ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜೀವನಚರಿತ್ರೆ ಆಧಾರಿತ ಚಲನಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನರೇಂದ್ರ ಮೋದಿ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ನಟಿಸಲಿದ್ದಾರೆ.
ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಈಗ ಚಿತ್ರದ ಮೊದಲ ಲುಕ್ ನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ."ವಿವೇಕ್ ಒಬೆರಾಯ್ ಅವರು ' ಪಿಎಂ ನರೇಂದ್ರ ಮೋದಿ' ಎನ್ನುವ ಚಿತ್ರದ ಶೀರ್ಷಿಕೆಯಡಿಯಲ್ಲಿ ಚಿತ್ರದ ಮೊದಲ ಲುಕ್ ನ್ನು 23 ಭಾಷೆಗಳಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಾಡ್ನವಿಸ್ ಅವರ ಮೂಲಕ ಬಿಡುಗಡೆಯಾಯಿತು.. ಸುರೇಶ ಒಬೆರಾಯ್ ಮತ್ತು ಸಂದೀಪ್ ಸಿಂಗ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ "ಎಂದು ಬರೆದುಕೊಂಡಿದ್ದಾರೆ.
Vivek Anand Oberoi [Vivek Oberoi] to star in Narendra Modi biopic, titled #PMNarendraModi... The first look poster was launched in 23 languages by Maharashtra CM Devendra Fadnavis... Directed by Omung Kumar... Produced by Suresh Oberoi and Sandip Ssingh. pic.twitter.com/K0HdjhFVtj
— taran adarsh (@taran_adarsh) January 7, 2019
ಈ ಚಿತ್ರವು ಎಂ.ಸಿ ಮೇರಿ ಕೋಮ್ ಚಿತ್ರವನ್ನು ನಿರ್ದೇಶಿಸಿದ್ದ ಒಮಂಗ್ ಕುಮಾರ್ ಅವರು ಮತ್ತೆ ಜೀವನ ಚರಿತ್ರೆಯ ಆಧಾರದ ಮೇಲೆ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಪ್ರಧಾನಿ ಮೋದಿಯ ಜೀವನವನ್ನು ಆಧರಿಸಿದ ಈ ಚಿತ್ರ 'ಪ್ರಧಾನಿ ನರೇಂದ್ರ ಮೋದಿ' ಎಂದು ಹೆಸರಿಸಲಾಗಿದೆ. ಈ ತಿಂಗಳು ಚಿತ್ರೀಕರಣ ನಡೆಯಲಿದೆ.
This is film is set to create history today with the poster launch of a film based on the life of world leader born in India, a RajYogi in true sense!
Congratulations to this team who is going to be a winning team, eventually ! pic.twitter.com/ydgyRAwD96— Devendra Fadnavis (@Dev_Fadnavis) January 7, 2019
ಈ ವರ್ಷ ಹಲವು ರಾಜಕೀಯ ಬಯೋಪಿಕ್ ಆಧಾರಿತ ಚಿತ್ರಗಳು ತೆರೆಗೆ ಬರುತ್ತಿವೆ ಅದರಲ್ಲಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎನ್ನುವ ಮನಮೋಹನ್ ಸಿಂಗ್ ಅವರ ಚಿತ್ರ ಜೊತೆಗೆ ಬಾಳ್ ಠಾಕ್ರೆ ಕುರಿತ ಚಿತ್ರವು ಕೂಡ ತೆರೆಗೆ ಬರುತ್ತಿದೆ.