆಗಿರಲಿ ಅಥವಾ ಗೋವಿಂದ ಗುರುಗಳೇ ಆಗಿರಲಿ, ದೇಶದ ಬುಡಕಟ್ಟು ನಾಯಕರಿಗೆ ಕಾಂಗ್ರೆಸ್ ಗೌರವ ನೀಡಲಿಲ್ಲ’ ಎಂದು ಮೋದಿ ಹೇಳಿದರು.

ಇದನ್ನೂ ಓದಿ:  ಥರ್ಡ್ ಪಾರ್ಟಿ ಅಪ್ಲಿಕೇಶನ್ ಇಲ್ಲದೆ Live stream ಸಾಧ್ಯವಿಲ್ಲ ಎಂದ ಸುಪ್ರೀಂ

ಭಾನುವಾರ ಗುಜರಾತಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರಿಯಾಗಿಸಿದ ಮೋದಿ, ಕಾಂಗ್ರೆಸ್ ಅಧ್ಯಕ್ಷರು ಮೋದಿಗೆ ತಮ್ಮ ಯೋಗ್ಯತೆಯನ್ನು ತೋರಿಸುವುದಾಗಿ ಹೇಳಿದರು. ಪ್ರಧಾನಿ, 'ಇಂದು ಕಾಂಗ್ರೆಸ್ ಅಧ್ಯಕ್ಷರು ಗುಜರಾತ್‌ನಲ್ಲಿದ್ದಾರೆ. ಅವರನ್ನು ಸೋನಿಯಾ ಬೆನ್ (ಸೋನಿಯಾ ಗಾಂಧಿ) ಇಲ್ಲಿಗೆ ಕಳುಹಿಸಿದ್ದಾರೆ. ಇಲ್ಲಿಗೆ ಬಂದು ಮೋದಿ ಅವರ ಸ್ಥಿತಿ ತೋರಿಸುತ್ತೇನೆ ಎಂದಿದ್ದಾರೆ. ನನಗೆ ಯಾವುದೇ ಸ್ಥಾನಮಾನವಿಲ್ಲ. ನಾನು ಸಾಮಾನ್ಯ ಮನುಷ್ಯನಂತೆ ಹುಟ್ಟಿದ್ದೇನೆ. ಅವರು ನನ್ನ ಸ್ಥಿತಿಯನ್ನು ಹೇಗೆ ತೋರಿಸುತ್ತಾರೆ ಎಂದು ನೋಡೋಣ.” ಎಂದು ಸವಾಲೆಸೆದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News