ಸಾಮಾನ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾದ ಸಿದ್ಧಗಂಗಾ ಶ್ರೀಗಳು

ಸಿದ್ದಗಂಗಾ ಮಠದ ಹಿರಿಯ ಸ್ವಾಮಿಗಳಾದ ಡಾ.ಶಿವಕುಮಾರ್ ಸ್ವಾಮೀಜಿ ಶನಿವಾರದಂದು ಬೆಂಗಳೂರಿನಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

Last Updated : Dec 1, 2018, 05:50 PM IST
ಸಾಮಾನ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾದ ಸಿದ್ಧಗಂಗಾ ಶ್ರೀಗಳು  title=

ಬೆಂಗಳೂರು: ಸಿದ್ದಗಂಗಾ ಮಠದ ಹಿರಿಯ ಸ್ವಾಮಿಗಳಾದ ಡಾ.ಶಿವಕುಮಾರ್ ಸ್ವಾಮೀಜಿ ಶನಿವಾರದಂದು ಬೆಂಗಳೂರಿನಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈಗ ಶ್ರೀಗಳು ಆಸ್ಪತ್ರೆಗೆ ದಾಖಲಾಗಿದ್ದು ಸಾಮಾನ್ಯ ವೈದಕೀಯ ತಪಾಸಣೆ ಎಂದು  ಹೇಳಲಾಗಿದೆ.ಈ ಕಾರಣಕ್ಕಾಗಿ ಅವರನ್ನು ಆಸ್ಪತ್ರೆಗೆ ಕರೆ ತರಲಾಗಿದೆ.ಈ ಹಿಂದೆ ಸಿದ್ದಗಂಗಾ ಶ್ರೀಗಳಿಗೆ ಸ್ಟಂಟ್ ವೊಂದನ್ನು ಅಳವಡಿಸಲಾಗಿತ್ತು ಅದನ್ನು ಆಗಾಗ ತಪಾಸಣೆಗೆ ಒಳಪಡಿಸಬೇಕು. ವೈದ್ಯರ ಸೂಚನೆ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಆಸ್ಪತ್ರೆಯಲ್ಲಿ ಸಾಮಾನ್ಯ ವೈದಕೀಯ ತಪಾಸಣೆಗೆ ಹಾಜರಾಗಬೇಕು. ಈ ಹಿನ್ನಲೆಯಲ್ಲಿ ಅವರು ಆಸ್ಪತ್ರೆಗೆ ಆಗಮಿಸಿದ್ದಾರೆ.

ಶ್ರೀಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿದುಬಂದಿದ್ದು ಎರಡು ದಿನಗಳ ಹಿಂದೆಯಷ್ಟೇ ವೈದ್ಯ ರವಿಂದ್ರ ಅವರು ಶ್ರೀಗಳನ್ನು ತಪಾಸಣೆ ಮಾಡಿದ್ದರು ಎಂದು ಎನ್ನಲಾಗಿದೆ.ಈಗ ವೈದಕೀಯ ತಪಾಸಣೆ ಮುಗಿದ ನಂತರ ಅವರನ್ನು ಮಠಕ್ಕೆ ಮರಳಿ ಕರೆದುಕೊಂಡು ಹೋಗಲಾಗುವುದು ಎಂದು ಮಾಧ್ಯಮಗಳಿಗೆ ಮಠದ ಮೂಲಗಳು ತಿಳಿಸಿವೆ.

 

Trending News