South Indian Actors Grand Wedding: ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಫೆಬ್ರವರಿ 7 ರಂದು ವಿವಾಹವಾದರು. ಅವರ ಮದುವೆಯ ಫೋಟೋಗಳು ಮತ್ತು ವೀಡಿಯೊಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಮಾಧ್ಯಮಗಳ ವರದಿ ಪ್ರಕಾರ ಈ ರಾಜಮನೆತನದ ಮದುವೆ ಮತ್ತು ಆರತಕ್ಷತೆಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಇಂದು ನಾವು ದಕ್ಷಿಣದ ಕೆಲವು ಅತ್ಯಂತ ದುಬಾರಿ ಮದುವೆಗಳ ಬಗ್ಗೆ ಹೇಳಲಿದ್ದೇವೆ.
ಈ ಪಟ್ಟಿಯಲ್ಲಿ ಮೊದಲು, ದಕ್ಷಿಣದ ಪ್ರಸಿದ್ಧ ನಟ ಮತ್ತು ರಾಜಕಾರಣಿ ಚಿರಂಜೀವಿ ಅವರ ಮಗ ಮತ್ತು ದಕ್ಷಿಣದ ಸೂಪರ್ ಸ್ಟಾರ್ ರಾಮ್ ಚರಣ್ ತೇಜಾ ಅವರ ಬಾಲ್ಯದ ಗೆಳತಿ ಉಪಾಸನಾ ಕಾಮಿನೇನಿ ಅವರನ್ನು 2012 ರಲ್ಲಿ ಮದುವೆಯಾದ ಬಗ್ಗೆ ಮಾತನಾಡೋಣ. ಮಾಧ್ಯಮ ವರದಿಗಳ ಪ್ರಕಾರ, ಇದು ರಾಜಮನೆತನದ ವಿವಾಹವಾಗಿತ್ತು.
ಬಿಜೆಪಿ ಮುಖಂಡ ಜಿ ಜನಾರ್ದನ ರೆಡ್ಡಿ ಅವರು ತಮ್ಮ ಪುತ್ರಿ ಬ್ರಹ್ಮಿಣಿಯನ್ನು ರಾಜೀವ್ ರೆಡ್ಡಿ ಅವರೊಂದಿಗೆ ಬಹಳ ಸಡಗರದಿಂದ ವಿವಾಹ ಮಾಡಿಕೊಡಲಾಗಿತ್ತು. ಮದುವೆ ಕಾರ್ಯಗಳು 5 ದಿನಗಳ ಕಾಲ ನಡೆದವು. ಇದರಲ್ಲಿ 50 ಸಾವಿರಕ್ಕೂ ಹೆಚ್ಚು ಅತಿಥಿಗಳು ಇದ್ದರು. ಮಾಧ್ಯಮ ವರದಿಗಳ ಪ್ರಕಾರ ಬ್ರಹ್ಮಿಣಿ 17 ಕೋಟಿ ರೂಪಾಯಿ ಮೌಲ್ಯದ ಸುಂದರ ಕಂಜೀವರಂ ಸೀರೆಯನ್ನು ಧರಿಸಿದ್ದರು. ಅಷ್ಟೇ ಅಲ್ಲ, ಅವರ ಆಭರಣದ ಬೆಲೆ 90 ಕೋಟಿ ರೂ. ಇತ್ತಂತೆ. ಇಡೀ ಮದುವೆಗೆ 550 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತದೆ.
ಸೌತ್ ಚಿತ್ರರಂಗದ ಖ್ಯಾತ ನಟ ಸೂರ್ಯ ನಟಿ ಜ್ಯೋತಿಕಾ ಅವರನ್ನು ವಿವಾಹವಾದರು. ಮಾಧ್ಯಮಗಳ ವರದಿ ಪ್ರಕಾರ ಜ್ಯೋತಿಕಾ ತಮ್ಮ ಮದುವೆಗೆ ಸುಮಾರು 3 ಲಕ್ಷ ರೂ. ಬೆಲೆಯ ಸೀರೆಯನ್ನು ಉಟ್ಟಿದ್ದರು. ಮದುವೆಗೆ ದಕ್ಷಿಣ ಚಿತ್ರರಂಗದ ಎಲ್ಲಾ ದೊಡ್ಡ ವ್ಯಕ್ತಿಗಳು ಆಗಮಿಸಿದ್ದರು.
ಈ ಪಟ್ಟಿಯಲ್ಲಿ ಮುಂದಿನ ಹೆಸರು ಸೌತ್ ಸೂಪರ್ ಸ್ಟಾರ್ ಜೂನಿಯರ್ ಎನ್ ಟಿಆರ್ ಅವರದ್ದು. ಇವರ ಪತ್ನಿ ಲಕ್ಷ್ಮಿ ಪ್ರಸಿದ್ಧ ಉದ್ಯಮಿ ಶ್ರೀ ನಾರ್ಣೆ ಶ್ರೀನಿವಾಸ ರಾವ್ ಅವರ ಪುತ್ರಿ. ಮಾಧ್ಯಮಗಳ ವರದಿ ಪ್ರಕಾರ ಲಕ್ಷ್ಮಿ ಮದುವೆ ಸೀರೆಗೆ 1 ಕೋಟಿ ರೂ. ಬೆಲೆಯಂತೆ. ಅಷ್ಟೇ ಅಲ್ಲ ಮದುವೆ ಮಂಟಪವನ್ನು 18 ಕೋಟಿ ರೂ.ಖರ್ಚು ಮಾಡಿ ಸಿದ್ಧಪಡಿಸಲಾಗಿದೆ. ಈ ಮದುವೆಗೆ ಸುಮಾರು 100 ಕೋಟಿ ರೂ.ಖರ್ಚಾಗಿದೆ.
ಸ್ನೇಹಾ ರೆಡ್ಡಿಯನ್ನು ಮದುವೆಯಾದ ಅಲ್ಲು ಅರ್ಜುನ್ ಎಂಬ ಇನ್ನೊಬ್ಬ ಸೌತ್ ಸೂಪರ್ಸ್ಟಾರ್ ಬಗ್ಗೆ ಮಾತನಾಡೋಣ. ಇವರಿಬ್ಬರೂ ಮಾದಾಪುರದ ಹೈಟೆಕ್ಸ್ ಮೈದಾನದಲ್ಲಿ ಅದ್ದೂರಿಯಾಗಿ ವಿವಾಹವಾದರು. ಈ ಅಮೋಘ ಕ್ಷಣಗಳನ್ನು ಸೆಲೆಬ್ರಿಟಿ ವೆಡ್ಡಿಂಗ್ ಫೋಟೋಗ್ರಾಫರ್ ಜೋಸೆಫ್ ರಾಧಿಕ್ ಸೆರೆಹಿಡಿದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಅಲ್ಲು ಅರ್ಜುನ್ ಅವರ ಮದುವೆಗೆ 40 ಕ್ಕೂ ಹೆಚ್ಚು ಛಾಯಾಗ್ರಾಹಕರನ್ನು ನೇಮಿಸಲಾಗಿತ್ತು. ಇವರ ಮದುವೆಯ ದಿನವೇ ಬಹುತೇಕ ಹೈದ್ರಾಬಾದ್ ಜಾಮ್ ಆಗಿತ್ತು ಎನ್ನಲಾಗಿದೆ.