Lal Kitab Remedies for Money: ಜೀವನದಲ್ಲಿ ಹಲವು ಬಾರಿ ವ್ಯಕ್ತಿ ಸಾಕಷ್ಟು ಶ್ರಮಪಟ್ಟರೂ ಕೂಡ ಹಣ, ಸಿರಿ-ಸಂಪತ್ತು ಹಾಗೂ ಸ್ಥಾನಮಾನ ಆತನಿಗೆ ಪ್ರಾಪ್ತಿಯಾಗುವುದಿಲ್ಲ. ಇದಕ್ಕೆ ಕಾರಣವೆಂದರೆ ಮಲಗಿರುವ ಅದೃಷ್ಟ ಅಥವಾ ಜಾತಕದ ಅಶುಭ ಗ್ರಹ-ನಕ್ಷತ್ರಗಳು.
Lal Kitab Remedies for Money: ಜೀವನದಲ್ಲಿ ಹಲವು ಬಾರಿ ವ್ಯಕ್ತಿ ಸಾಕಷ್ಟು ಶ್ರಮಪಟ್ಟರೂ ಕೂಡ ಹಣ, ಸಿರಿ-ಸಂಪತ್ತು ಹಾಗೂ ಸ್ಥಾನಮಾನ ಆತನಿಗೆ ಪ್ರಾಪ್ತಿಯಾಗುವುದಿಲ್ಲ. ಇದಕ್ಕೆ ಕಾರಣವೆಂದರೆ ಮಲಗಿರುವ ಅದೃಷ್ಟ ಅಥವಾ ಜಾತಕದ ಅಶುಭ ಗ್ರಹ-ನಕ್ಷತ್ರಗಳು. ಇದಕ್ಕೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಹಲವು ರೀತಿಯ ಪರಿಹಾರಗಳನ್ನು ನೀಡಲಾಗಿದೆ. ಲಾಲ್ ಕಿತಾಬ್ನಲ್ಲಿಯೂ ಕೂಡ ಅಂತಹ ಕೆಲ ಅದ್ಭುತ ಮತ್ತು ದೋಷರಹಿತ ಪರಿಹಾರಗಳ ಕುರಿತು ಉಲ್ಲೇಖಿಸಲಾಗಿದೆ. ಇಂದು ನಾವು ನಿಮಗೆ ಅಂತಹ ಕೆಲ ಉಪಾಯಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಉಪಾಯಗಳನ್ನು ಅನುಸರಿಸುವುದರಿಂದ ನಿಮ್ಮ ಮಲಗಿರುವ ಭಾಗ್ಯ ಎಚ್ಚೆತ್ತುಕೊಳ್ಳುತ್ತದೆ ಮತ್ತು ಧನ ಮತ್ತು ಸಂಪತ್ತಿನ ಹೊಳೆಯೇ ಹರಿದುಬರುತ್ತದೆ.
ಇದನ್ನೂ ಓದಿ-Palmistry: ಅಂಗೈಯಲ್ಲಿರುವ ಈ ರೇಖೆಯಿಂದ ಜೀವನವೇ ಬದಲಾಗುತ್ತದೆ, ಧನ-ಸಂಪತ್ತಿನ ಕೊರತೆ ಇರುವುದಿಲ್ಲ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
2. ಶನಿವಾರದಂದು, ಸಾಸಿವೆ ಎಣ್ಣೆಯನ್ನು ಕಂಚಿನ ಪಾತ್ರೆಯಲ್ಲಿ ಅಥವಾ ಬಟ್ಟಲಿನಲ್ಲಿ ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಿ, ನಂತರ ಈ ಎಣ್ಣೆಯನ್ನು ಶನಿ ದೇವಸ್ಥಾನದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಜೀವನದಲ್ಲಿನ ಎಲ್ಲಾ ತೊಂದರೆಗಳು, ಸಂಕಟಗಳು ಮತ್ತು ರೋಗಗಳು ಕೊನೆಗೊಳ್ಳುತ್ತವೆ.
3. ಲಾಲ್ ಕಿತಾಬ್ ಪ್ರಕಾರ, ಹಸುವಿಗೆ ಪ್ರತಿದಿನ ಹಸಿರು ಮೇವನ್ನು ತಿನ್ನಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸುಖ-ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎನ್ನಲಾಗುತ್ತದೆ. ಇದರೊಂದಿಗೆ, ವ್ಯಕ್ತಿಯ ದುರದೃಷ್ಟವೂ ಅದೃಷ್ಟದಲ್ಲಿ ಬದಲಾಗುತ್ತದೆ. ಹಸುವಿಗೆ ಪ್ರತಿನಿತ್ಯ ರೊಟ್ಟಿ ಮತ್ತು ಬೆಲ್ಲ ತಿನ್ನಿಸುವುದು ಕೂಡ ತುಂಬಾ ಪ್ರಯೋಜನಕಾರಿಯಾಗಿದೆ.
4. ಪ್ರತಿನಿತ್ಯ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಸಮಸ್ಯೆಗಳಿಂದ ಸಾಕಷ್ಟು ಪರಿಹಾರ ದೊರೆಯುತ್ತದೆ. ಈ ಕೆಲಸವನ್ನು ಧರ್ಮಗ್ರಂಥಗಳಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಪಕ್ಷಿಗಳಿಗೆ ಆಹಾರ ಮತ್ತು ನೀರು ನೀಡುವುದರಿಂದ ಜಾತಕದ ಅನೇಕ ಗ್ರಹದೋಷಗಳೂ ನಿವಾರಣೆಯಾಗುತ್ತವೆ.
5. ಮನೆಯಲ್ಲಿ ಮೀನಿನ ಅಕ್ವೇರಿಯಂ ಇಡುವುದರಿಂದ ಪ್ರಗತಿಯಲ್ಲಿರುವ ಅಡೆತಡೆಗಳನ್ನು ದೂರಾಗುತ್ತವೆ. ಇದರೊಂದಿಗೆ ಹಣದ ನಷ್ಟದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಮನೆಯಲ್ಲಿ ಮೀನಿನ ಅಕ್ವೇರಿಯಂ ಇಡುವುದರಿಂದ ಪುಣ್ಯ ಸಿಗುತ್ತದೆ. ಆದರೆ, ನೀವು ಮನೆಯಲ್ಲಿ ಅಕ್ವೇರಿಯಂ ಇಡುತ್ತಿದ್ದರೆ, ಅದರಲ್ಲಿ 5 ಗೋಲ್ಡನ್ ಫಿಶ್ ಜೊತೆಗೆ 1 ಅಥವಾ 2 ಕಪ್ಪು ಮೀನುಗಳನ್ನು ಯಾವಾಗಲೂ ಇಟ್ಟುಕೊಳ್ಳಿ. ಯಾವುದೇ ಒಂದು ಮೀನು ಸಾವನ್ನಪ್ಪಿದರೆ, ಅದನ್ನು ತಕ್ಷಣವೇ ತೆಗೆದು ಮತ್ತೊಂದು ಮೀನನ್ನು ಅಕ್ವೇರಿಯಂಗೆ ಹಾಕಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)