ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಫಲಿತಾಂಶ ಇಂದು ಹೊರಬೀಳಲಿದೆ. ಕೇಂದ್ರದ ಆಡಳಿತ ಪಕ್ಷ ಬಿಜೆಪಿ ಮತ್ತು ವಿರೋಧ ಪಕ್ಷಗಳು ಈ ಚುನಾವಣೆಯನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ನೋಡುತ್ತಿವೆ.
ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ, ಛತ್ತೀಸ್ಗಢದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷದ ಅಭ್ಯರ್ಥಿಗಳು ಪ್ರಬಲ ಪೈಪೋಟಿ ಎದುರಿಸುತ್ತಿದ್ದಾರೆ. ಆದರೆ ತೆಲಂಗಾಣದಲ್ಲಿ ಯಾವುದೇ ಪಕ್ಷ, ಎಷ್ಟೇ ಸ್ಥಾನಗಳಿಸಿದರೂ ಅದು ಒಳ್ಳೆಯ ಫಲಿತಾಂಶವೇ ಆಗಿರುತ್ತದೆ. ಏಕೆಂದರೆ ಎರಡೂ ಪಕ್ಷ ಅಧಿಕಾರದಲ್ಲಿಲ್ಲದ ಏಕೈಕ ರಾಜ್ಯ ಇದಾಗಿದೆ.
ತೆಲಂಗಾಣ ಚುನಾವಣೆ 2018 ಬಿಜೆಪಿಗಿಂತಲೂ ಕಾಂಗ್ರೆಸ್ ಗೆ ಹೆಚ್ಚು ಪ್ರತಿಷ್ಠೆಯದ್ದಾಗಿದೆ ಎಂದು ಪರಿಗಣಿಸಲಾಗಿದೆ. ಏಕೆಂದರೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 2019ರ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಗೆ ತರಬೇಕೆಂದು ಆಶಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಚಂದ್ರಬಾಬು ನಾಯ್ಡು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗ ಮಹಾಘಟಬಂಧನದಲ್ಲಿ ನಾಯ್ಡು ಕೂಡ ಕೈ ಜೋಡಿಸಿದ್ದಾರೆ ಎಂದು ನಂಬಿದ್ದರು. ಕಾಂಗ್ರೆಸ್ ನಾಯಕತ್ವದಲ್ಲಿ ನಾಯ್ಡು ಇಲ್ಲಿ ಪೀಪಲ್ಸ್ ಫ್ರಂಟ್ ಸಿದ್ಧಪಡಿಸಿದ್ದಾರೆ, ಇದರಲ್ಲಿ ನಾಲ್ಕು ಪಕ್ಷಗಳಿವೆ.
ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಉಳಿದಿದೆ. ಈ ಸಂದರ್ಭದಲ್ಲಿ ತೆಲಂಗಾಣ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಟಿಆರ್ಎಸ್ ಮತ್ತು ಟಿಡಿಪಿಯಂತಹ ಪ್ರಾದೇಶಿಕ ಪಕ್ಷಗಳು ಎರಡೂ ಕಡೆಗಳಲ್ಲಿ ನಿಂತಿವೆ. ಟಿಡಿಪಿ ಈಗಾಗಲೇ ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಟಿಆರ್ಎಸ್ಗೆ ಬಿಜೆಪಿ ಬಿಟ್ಟು ಬೇರೆ ಯಾವುದೇ ಆಯ್ಕೆಗಳಿಲ್ಲ.
2018 ರ ವಿಧಾನಸಭೆ ಚುನಾವಣೆಯಲ್ಲಿ 2019 ಲೋಕಸಭೆ ಚುನಾವಣೆಯ ಸಿದ್ಧತೆ ನಡೆಸುತ್ತಿರುವ ಬಿಜೆಪಿಯು ಪ್ರಾದೇಶಿಕ ಪಕ್ಷಗಳ ಬೆಂಬಲವನ್ನು ಪಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಟಿಆರ್ಎಸ್ ವಿಜಯಕ್ಕೆ ಬಿಜೆಪಿ ಸಂಪೂರ್ಣ ಪ್ರಾಮುಖ್ಯತೆ ನೀಡಿದೆ. ಬಿಜೆಪಿ ಚಾಣಕ್ಯ ಎಂದೇ ಕರೆಯಲ್ಪಡುವ ಅಮಿತ್ ಶಾ ಅವರು ದಕ್ಷಿಣ ಭಾರತದ ರಾಜಕೀಯವನ್ನು ಬಲ್ಲವರಾಗಿದ್ದಾರೆ. ಒಂದುವೇಳೆ ಟಿಆರ್ಎಸ್ ಗೆ ರಾಷ್ಟ್ರೀಯ ರಾಜಕಾರಣದಲ್ಲಿ ಬರುವ ಇಚ್ಛೆ ಇದ್ದರೆ ಆ ಪಕ್ಷವನ್ನ್ ಎನ್ಡಿಎ ಮೈತ್ರಿಗೆ ಸೇರಿಸಿಕೊಳ್ಳುವುದು ಅವರ ಉದ್ದೇಶವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್-ಟಿಡಿಪಿ ಮೈತ್ರಿ ಸರಕಾರ ರಚನೆಯ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಹಾಗಾಗಿ ಬಿಜೆಪಿ ಮುಖ್ಯ ಯುದ್ಧದಲ್ಲಿರದಿದ್ದರೂ ಸಹ, ರಾಜ್ಯದಲ್ಲಿ ಅವರ ಹಸ್ತಕ್ಷೇಪವನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಟಿಆರ್ಎಸ್ ಬಹುಮತದಿಂದ ದೂರವಿದ್ದರೆ ಬಿಜೆಪಿ ಬೆಂಬಲಿಸುವ ದಾರಿಯನ್ನು ತೆರೆಯಬಹುದು.